ಮನೆ ಬಾಗಿಲಿಗೆ ಅಕ್ಷಯ ತೃತೀಯ ಬಂಗಾರ, ಕಿಚ್ಚನ ಅಭಿಮಾನಿಗಳಿಗೆ ಸಾಂಗ್ ಸಡಗರ; ಏ.25ರ ಟಾಪ್ 10 ಸುದ್ದಿ!
ಕೊರೋನಾ ವೈರಸ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 489ಕ್ಕೆ ಏರಿಕೆಯಾಗಿದೆ. ಇತ್ತ ಗ್ರೀನ್ ಝೋನ್‌ಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ಆದರೆ ಎಣ್ಣೆ ಪ್ರಿಯರು ಮೇ.3ರ ವರೆಗೆ ಕಾಯಲೇಬೇಕು. ವಿಶ್ವವೇ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದ್ದರೆ ಅತ್ತ ಪಾಕಿಸ್ತಾನ ಭಾರತದ ಮೇಲೆ ಮತ್ತೊಂದು ದಾಳಿಗೆ ಸಜ್ಜಾಗಿದೆ. ಕಿಚ್ಚ ಸುದೀಪ್ ಬಹುನಿರೀಕ್ಷಿತ ಚಿತ್ರದ ಸಾಂಗ್ ರಿಲೀಸ್, ಅಕ್ಷಯ ತೃತೀಯ ಚಿನ್ನ ಸೇರಿದಂತೆ ಏಪ್ರಿಲ್ 25ರ ಟಾಪ್ 10 ಸುದ್ದಿ ಇಲ್ಲಿವೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 489 ಕ್ಕೆ ಏರಿಕೆ; ಇಂದು ಒಂದೇ ದಿನ 15 ಮಂದಿಗೆ ಸೋಂಕು...
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 489 ಕ್ಕೇ ಏರಿಕೆಯಾಗಿದೆ. ಇಂದು ಒಂದೇ ದಿನ 15 ಜನರಿಗೆ ಸೋಂಕಿರುವುದು ಪತ್ತೆಯಾಗಿದೆ. ಬೆಳಗಾವಿಯಲ್ಲಿ 6 ಜನರಿಗೆ, ಬೆಂಗಳೂರಿನಲ್ಲಿ 6 ಜನರಿಗೆ ಸೋಂಕು ದೃಢವಾಗಿದೆ. ಮಂಡ್ಯದಲ್ಲಿ 1, ಚಿಕ್ಕಬಳ್ಳಾಪುರದಲ್ಲಿ 1, ದಕ್ಷಿಣ ಕನ್ನಡದಲ್ಲಿ 1 ಸೋಂಕು ಪತ್ತೆಯಾಗಿದೆ.
ಲಾಕ್‌ಡೌನ್ ಸಡಿಲಿಕೆ: ಮದ್ಯದ ಕತೆ ಏನು? ವಿನಾಯಿತಿ ಇದೆಯಾ?.
ಕಟ್ಟುನಿಟ್ಟಿನ ಲಾಕ್‌ಡೌನ್ ಬಳಿಕ ಇದೀಗ ಸರ್ಕಾರ ಸಡಿಲಿಕೆ ನೀಡಿದ್ದು, ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಲಾಕ್‌ಡೌನ್ ಸಡಿಲಿಕೆಯಿಂದ ಶಾಪ್‌ಗಳು ಸೇರಿದಂತೆ ಕೆಲ ವಿನಾಯಿತಿ ನೀಡಲಾಗಿದೆ. ಈ ಸಂಬಂಧ ಸ್ಪಷ್ಟನೆಯೊಂದಿಗೆ ಕೇಂದ್ರ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ದೇಶದ ಜನಕ್ಕೆ ತುಸು ನೆಮ್ಮದಿ: ಲಾಕ್‌ಡೌನ್‌ನಿಂದ ತಪ್ಪಿದ ಭಾರೀ ಅಪಾಯ!...
ಕೊರೋನಾ ವೈರಸ್ ನಿಯಂತ್ರಣಕ್ಕೆ ವಿಧಿಸಲಾಗಿರುವ ಲಾಕ್‌ಡೌನ್ ಸಕಾಲಿಕ ಕ್ರಮ ಕೇಂದ್ರ ಆರೋಗ್ಯ ಸಚಿವಾಲಯ ಪುನರುಚ್ಚರಿಸಿದೆ. ಒಂದು ವೇಳೆ ಲಾಕ್‌ಡೌನ್ ಇರದೇ ಇದ್ದರೆ ಈ ವೇಳೆಗೆ 1 ಲಕ್ಷ ಜನರಿಗೆ ಕೊರೋನಾ ಅಂಟುತ್ತಿತ್ತು ಎಂದು ಅದು ಹೇಳಿದೆ.
26/11 ರೀತಿ ಮತ್ತೊಂದು ದಾಳಿಗೆ ಪಾಕ್ ಸಂಚು.
ಕೊರೋನಾ ವೈರಸ್ ವಿರುದ್ಧ ಒಂದೆಡೆ ಭಾರತ ಹೋರಾಡುತ್ತಿದ್ದರೆ, ಪಕ್ಕದ ಪಾಕಿಸ್ತಾನಕ್ಕೆ ಭಯೋತ್ಪಾದನೆಯದ್ದೇ ಚಿಂತೆ. ಪಾಕಿಸ್ತಾನವು ತನ್ನ ಕಳ್ಳಸಾಗಣೆ ಹಾಗೂ ಭೂಗತ ಗುಂಪುಗಳ ಸಹಾಯದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಧ್ಯಾನದಲ್ಲಿ ಧರ್ಮವಿಲ್ಲ ಆರೋಗ್ಯವಿದೆ ಎಂದ ಟೆನಿಸ್ ದಿಗ್ಗಜ ನೋವಾಕ್ ಜೊಕೋವಿಚ್!
ರೋಜರ್ ಫೆಡರರ್, ರಾಫೆಲ್ ನಡಾಲ್ ಹಾಗೂ ನೋವಾಕ್ ಜೊಕೋವಿಚ್. ಯಾವುದೇ ಪ್ರಶಸ್ತಿ ಈ ಮೂವರನ್ನು ಬಿಟ್ಟು ಇನ್ಯಾರ ಕೈಸೇರಲ್ಲ. ಅಷ್ಟರ ಮಟ್ಟಿಗೆ ಟೆನಿಸ್ ಕ್ಷೇತ್ರವನ್ನು ಆವರಿಸಿಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಟೆನಿಸ್ ದಿಗ್ಗಜನಾಗಿ ಮೆರೆದ ಸರ್ಬಿಯಾದ ನೋವಾಕ್ ಜೊಕೋವಿಚ್ ಸದ್ಯ ವಿಶ್ವದ ನಂ.1 ಪ್ಲೇಯರ್. ಜೊಕೋವಿಚ್ ಕೋರ್ಟ್‌ನಲ್ಲಿ ಟೆನಿಸ್ ಜೊತೆಗೆ ಹಾಸ್ಯ, ಮಿಮಿಕ್ರಿ ಮಾಡುತ್ತಾರೆ. ಒತ್ತಡ ಸಂದರ್ಭವನ್ನು ಸಲೀಸಾಗಿ ನಿಭಾಯಿಸುತ್ತಾರೆ. ಇದೆಲ್ಲಾ ಹೇಗೆ ಸಾಧ್ಯ ಎಂದು ಕೇಳಿದರೆ ಜೊಕೋವಿಚ್ ಉತ್ತರ ಮೆಡಿಟೇಶನ್.
ಕಿಚ್ಚ ಅಭಿಮಾನಿಗಳಿಗೆ ಗುಡ್ ನ್ಯೂಸ್: ರಿಲೀಸ್ ಆಗುತ್ತಿದೆ ಸಖತ್ ಸಾಂಗ್!
ಸ್ಯಾಂಡಲ್‌ವುಡ್ ಅಭಿನಯ ಚಿತ್ರವರ್ತಿ ಕಿಚ್ಚ ಸುದೀಪ್ ಬಹು ನಿರೀಕ್ಷಿತ ಸಿನಿಮಾ'ಕೋಟಿಗೋಬ್ಬ-3' ರಿಲೀಸ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್....
ಅಕ್ಷಯ ತೃತೀಯ: ಮನೆ ಬಾಗಿಲಿಗೇ ಬರಲಿದೆ ಚಿನ್ನ!
ಲಾಕ್‌ಡೌನ್ ಮಧ್ಯೆಯೂ ಏ.26ರಂದು ‘ಅಕ್ಷಯ ತೃತೀಯ’ ಆಚರಿಸುವವರಿಗಾಗಿ ದೇಶದ ಪ್ರಮುಖ ಆಭರಣ ಮಳಿಗೆಗಳು ಆನ್‌ಲೈನ್ ಬುಕ್ಕಿಂಗ್ ಯೋಜನೆ ಆರಂಭಿಸಿವೆ. ಗ್ರಾಹಕರು ಮನೆಯಲ್ಲಿ ಕುಳಿತು ಚಿನ್ನಾಭರಣ ಖರೀದಿಸಬಹುದಾಗಿದ್ದು, ಮನೆ ಬಾಗಿಲಿಗೇ ಚಿನ್ನ ಬರಲಿದೆ!
ಭಾರತದಲ್ಲಿ 2ನೇ ಘಟಕ ತೆರೆಯುತ್ತಿದೆ ಕಿಯಾ ಮೋಟಾರ್ಸ್, ಕರ್ನಾಟಕ ಅಥವಾ ಮಹಾರಾಷ್ಟ್ರ?
ಕಿಯೋ ಮೋಟಾರ್ಸ್ ಭಾರತದಲ್ಲಿ ವ್ಯವಹಾರ ವಿಸ್ತರಣೆಗೆ ಪ್ಲಾನ್ ಹಾಕಿಕೊಂಡಿದೆ. ಸದ್ಯ ಆಂಧ್ರಪ್ರದೇಶದ ಅನಂತಪುರದಲ್ಲಿರುವ ಏಕೈಕ ಘಟಕದಿಂದ ಸಂಪೂರ್ಣ ಭಾರತಕ್ಕೆ ಕಾರುಗಳ ಕಿಯಾ ಕಾರುಗಳ ಸರಬರಾಜು ನಡೆಯುತ್ತಿದೆ. ಅಲ್ಪ ಅವಧಿಯಲ್ಲಿ ಯಶಸ್ಸುಕಂಡಿರುವ ಕಿಯಾ ಇದೀಗ ಕಾರು ಉತ್ಪಾದನೆಗೆ 2ನೇ ಘಟಕ ಆರಂಭಿಸುವ ಸಿದ್ಧತೆ ನಡಿಸಿದೆ.
ಲಕ್ಷಾಂತರ ಮಂದಿಗೆ ಫ್ರೀ ಟ್ರೀಟ್ಮೆಂಟ್: ಕೊರೋನಾ ಸಮರದಲ್ಲಿ ಸೋತ '2 ರೂ. ಡಾಕ್ಟರ್'!
ಕಳೆದ ಐದು ದಶಕಗಳಿಂದ ಲಕ್ಷಾಂತರ ಮಂದಿಗೆ ಉಚಿತ ಚಿಕಿತ್ಸೆ ನಿಡುತ್ತಿದ್ದ ಆಂಧ್ರ ಪ್ರದೇಶದ ಡಾಕ್ಟರ್ ಕೆ. ಎಂ. ಇಸ್ಮಾಯಿಲ್ ಹುಸೇನ್ ಕೊರೋನಾ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. '2 ರೂ. ಡಾಕ್ಟರ್' ಎಂದೇ ಪ್ರಖ್ಯಾತರಾಗಿದ್ದ ಡಾಕ್ಟರ್ ಇಸ್ಮಾಯಿಲ್ ಜನರನ್ನು ಈ ಮಹಾಮಾರಿಯಿಂದ ರಕ್ಷಿಸುವ ಸಮಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಆಂಧ್ರ ಮಾತ್ರವಲ್ಲದೇ, ತೆಲಂಗಾಣ ಹಾಗೂ ಕರ್ನಾಟಕದಲ್ಲೂ ಈ ಡಾಕ್ಟರ್ ಫೇಮಸ್ ಆಗಿದ್ದರು.
ಯೋಗ ಮಾಡುತ್ತಿದ್ದ ಭಾವೀ ಪತಿಯಿಂದ ಮುತ್ತು ಪಡೆದ ಮಾಜಿ Miss Universe ವಿಡಿಯೋ ವೈರಲ್!...
ಮಾಜಿ ಮಿಸ್ ಇಂಡಿಯಾ ಹಾಗೂ ಮಿಸ್ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡ ಬಾಲಿವುಡ್ ನಟಿ ಯೋಗ ಮಾಡುತ್ತಿದ್ದ ಪತಿಯಿಂದ ಪಡೆದ ಮುತ್ತಿನ ವಿಡಿಯೋ ವೈರಲ್ ಆಗುತ್ತಿದೆ.