ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಮತ್ತೆ ಮಹಾ ಕುಸಿತ! ಇವತ್ತಿನ ಗೋಲ್ಡ್ ರೇಟ್ ಎಷ್ಟು?
ಬೆಂಗಳೂರು: ಇರಾನ್-ಇಸ್ರೇಲ್ ಯುದ್ದ ಆರಂಭವಾಗುತ್ತಿದ್ದಂತೆಯೇ ರಾಕೆಟ್ ವೇಗದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಮೇಲೇರಿತ್ತು. ಆದರೆ ಇದೀಗ ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಾಣುತ್ತಿದೆ. ಮಾರ್ಚ್ 05ರ ಬೆಳಗ್ಗೆ ಚಿನ್ನದ ಹಾಗೂ ಬೆಳ್ಳಿಯಲ್ಲಿ ಮತ್ತೆ ಕುಸಿತ ಕಂಡಿದೆ.

ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್
ಮಧ್ಯಪ್ರಾಚ್ಯದಲ್ಲಿ ಅಘೋಷಿತ ಯುದ್ದ ಪ್ರಾರಂಭವಾಗುತ್ತಿದ್ದಂತೆಯೇ ಚಿನ್ನದ ಮಾರುಕಟ್ಟೆಯಲ್ಲಿ ದಾಖಲೆಯ ಏರಿಕೆ ಕಂಡಿತ್ತು. ಚಿನ್ನದ ಬೆಲೆಯ ಏರಿಕೆಯನ್ನು ಕಂಡ ಗ್ರಾಹಕರು ಸದ್ಯದಲ್ಲೇ 10 ಗ್ರಾಮ್‌ಗೆ ಎರಡು ಲಕ್ಷ ರುಪಾಯಿ ಗಡಿ ದಾಟಬಹುದೇನೋ ಎಂದು ಅತಂಕಕ್ಕೆ ಒಳಗಾಗಿದ್ದರು.
ಮಾರ್ಚ್ 01ರಂದು ದಾಖಲೆಯ ಏರಿಕೆ ಕಂಡಿದ್ದ ಚಿನ್ನದ ಬೆಲೆ
ಯಾಕೆಂದರೆ ಮಾರ್ಚ್ 01ರಂದು 24 ಕ್ಯಾರಟ್ ಒಂದು ಗ್ರಾಮ್ ಚಿನ್ನಕ್ಕೆ ಬರೋಬ್ಬರಿ ದಾಖಲೆಯ 17,309 ರುಪಾಯಿ ತಲುಪಿತ್ತು. ಇನ್ನು ಅದೇ ದಿನ 22 ಕ್ಯಾರಟ್ ಒಂದು ಗ್ರಾಮ್ ಚಿನ್ನಕ್ಕೆ ಬರೋಬ್ಬರಿ 15,865 ರುಪಾಯಿಗಳಾಗಿತ್ತು. ಇದು ಚಿನ್ನ ಖರೀದಿಸುವವರ ನಿದ್ದೆಗೆಡಿಸುವಂತೆ ಮಾಡಿತ್ತು.
ಇಂದು ಚಿನ್ನದ ಬೆಲೆಯಲ್ಲಿ ದೊಡ್ಡ ಕುಸಿತ
ಆದರೆ ಮಾರ್ಚ್ 02ರಿಂದ ನಿರಂತರವಾಗಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಬೆಲೆ ಇಳಿಕೆ ಕಾಣುತ್ತಿರುವುದು ಚಿನ್ನ ಗ್ರಾಹಕರ ಮುಖದಲ್ಲಿ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಇದೀಗ ಮಾರ್ಚ್ 05ರ ಬೆಳಗ್ಗೆಯೂ ವೇಳೆಗೆ ಚಿನ್ನದ ಬೆಲೆಯಲ್ಲಿ ಮತ್ತೊಮ್ಮೆ ಕುಸಿತ ಕಂಡಿದೆ.
24ಕ್ಯಾರಟ್ ಚಿನ್ನದ ಬೆಲೆಯಲ್ಲಿ 10 ಗ್ರಾಮ್‌ಗೆ 980 ರುಪಾಯಿ ಕುಸಿತ
ಇಂದು 24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಬರೋಬ್ಬರಿ 980 ರುಪಾಯಿ ಕುಸಿತ ಕಂಡಿದೆ. ಮಾರ್ಚ್ 05ರ ಬೆಳಗ್ಗೆ 24 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ 16,353 ರುಪಾಯಿಗೆ ಬಂದು ನಿಂತಿದೆ.
22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 10 ಗ್ರಾಮ್‌ಗೆ 900 ರುಪಾಯಿ ಕುಸಿತ
ಇನ್ನೊಂದೆಡೆ 22 ಕ್ಯಾರಟ್ ಆಭರಣ ಚಿನ್ನದ ಬೆಲೆಯಲ್ಲೂ ಭಾರೀ ಇಳಿಕೆ ಕಂಡಿದೆ. ಇಂದು ಒಂದೇ ದಿನ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 10 ಗ್ರಾಮ್‌ಗೆ 900 ರುಪಾಯಿ ಇಳಿಕೆಯಾಗಿದೆ. ಇಂದು ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 14,990 ರುಪಾಯಿಗೆ ಬಂದಿಳಿದಿದೆ.
ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ
ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಕಂಡಿದ್ದರೂ, ಬೆಳ್ಳಿ ಬೆಲೆಯಲ್ಲಿ ಯಾವುದೇ ಇಳಿಕೆ ಕಂಡಿಲ್ಲ. ಅದೇ ರೀತಿ ಬೆಲೆ ಹೆಚ್ಚಳವೂ ಆಗಿಲ್ಲ. ನಿನ್ನೆಯಂತೆ ಇಂದೂ ಒಂದು ಒಂದು ಕೆಜಿ ಬೆಳ್ಳಿಯ ಬೆಲೆ 2,85,000ನಲ್ಲಿಯೇ ಮುಂದುವರೆದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

