ಐಶ್ವರ್ಯಾ ಶ್ರೀಧರ್; ಕಿರಿ ವಯಸ್ಸಿನಲ್ಲಿಯೇ ಏರಿದ್ದು ಪೋಟೋಗ್ರಫಿಯ ಶಿಖರ
ನವದೆಹಲಿ(ಅ. 17) ಭಾರತದ ಕೀರ್ತಿ ಪತಾಕೆಯನ್ನು ಈಕೆ ಬಾನೆತ್ತರಕ್ಕೆ ಹಾರಿಸಿದ್ದಾರೆ. 23 ವರ್ಷದ ಐಶ್ವರ್ಯಾ ಶ್ರೀಧರ್ ವೈಲ್ಡ್ ಲೈಫ್ ಪೋಟೋಗ್ರಫಿಯಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಹಾಗಾದರೆ ಯಾರಿವರು? ಇವರ ಪೋಟೋದಲ್ಲಿನ ವಿಶೇಷತೆ ಏನು? ನೋಡಿಕೊಂಡು ಬರೋಣ
ಎಂಭತ್ತು ದೇಶಗಳಲ್ಲಿ ನಡೆದ ಸುಮಾರು 50 ಸಾವಿರ ಸ್ಪರ್ಧೆಗಳಲ್ಲಿ ಇವರ ಪೋಟೋ ಪ್ರವೇಶ ಪಡೆದುಕೊಂಡಿದೆ.
ಅಕಶೇರುಕಗಳು ವರ್ತನೆಗಳು ಎಂಬ ಆಧಾರದಲ್ಲಿ ಇವರು ತೆಗೆದ ಪೋಟೋ ಬಹುಮಾನ ಪಡೆದುಕೊಂಡಿದೆ.
ನ್ಯಾಚುರಲ್ ಹಿಸ್ಟ್ರಿ ಮ್ಯೂಸಿಯಂ ಲಂಡನ್ ಅಕ್ಟೋಬರ್ 13 ರಂದು ಬಹುಮಾನ ಘೋಷಣೆ ಮಾಡಿದೆ.
ಮ್ಯೂಸಿಯಂನ 56 ನೇ ವರ್ಷದ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಲೈಟ್ಸ್ ಆಫ್ ಪಾಶನ್ ಎಂದು ಇವರು ಟೈಟಲ್ ನೀಡಿದ್ದ ಪೋಟೋಕ್ಕೆ ಪ್ರಶಸ್ತಿ ದಕ್ಕಿದೆ.
ಭಾರತದ ಮಟ್ಟಿಗೆ ಈ ಪ್ರಶಸ್ತಿಗೆ ಪಾತ್ರವಾದ ಅತಿ ಕಿರಿಯ ಮಹಿಳೆ ಎಂಬ ಶ್ರೇಯಕ್ಕೆ ಪಾತ್ರವಾಗಿದ್ದಾರೆ.
ಕ್ಯಾನೋನ್ ಡಿಎಸ್‌ಎಲ್‌ಆರ್ ಇಒಎಸ್-ಐಡಿಎಕ್ಸ್ ಮಾರ್ಕ್ 2 ಕ್ಯಾಮರಾದಲ್ಲಿ ಸೆರೆ ಹಿಡಿದ ಚಿತ್ರಕ್ಕೆ ಪುರಸ್ಕಾರ ಲಭ್ಯವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಧನ್ಯವಾದ ಹೇಳಿರುವ ಐಶ್ವರ್ಯ ಇದು ಭಾರತಕ್ಕೆ ಸಂದ ಗೌರವವಾಗಿದ್ದು ನನಗೆ ಹೆಮ್ಮೆಯ ಕ್ಷಣ ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದಿದ್ದಾರೆ.
ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಐಶ್ವರ್ಯಾ ಅವರಿಗೆ ಪೋಟೋಗ್ರಫಿಯಲ್ಲಿ ಅಪಾರ ಆಸಕ್ತಿ ಇದೆ.
ಕಳೆದ ವರ್ಷ ಡಯಾನಾ ಪ್ರಿನ್ಸಸ್ ಅವಾರ್ಡ್ ಸಹ ಇವರಿಗೆ ದೊರೆತಿತ್ತು.
ಬಾಂಬೆ ಹೈಕೋರ್ಟ್ ಆಯ್ಕೆ ಮಾಡಿರುವ ಅತಿ ಕಿರಿಯ ವೆಟ್ ಲ್ಯಾಂಡ್ ಐಡೆಂಟಿಫಿಕೇಶನ್ ಕಮೀಟಿಯಲ್ಲೂ ಐಶ್ವರ್ಯಾ ಇದ್ದಾರೆ .