ಲಕ್ಷಾಂತರ ಮಂದಿಗೆ ಫ್ರೀ ಟ್ರೀಟ್ಮೆಂಟ್: ಕೊರೋನಾ ಸಮರದಲ್ಲಿ ಸೋತ '2 ರೂ. ಡಾಕ್ಟರ್'!

ಕೊರೋನಾಗೆ ಬಲಿಯಾದ ಎರಡು ರೂಪಾಯಿ ಡಾಕ್ಟರ್| ಲಕ್ಷಾಂತರ ಮಂದಿ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದ ವೈದ್ಯ| ಡಾಕ್ಟರ್ ಕುಟುಂಬ ಸದಸ್ಯರಿಗೂ ಕೊರೋನಾ!

Andhra Pradesh 2 rupee doctor Ismail Hussain dies of coronavirus

ಅಮರಾವತಿ(ಏ.25): ಕಳೆದ ಐದು ದಶಕಗಳಿಂದ ಲಕ್ಷಾಂತರ ಮಂದಿಗೆ ಉಚಿತ ಚಿಕಿತ್ಸೆ ನಿಡುತ್ತಿದ್ದ ಆಂಧ್ರ ಪ್ರದೇಶದ ಡಾಕ್ಟರ್ ಕೆ. ಎಂ. ಇಸ್ಮಾಯಿಲ್ ಹುಸೇನ್ ಕೊರೋನಾ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. '2 ರೂ. ಡಾಕ್ಟರ್' ಎಂದೇ ಪ್ರಖ್ಯಾತರಾಗಿದ್ದ ಡಾಕ್ಟರ್ ಇಸ್ಮಾಯಿಲ್ ಜನರನ್ನು ಈ ಮಹಾಮಾರಿಯಿಂದ ರಕ್ಷಿಸುವ ಸಮಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಆಂಧ್ರ ಮಾತ್ರವಲ್ಲದೇ, ತೆಲಂಗಾಣ ಹಾಗೂ ಕರ್ನಾಟಕದಲ್ಲೂ ಈ ಡಾಕ್ಟರ್ ಫೇಮಸ್ ಆಗಿದ್ದರು. 

ಅಚಾನಕ್ಕಾಗಿ ಹದಗೆಟ್ಟ ಆರೋಗ್ಯ ಹಾಗೂ ಉಸಿರಾಟ ಸಮಸ್ಯೆಯಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಈ ಡಾಕ್ಟರ್ ನಿಧನರಾಗಿದ್ದಾರೆ. ಡಾಕ್ಟರ್ ಇಸ್ಮಾಯಿಲ್ ಮೃತಪಟ್ಟ ಬಳಿಕವಷ್ಟೇ ಅವರಿಗೆ ಕೊರೋನಾ ಸೋಂಕಿತ್ತು ಎಂಬ ವಿಚಾರ ದೃಢಪಟ್ಟಿದೆ. ಅವರ ಅಂತಿಮ ದರ್ಶನಕ್ಕೆ ಅನೇಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇತ್ತು. ಆದರೆ ಕೊರೋನಾದಿಂದಾಗಿ ಹೇರಲಾಗಿರುವ ಲಾಕ್‌ಡೌನ್‌ನಿಂದ ಹಾಗೂ ಸರ್ಕಾರದ ನಿಯಮದನುಸಾರ ಕೇವಲ 5-6 ಮಂದಿಯಷ್ಟೇ ಶಾಮೀಲಾಗಿದ್ದರು. ಇನ್ನು ಡಾಕ್ಟರ್ ಇಸ್ಮಾಯಿಲ್ ಕುಟುಂಬ ಸದಸ್ಯರಲ್ಲಿ ಕೆಲವರಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ. ಹೀಗಿರುವಾಗ ಅವರೊಂದಿಗೆ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಭಾರತದಲ್ಲಿ ಕೊರೋನಾ ಅಟ್ಟಹಾಸಕ್ಕೆ ಮೊದಲ ವೈದ್ಯ ಬಲಿ!

ಎರಡು ರೂಪಾಯಿ ಡಾಕ್ಟರ್: ಬಡವರಿಗೆ ಉಚಿತ ಚಿಕಿತ್ಸೆ!

ಬಡವರ ಬಗ್ಗೆ ಹೆಚ್ಚು ಕಾಳಜಿ ಹೊಂಡಿದ್ದ ಡಾಕ್ಟರ್ ಇಸ್ಮಾಯಿಲ್ ಹುಸೇನ್, ಆರ್ಥಿಕವಾಗಿ ಹಿಂದುಳಿದವರು ಚಿಕಿತ್ಸೆ ಪಡೆಯಲು ಬಂದರೆ ಹಣವನ್ನೇ ಪಡೆಯದೆ ಉಚಿತವಾಗೇ ಚಿಕಿತ್ಸೆ ನಿಡುತ್ತಿದ್ದರು. ಆಸ್ಪತ್ರೆಯಲ್ಲಿ ಅವರು ಕುಳಿತುಕೊಳ್ಳುತ್ತಿದ್ದ ಸ್ಥಳದ ಬಳಿ ಒಂದು ಬಾಕ್ಸ್ ಇಡಲಾಗುತ್ತಿತ್ತು. ಯಾರಿಗೆ ಎಷ್ಟು ಸಾಧ್ಯವೋ ಅಷ್ಟು ಹಹಣ ಹಾಕಿ ತೆರಳುತ್ತಿದ್ದರು. ಹಿಂದೆ ಜನರು ಅವರಿಗೆ ಎರಡು ರೂಪಾಯಿ ನೀಡಿ ತೆರಳುತ್ತಿದ್ದರು. ಈ ಕಾರಣದಿಂದ ಹಲವಾರು ಮಂದಿ ಅವರ ಶುಲ್ಕವೇ ಅಷ್ಟು ಎಂದು ಭಾವಿಸಿ ಅವರನ್ನು ಎರಡು ರೂಪಾಯಿ ಡಾಕ್ಟರ್ ಎಂದೇ ಕರೆಯಲಾರಂಭಿಸಿದರು. ಬಳಿಕ ಅವರು ಅದೇ ಹೆಸರಿನಿಂದ ಫೇಮಸ್ ಆದರು. ಕ್ರಮೇಣ ಚಿಕಿತ್ಸೆ ಪಡೆದ ಜನರು ಹತ್ತು ಅಥವಾ ಇಪ್ಪತ್ತು ರೂಪಾಯಿ ನೀಡುತ್ತಿದ್ದರು.

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಸ್ಥಿತಿ ಗಂಭೀರ?

ಜಮಾತ್‌ಗೆ ತೆರಳಿದ್ದವರನ್ನು ಗುರುತಿಸಲು ಸಹಾಯ ಪಡೆದಿದ್ದ ಸರ್ಕಾರ

ದೆಹಲಿಯ ನಿಜಾಮುದ್ದೀನ್ ಮರ್ಕಜ್‌ನಲ್ಲಿ ಆಯೋಜಿಸಲಾಗಿದ್ದ ತಬ್ಲೀಘಿ ಜಮಾತ್‌ನಲ್ಲಿ ಭಾಗವಹಿಸಿ ಮರಳಿದ್ದ ಜನರನ್ನು ಗುರುತಿಸಲು ಸರ್ಕಾರ ಡಾಕ್ಟರ್ ಇಸ್ಮಾಯಿಲ್ ಸಹಾಯ ಪಡೆದಿತ್ತು. ಅವರು ಏಪ್ರಿಲ್ 10ರವರೆಗೆ ಮನೆ ಮನೆಗೆ ತೆರಳಿ ಜಮಾತ್‌ನಲ್ಲಿ ಭಾಗವಹಿಸಿದ್ದವರ ಗುರುತು ಪತ್ತೆ ಹಚ್ಚುವಲ್ಲಿ ತಲ್ಲೀನರಾಗಿದ್ದರು.

ಕೊನೆಯುಸಿರು ಇರುವವರೆಗೆ ಜನರನ್ನು ಕೊರೋನಾದಿಂದ ರಕ್ಷಿಸಿದ್ದರು

ಈ ಸಂಬಂಧ ಪ್ರತಿಕ್ರಿಯಿಸಿದ ವೆಂಕಟೇಶ್ 'ಇಲ್ಲಿ ಹಿಂದೂ ಹಾಗೂ ಮುಸ್ಲಿಂ ಎರಡೂ ಸಮುದಾಯದ ಜನ ಹೇರಳವಾಗಿದ್ದಾರೆ. 1992ರಲ್ಲಿ ಬಾಬ್ರಿ ಮಸೀದಿ ಕೆಡವಿದ  ಪ್ರಕರಣದ ಬಳಿಕ ಅವರು ಈ ಪ್ರದೇಶದಲ್ಲಿ ಎರಡೂ ಧರ್ಮಗಳ ನಡುವೆ ಸೌಹಾರ್ದತೆ ಉಳಿಯುವಲ್ಲಿ ಬಹಳಷ್ಟು ಶ್ರಮಿಸಿದರು. ಅವರು ತಮ್ಮ ಬಳಿ ಚಿಕಿತ್ಸೆಗೆ ಬರುತ್ತಿದ್ದವರನ್ನು ಜಾತಿ, ಮತ ಪರಿಗಣಿಸದೆ ಸಮಾನವಾಗಿ ನೋಡುತ್ತಿದ್ದರು. ಅಲ್ಲದೇ ಸಾಯುವ ಕೆಲ ದಿನಗಳ ಹಿಂದಿನವರೆಗೂ ಅವರು ಕೊರೋನಾದಿಂದ ಹಲವಾರು ಮಂದಿಯನ್ನು ರಕ್ಷಿಸಿದ್ದರು' ಎಂದಿದ್ದಾರೆ.

ಪದ್ಮ ಪ್ರಶಸ್ತಿಯನ್ನು ಏನ್ಮಾಡಿದ್ರು ಗೊತ್ತಾ ಈ 'ಒಂದು ರೂಪಾಯಿ ಡಾಕ್ಟರ್'?

ಜಾತಿ ಧರ್ಮಕ್ಕೆ ಮಣೆ ಹಾಕದ ಡಾಕ್ಟರ್ ಇಸ್ಮಾಯಿಲ್ ಎಲ್ಲರ ಫೇವರಿಟ್

ಡಾಕ್ಟರ್ ಇಸ್ಮಾಯಿಲ್‌ರವರ ಮಿತ್ರರೊಬ್ಬರು ಮಾತನಾಡುತ್ತಾ 'ಇಲ್ಲಿ ಶೇ. 40ರಷ್ಟು ಮುಸ್ಲಿಂ ಜನಸಂಖ್ಯೆ ಇದ್ದರೂ ಅವರು ಯಾವತ್ತೂ ಮುಸಲ್ಮಾನರ ಡಾಕ್ಟರ್ ಎಂದು ಪ್ರಸಿದ್ಧರಾಗಲಿಲ್ಲ. ಅವರು ಇತರ ಧರ್ಮ ಹಾಗೂ ಸಂಪ್ರದಾಯದ ಜನರಿಗೂ ಅಚ್ಚುಮೆಚ್ಚಿನವರಾಗಿದ್ದರು. ಅವರು ಯಾವತ್ತೂ ಯಾವೊfಬ ರಗಿಯ ಹೆಸರನ್ನು ಕೇಳಲಿಲ್ಲ. ಅವರು ಕೇವಲ ಪ್ರಾಯ ಹಾಗೂ ರೋಗ ಲಕ್ಷಣವನ್ನಷ್ಟೇ ಕೇಳುತ್ತಿದ್ದರು' ಎಂದಿದ್ದಾರೆ.

Latest Videos
Follow Us:
Download App:
  • android
  • ios