ಭಾರತೀಯ ಸೇನೆ ಸದಾ ಯುದ್ಧ ಸನ್ನದ್ಧವಾಗಿದ್ದು, ಎಂಥಹದ್ದೇ ಪರಿಸ್ಥಿತಿ ಎದುರಿಸುವ ಶಕ್ತಿ ಸೇನೆಗಿದೆ ಎಂಬ ಅಮಿತ್ ಶಾ ಹೇಳಿಕ ಇದೀಗ ಚೀನಾ ಹಾಗೂ ಪಾಕಿಸ್ತಾನದಲ್ಲಿ ಸಂಚಲನ ಸೃಷ್ಟಿಸಿದೆ.  ಉಪಚುನಾವಣೆ ಬೆನ್ನಲ್ಲೇ ಹೆಚ್ ಡಿ ಕುಮಾರಸ್ವಾಮಿ ಫೋನ್ ಸಂಭಾಷಣೆ ಲೀಕ್ ಆಗಿದೆ. ಇತ್ತ ಬ್ಯೂಟಿ ಕ್ವೀನ್ ರ್ಯಾಂಪ್ ವಾಕ್ ಬದಲು ರೈಲು ಚಾಲಕಿಯಾದ ರೋಚಕ ಪಯಣ, ಸೌತ್ ನಟಿಯ ನಾಯಿ ಪ್ರೀತಿ ಸೇರಿದಂತೆ ಅಕ್ಟೋಬರ್ 18ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

2ನೇ ಬಾರಿ ನ್ಯೂಜಿಲೆಂಡ್‌ ಪ್ರಧಾನಿಯಾದ ಜೆಸಿಂಡಾ ಆರ್ಡನ್‌ಗೆ ಮೋದಿ ಶುಭಾಶಯ!...

Click and drag to move

 ನ್ಯೂಜಿಲೆಂಡ್ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಅಭೂತಪೂರ್ವ ಜಯ ಸಾಧಿಸಿ ಎರಡನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಧಾನಿ ಜೆಸಿಂಡಾ ಆರ್ಡನ್‌ಗೆ, ಪಿಎಂ ಮೋದಿ ಶುಭ ಕೋರಿದ್ದಾರೆ. 


ಭಾರತೀಯ ಸೇನೆ ಸದಾ ಯುದ್ಧಕ್ಕೆ ಸಿದ್ಧ: ಅಮಿತ್‌ ಶಾ...

Click and drag to move

ಭಾರತೀಯ ಸೇನೆ ಸದಾ ಯುದ್ಧ ಸನ್ನದ್ಧವಾಗಿದ್ದು, ಎಂಥಹದ್ದೇ ಪರಿಸ್ಥಿತಿ ಎದುರಿಸುವ ಶಕ್ತಿ ಸೇನೆಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ‘ಯುದ್ಧ ಸನ್ನದ್ದರಾಗಿರಿ ತಮ್ಮ ದೇಶದ ಯೋಧರಿಗೆ ಕರೆ ಕೊಟ್ಟಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾ, ನಾವು ನಮ್ಮ ಇಂಚಿಂಚೂ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳಲು ಬದ್ಧರಾಗಿದ್ದೇವೆ. ಪ್ರಚೋದನೆಗೆ ತಕ್ಕೆ ಪ್ರತ್ಯುತ್ತರ ನೀಡಲಾಗುವುದು ಎಂದಿದ್ದಾರೆ.

ಐಪಿಎಲ್ 2020: ಸೂಪರ್ ಸಂಡೇ ಫೈಟ್ ಗೆಲ್ಲೋರು ಯಾರು?...

Click and drag to move

ಸೂಪರ್ ಸಂಡೇಯ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಮುಖಾಮುಖಿಯಾಗಲಿವೆ. 

ಐಶ್ವರ್ಯಾ ಶ್ರೀಧರ್; ಕಿರಿ ವಯಸ್ಸಿನಲ್ಲಿಯೇ ಏರಿದ್ದು ಪೋಟೋಗ್ರಫಿಯ ಶಿಖರ...

Click and drag to move

ಭಾರತದ ಕೀರ್ತಿ ಪತಾಕೆಯನ್ನು ಈಕೆ ಬಾನೆತ್ತರಕ್ಕೆ ಹಾರಿಸಿದ್ದಾರೆ. 23 ವರ್ಷದ ಐಶ್ವರ್ಯಾ ಶ್ರೀಧರ್ ವೈಲ್ಡ್ ಲೈಫ್ ಪೋಟೋಗ್ರಫಿಯಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಹಾಗಾದರೆ ಯಾರಿವರು? ಇವರ ಪೋಟೋದಲ್ಲಿನ ವಿಶೇಷತೆ ಏನು?

ಶಿರಾ ಉಪಚುನಾವಣೆ ರಣರಂಗದಲ್ಲಿ ಕುಮಾರಸ್ವಾಮಿ ಫೋನ್ ಸಂಭಾಷಣೆ ಲೀಕ್..!...

Click and drag to move

ಶಿರಾ ಕ್ಷೇತ್ರವನ್ನು ಜೆಡಿಎಸ್ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದೆ. ಈ ವೇಳೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಆಡಿದ ಮಾತುಗಳು ಆಡಿಯೋ ಲೀಕ್ ಆಗಿದೆ. 

Happy Birthday ಕೀರ್ತಿ: ಈ ಸೌತ್ ನಟಿಗೆ ಶ್ವಾನಗಳಂದ್ರೆ ಸಿಕ್ಕಾಪಟ್ಟೆ ಲವ್...

Click and drag to move

ಸೌತ್ ನಟಿ ಕೀರ್ತಿ ಸುರೇಶ್‌ಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ. ಪ್ರೊಡ್ಯೂರ್ ಮಗಳಾದ ಕೀರ್ತಿಗೆ ಸಿನಿಮಾ ಟಚ್ ಚಿಕ್ಕಂದಿನಿಂದಲೇ ಇತ್ತು. ಸೌತ್ ನಟಿಯ ಶ್ವಾನ ಪ್ರೀತಿ | ಇಲ್ನೋಡಿ ಫೋಟೋಸ್

ಮಿಸ್‌ ವರ್ಲ್ಡ್ ಫೈನಲಿಸ್ಟ್ ಈಗ ಟ್ರೈನ್ ಡ್ರೈವರ್..! ಇಲ್ನೋಡಿ ಫೋಟೋಸ್...

Click and drag to move

ಹೆಣ್ಮಕ್ಕಳು ರೈಲು ಓಡಿಸೋದಂದ್ರೆ ಅದು ರೇರ್. ಮೆಟ್ರೋ ರೈಲುಗಳಲ್ಲಿ ಮಹಿಳಾ ಚಾಲಕರಿದ್ದರೆ ಹುಬ್ಬೇರಿಸುತ್ತಾರೆ ಜನ. ತಂದೆ ಸರಕು ಸಾಗಣೆ ಉದ್ಯಮಿಯಾದ್ದರಿಂದ ಅರ್ಶದೀಪ್ ಕೊಲೋಸಲ್ ಟ್ರಕ್ ಸುತ್ತಮುತ್ತಲೇ ಬೆಳೆದವರು. ಅರ್ಶದೀಪ್ ಕೌರ್ ಎಂಬ ಬ್ಯೂಟಿ ಕ್ವೀನ್ ರೈಲಿನ ಚಾಲಕಿಯಾದ ಸ್ಟೋರಿ ನೋಡಿ

ಬೆಟ್ಟ ಗುಡ್ಡ, ನದಿ ಯಾವುದೂ ಲೆಕ್ಕಕ್ಕಿಲ್ಲ: ಆಫ್ ರೋಡ್ ದಿಗ್ಗಜ ಲ್ಯಾಂಡ್ ರೋವರ್ ಡಿಫೆಂಡರ್!...

Click and drag to move

ಹೊಚ್ಚ ಹೊಸ, 21ನೇ ಶತಮಾನದ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಈಗಾಗಲೇ ಭಾರತದಲ್ಲಿ ಬಿಡುಗಡೆಯಾಗಿದೆ. ಆಕರ್ಷಕ ವಿನ್ಯಾಸ, ಗರಿಷ್ಠ ಸುರಕ್ಷತೆ, ಬಲಿಷ್ಠ ಎಂಜಿನ್ ಸೇರಿದಂತೆ ಹತ್ತು ಹಲವು ವಿಶೇಷತೆಗಳು ಈ ಕಾರಿನಲ್ಲಿವೆ. ಟಾಟಾ ಮಾಲೀಕತ್ವದ ಲ್ಯಾಂಡ್ ರೋವರ್ ಕಾರಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಪಿಂಚಣಿ ಹಣ ಮನೆ ಬಾಗಿಲಿಗೆ'...

Click and drag to move

ಜನಪರ ಕಾಳಜಿಯಿಂದ ಫಲಾನುಭವಿಗಳಿಗೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗಿದೆ.

'JDS ನಲ್ಲಿದ್ದವರಿಗೆ ಕೈ ಟಿಕೆಟ್ : ಕಾಂಗ್ರೆಸ್ನಲ್ಲಿದ್ದವರಿಗೆ ಬಿಜೆಪಿ ಟಿಕೆಟ್'...

Click and drag to move

ಶೀಘ್ರದಲ್ಲೇ ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು ಇನ್ನು ರಾಜಕೀಯ ಚಟುವಟಿಕೆಗಳ ಅಬ್ಬರ ಜೋರಾಗಿದೆ.