ಧ್ಯಾನದಲ್ಲಿ ಧರ್ಮವಿಲ್ಲ ಆರೋಗ್ಯವಿದೆ ಎಂದ ಟೆನಿಸ್ ದಿಗ್ಗಜ ನೋವಾಕ್ ಜೊಕೋವಿಚ್!
ರೋಜರ್ ಫೆಡರರ್, ರಾಫೆಲ್ ನಡಾಲ್ ಹಾಗೂ ನೋವಾಕ್ ಜೊಕೋವಿಚ್. ಯಾವುದೇ ಪ್ರಶಸ್ತಿ ಈ ಮೂವರನ್ನು ಬಿಟ್ಟು ಇನ್ಯಾರ ಕೈಸೇರಲ್ಲ. ಅಷ್ಟರ ಮಟ್ಟಿಗೆ ಟೆನಿಸ್ ಕ್ಷೇತ್ರವನ್ನು ಆವರಿಸಿಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಟೆನಿಸ್ ದಿಗ್ಗಜನಾಗಿ ಮೆರೆದ ಸರ್ಬಿಯಾದ ನೋವಾಕ್ ಜೊಕೋವಿಚ್ ಸದ್ಯ ವಿಶ್ವದ ನಂ.1 ಪ್ಲೇಯರ್. ಜೊಕೋವಿಚ್ ಕೋರ್ಟ್‌ನಲ್ಲಿ ಟೆನಿಸ್ ಜೊತೆಗೆ ಹಾಸ್ಯ, ಮಿಮಿಕ್ರಿ ಮಾಡುತ್ತಾರೆ. ಒತ್ತಡ ಸಂದರ್ಭವನ್ನು ಸಲೀಸಾಗಿ ನಿಭಾಯಿಸುತ್ತಾರೆ. ಇದೆಲ್ಲಾ ಹೇಗೆ ಸಾಧ್ಯ ಎಂದು ಕೇಳಿದರೆ ಜೊಕೋವಿಚ್ ಉತ್ತರ ಮೆಡಿಟೇಶನ್.
ಸರ್ಬಿಯಾ(ಏ.25): ಕೊರೋನಾ ವೈರಸ್ ಕಾರಣ ಎಲ್ಲಾ ಕ್ರೀಡಾಪಟುಗಳು ಮನೆಯೊಳಗೆ ಬಂಧಿಯಾಗಿದ್ದಾರೆ. ಸರ್ಬಿಯಾದ ನೋವಾಕ್ ಜೊಕೋವಿಚ್ ಕೂಡ ಹೊರತಲ್ಲ. ಮನೆಯೊಳಗೆ ಟೆನಿಸ್ ಆಡುತ್ತಿರುವ ವಿಡಿಯೋವೊಂದನ್ನು ನೋವಾಕ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಜೊಕೋವಿಚ್ ಮೆಡಿಟೇಶನ್ ಕುರಿತು ಮಾತನಾಡಿದ್ದಾರೆ. ಹಲವರು ಧ್ಯಾನ ಕೆಲವು ಧರ್ಮಕ್ಕೆ ಸೀಮಿತ ಎಂದುಕೊಂಡಿದ್ದಾರೆ. ಆದರೆ ಅದು ತಪ್ಪು ಇದರಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯವಿದೆ ಎಂದು ಜೊಕೋವಿಚ್ ಹೇಳಿದ್ದಾರೆ.
ಕೋವಿಡ್ ಸೋಲಿಸಲು ಪ್ರಾಣಾಯಾಮ ಬ್ರಹ್ಮಾಸ್ತ್ರ: ದಿಲ್ಲಿಯ ಮೊದಲ ರೋಗಿ
ಜೀವನದಲ್ಲಿ ತಾಳ್ಮೆ, ಸಹನೆ ರೂಢಿಸಿಕೊಳ್ಳಬೇಕಾದರೆ ಮೆಡಿಟೇಶನ್ ಅವಶ್ಯಕ. ನಾವು ಯಾವುತ್ತೂ ಟೆನಿಸ್‌ನಲ್ಲಿ ತೊಡಗಿಸಿಕೊಂಡಿರುತ್ತೇವೆ. ಇದರ ನಡುವ ನಮಗೆ ಸಾವಿರ ಮಾಹಿತಿಗಳು ಸುದ್ದಿಗಳು, ಫೋನ್, ಟಿವಿ ಮುಖಾಂತರ ತಲುಪುತ್ತದೆ. ನಾವು ಪ್ರತಿ ದಿನ ಗದ್ದಲದಲ್ಲೇ ದಿನ ಕಳೆಯುತ್ತೇವೆ. ಹೀಗಾಗಿ ಮೆಡಿಟೇಶನ್ ತುಂಬಾ ಅವಶ್ಯಕ ಎಂದು ಜೊಕೋವಿಚ್ ಹೇಳಿದ್ದಾರೆ.
ಫೆಡರರ್ to ಜೊಕೊವಿಚ್: ಲಾಕ್‌ಡೌನ್‌ನಿಂದ ಹೊಸ ಆಟ ಆರಂಭಿಸಿದ ಟೆನಿಸ್ ದಿಗ್ಗಜರು!...
ಕಳೆದ 10 ವರ್ಷಗಳಿಂದ ಮೆಡಿಟೇಶನ್ ಮಾಡುತ್ತಿದ್ದೇನೆ. ಇದು ನನಗೆ ಪಂದ್ಯ ಆಡುತ್ತಿರುವ ವೇಳೆ ತುಂಬಾ ಸಹಕಾರಿಯಾಗಿದೆ. ನನ್ನ ಜೀವನಕ್ಕೂ ಸಹಾಯ ಮಾಡಿದೆ. ಯಾಂತ್ರಿಕ ಬದುಕು, ನಗರ ಜೀವನ, ಟ್ರಾಫಿಕ್ ಜಂಜಾಟಗಲ್ಲಿ ಬದುಕು ಮಂದಿಗೆ ಇದು ಅವಶ್ಯಕ ಎಂದು ಜೊಕೋವಿಚ್ ಸಲಹೆ ನೀಡಿದ್ದಾರೆ.
ಪೇಸ್‌ಗೆ ಶುಭಕೋರಿದ ನೋವಾಕ್ ಜೋಕೋವಿಚ್!.