ಬೆಟ್ಟ ಗುಡ್ಡ, ನದಿ ಯಾವುದೂ ಲೆಕ್ಕಕ್ಕಿಲ್ಲ: ಆಫ್ ರೋಡ್ ದಿಗ್ಗಜ ಲ್ಯಾಂಡ್ ರೋವರ್ ಡಿಫೆಂಡರ್!
ಹೊಚ್ಚ ಹೊಸ, 21ನೇ ಶತಮಾನದ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಈಗಾಗಲೇ ಭಾರತದಲ್ಲಿ ಬಿಡುಗಡೆಯಾಗಿದೆ. ಆಕರ್ಷಕ ವಿನ್ಯಾಸ, ಗರಿಷ್ಠ ಸುರಕ್ಷತೆ, ಬಲಿಷ್ಠ ಎಂಜಿನ್ ಸೇರಿದಂತೆ ಹತ್ತು ಹಲವು ವಿಶೇಷತೆಗಳು ಈ ಕಾರಿನಲ್ಲಿವೆ. ಟಾಟಾ ಮಾಲೀಕತ್ವದ ಲ್ಯಾಂಡ್ ರೋವರ್ ಕಾರಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ಹೊಸ ಲ್ಯಾಂಡ್ ರೋವರ್ ಡಿಫೆಂಡರ್ 21ನೇ ಶತಮಾನಕ್ಕೆ ಹೊಸದಾಗಿ ಮರು ಆವಿಷ್ಕರಿಸಲಾಗಿದೆ, ಹೊಸ ವಿನ್ಯಾಸ ಜೊತೆಗೆ ಹೊಚ್ಚಹೊಸ ತಂತ್ರಜ್ಞಾನಗಳು ಮತ್ತು ಸಾಮರ್ಥ್ಯದೊಂದಿಗೆ ಬಿಡುಗಡೆಯಾಗಿದೆ.
ಹೊಸ ಡಿಫೆಂಡರ್ ಕಾರಿನ ಫ್ರಂಟ್ ಹಾಗೂ ರೇರ್ ಓವರ್ ಹ್ಯಾಂಗ್, ಆಲ್ಪೈನ್ ಲಘು ವಿಂಡೋ, ಹಿಂಬದಿ ಟೈಲ್ ಗೇಟ್, ಮತ್ತು ಹೊರಗೆ ಜೋಡೀಸಲಾದ ಹೆಚ್ಚುವರಿ ಚಕ್ರ, ಇವೆಲ್ಲವೂ ಮೂಲ ಮಾದರಿಯ ಗುಣವನ್ನು ಕಾಪಾಡುತ್ತದೆ
ವಾಸ್ತುಶಿಲ್ಪವು ಇದಕ್ಕೆ ಹೋಲುವ ಬಾಡಿ ಆನ್ ಫ್ರೇಂ ವಾಹನಕ್ಕಿಂತ ಮೂರರಷ್ಟು ದೃಢವಾಗಿದೆ, ಕಾನ್ಫಗರೇಬಲ್ ಟೆರ್ರೈನ್ ರೆಸ್ಪಾನ್ಸ್ ಮತ್ತು ಟೆರ್ರನ್ ರೆಸ್ಪಾನ್ಸ್ 2 ಸೌಲಭ್ಯಗಳು 21 ನೇ ಶತಮಾನದ ಗ್ರಾಹಕರಿಗೆ ಹೊಸ ಡಿಫೆಂಡರ್ ನೀಡುತ್ತಿದೆ.
ಮುಂಬದಿಯ ಮಧ್ಯದ ಜಂಪ್ ಸೀಟ್, ಹೆಚ್ಚುವರಿ ದಾಸ್ತಾನು ಸ್ಥಳ, ಕ್ಯಾಬಿನ್ ವಾಕ್ ತ್ರೂ ಮತ್ತು ಹೊಂದಿಸಬಹುದಾದ ಆಸ್ನಗಳು ಇದರ ಉಪಯುಕ್ತ ವಿನ್ಯಾಸವನ್ನು ತೋರಿಸುತ್ತದೆ
ಡಿಫೆಂಡರ್ ನಲ್ಲಿದೆ ಹೊಸ ಇನ್ಫೊಟೈನ್ಮೆಂಟ್ ವ್ಯವಸ್ಥೆ, ಇದರಲ್ಲಿ ನವೀನ ಸಂಪರ್ಕ ಸಾಧನಗಳು, ಜೊತೆಗೆ 25.4 ಸೆಂ.ಮೀ (10)ಟಚ್ ಸ್ಕ್ರೀನ್, ಮತ್ತು ವರ್ಗದಲ್ಲಿ ಅಗ್ರವಾದ ತಂತ್ರಜ್ಞಾನಗಳಾದ ಕ್ಲಿಯರ್ ಸೈಟ್ ರೇರ್ ಮತ್ತು ಗ್ರೌಂಡ್ ವ್ಯು, 3ಡಿ ಸರೌಂಡ್ ಕ್ಯಾಮೆರಾ ಹೊಂದಿದೆ
ಎಕ್ಸ್ಪ್ಲೊರರ್, ಅಡ್ವೆಂಚರ್ , ಕಂಟ್ರಿ ಮತ್ತು ಅರ್ಬನ್ ಮತ್ತು 170 ವರೆಗೆ ಪ್ರತ್ಯೇಕ ಪರಿಕರಗಳು ಲಭ್ಯವಿದೆ; ಇವು ಗ್ರಾಹಕರಿಗೆ ತಮ್ಮ ಡಿಫೆಂಡರ್ ಅನ್ನು ವೈಯಕ್ತೀಕರಿಸಲು ಸಾಧ್ಯವಾಗಿಸಿದೆ
ಡಿಫೆಂಡರ್ 110 ನ ವಿತರಣೆ ಆರಂಭವಾಗಿದ್ದು, ವಾಹನದ ದರ ರೂ. 79.94 ಲಕ್ಷದಿಂದ ಆರಂಭವಾಗಿದೆ. ಡಿಫೆಂಡರ್ 90 ಗೆ ಬುಕಿಂಗ್ ತೆರೆದಿದ್ದು, ಇದರ ದರ ರೂ. 73.98 ಲಕ್ಷಗಳಿಂದ ಆರಂ(ಎಕ್ಸ್ ಶೋ ರೂಂ)
ಹೊಸ ಡಿಫೆಂಡರ್ ಭಾರತದ ಎಲ್ಲಾ 27 ಲ್ಯಾಂಡ್ ರೋವರ್ ಮಳಿಗೆಗಳಲ್ಲಿ ಲಭ್ಯವಿದೆ. ನೂತನ ಡಿಫೆಂಡರ್ ಕಾರನ್ನು ಆನ್ಲೈನ್ ನಲ್ಲಿ ಬುಕ್ ಮಾಡಬಹುದು.