ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡಿರುವಾಗ, ಅಮೆರಿಕವು ಇರಾನ್‌ನೊಂದಿಗೆ ರಹಸ್ಯ ಮಾತುಕತೆ ನಡೆಸುತ್ತಿದೆ ಎಂಬ ಗುಪ್ತಚರ ವರದಿಗಳಿಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಳವಳಗೊಂಡಿದ್ದಾರೆ. ಈ ಕುರಿತು ಶ್ವೇತಭವನದಿಂದ ಅವರು ಸ್ಪಷ್ಟೀಕರಣ ಕೋರಿದ್ದಾರೆ ಎಂದು ವರದಿಯಾಗಿದೆ.

ಇಸ್ರೇಲ್‌ಗೆ ತಿಳಿಯದೇ ಇರಾನ್ ಜೊತೆ ಅಮೆರಿಕಾ ರಹಸ್ಯ ಮಾತುಕತೆ

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧ ಉಲ್ಬಣಗೊಳ್ಳುತ್ತಿರುವಾಗ ಅಮೆರಿಕ ಆಡಳಿತವು ಇರಾನ್ ಜೊತೆ ರಹಸ್ಯ ಮಾತುಕತೆ ನಡೆಸುತ್ತಿದೆಯೇ ಎಂಬ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶ್ವೇತಭವನದಿಂದ ಸ್ಪಷ್ಟೀಕರಣ ಕೇಳಿದ್ದಾರೆ ಎಂದು ವರದಿಯಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿನಿಧಿಗಳು ಕದನ ವಿರಾಮದ ಸಾಧ್ಯತೆಯ ಬಗ್ಗೆ ಇರಾನಿನ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದಾರೆ ಎಂಬ ಮಾಹಿತಿ ಇಸ್ರೇಲ್ ಗುಪ್ತಚರ ಇಲಾಖೆಗೆ ದೊರೆತ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದ್ದು, ಈ ಸುದ್ದಿಯನ್ನು ಅಮೆರಿಕದ ಸುದ್ದಿವಾಹಿನಿ 'ಆಕ್ಸಿಯೋಸ್' ವರದಿ ಮಾಡಿದೆ.

Add Asianetnews Kannada as a Preferred SourcegooglePreferred

ಸೋಮವಾರ ಶ್ವೇತಭವನದ ಅಧಿಕಾರಿಗಳಿಗೆ ನೇರವಾಗಿ ಕರೆ ಮಾಡಿದ ನೆತನ್ಯಾಹು, ಇರಾನ್ ಜೊತೆ ಯಾವುದೇ ರೀತಿಯ ಸಂದೇಶ ಕಳುಹಿಸುವಿಕೆ ಅಥವಾ ಮಾತುಕತೆ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದರು. ಇಸ್ರೇಲ್ ಯುದ್ಧದ ಗುರಿಗಳನ್ನು ಸಾಧಿಸುವ ಮೊದಲು ಅಮೆರಿಕ ಏಕಪಕ್ಷೀಯವಾಗಿ ಕದನ ವಿರಾಮ ಒಪ್ಪಂದವನ್ನು ತಲುಪುವುದೋ ಎಂಬುದು ಇಸ್ರೇಲ್ ಕಳವಳ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ಆದರೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರಿಗೆ, ಇರಾನ್ ಜೊತೆ ಯಾವುದೇ ಮಾತುಕತೆ ನಡೆಸುತ್ತಿಲ್ಲ ಎಂದು ಶ್ವೇತಭವನದ ಮೂಲಗಳು ಭರವಸೆ ನೀಡಿ ಇಸ್ರೇಲ್ ಅನ್ನು ಕತ್ತಲೆಯಲ್ಲಿಟ್ಟಿವೆ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳು, ಹಾಸ್ಟೆಲ್‌ಗಳಲ್ಲಿ ದಿಢೀರ್ ಡ್ರಗ್ ಡೆಸ್ಟ್: ಸಿಕ್ಕಿಬಿದ್ದ ವಿದ್ಯಾರ್ಥಿಗಳೆಷ್ಟು?

ಈ ನಡುವೆ ಯುದ್ಧ ಪ್ರಾರಂಭವಾಗುವ ಮೊದಲು ಕಳೆದ ವಾರ ಜಿನೀವಾದಲ್ಲಿ ನಡೆದ ಮಾತುಕತೆಗಳು ವಿಫಲವಾಗಿವೆ ಎಂದು ಮೊದಲೇ ವರದಿಗಳಿದ್ದವು. ಇರಾನ್‌ನ ಪರಮಾಣು ಕಾರ್ಯಕ್ರಮದ ಬಗ್ಗೆ ಟ್ರಂಪ್ ತಮ್ಮ ನಿಲುವು ಬದಲಾಗದೆ ಇದ್ದ ಕಾರಣ ಮಿಲಿಟರಿ ಕ್ರಮಕ್ಕೆ ಆದೇಶಿಸಿದರು. ಆದರೆ ಯುದ್ಧವು ಐದನೇ ದಿನಕ್ಕೆ ಕಾಲಿಡುತ್ತಿದ್ದಂತೆ, ಇಸ್ರೇಲ್ ತನ್ನ ಮಿತ್ರ ರಾಷ್ಟ್ರವಾದ ಅಮೆರಿಕವು ಇರಾನ್‌ನೊಂದಿಗೆ ತನಗೆ ತಿಳಿಯದೆ ಸಮಾನಾಂತರ ಮಾತುಕತೆಗಳನ್ನು ನಡೆಸುತ್ತಿದೆಯೇ ಎಂದು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮಿತ್ರ ರಾಷ್ಟ್ರದ ಬಗ್ಗೆ ಇಸ್ರೇಲ್‌ಗೆ ಅನುಮಾನ ಮೂಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಹಾಸನ ಬಾಗಲಕೋಟೆಯಲ್ಲಿ ಲೋಕಾಯುಕ್ತ ದಾಳಿ: ಲೋಕಾ ಅಧಿಕಾರಿಗಳಿಗೆ ಮನೆ ಬಾಗಿಲು ತೆರೆಯದ ಇಂಜಿನಿಯರ್ ಸತ್ಯಾನಾರಾಯಣ