ಬೆಂಗಳೂರು(ಏ.25): ಲಾಕ್‌ಡೌನ್‌ ಮಧ್ಯೆಯೂ ಏ.26ರಂದು ‘ಅಕ್ಷಯ ತೃತೀಯ’ ಆಚರಿಸುವವರಿಗಾಗಿ ದೇಶದ ಪ್ರಮುಖ ಆಭರಣ ಮಳಿಗೆಗಳು ಆನ್‌ಲೈನ್‌ ಬುಕ್ಕಿಂಗ್‌ ಯೋಜನೆ ಆರಂಭಿಸಿವೆ. ಗ್ರಾಹಕರು ಮನೆಯಲ್ಲಿ ಕುಳಿತು ಚಿನ್ನಾಭರಣ ಖರೀದಿಸಬಹುದಾಗಿದ್ದು, ಮನೆ ಬಾಗಿಲಿಗೇ ಚಿನ್ನ ಬರಲಿದೆ!

ದೇಶದಲ್ಲಿ ಚಿನ್ನಾಭರಣ ಹಾಗೂ ವಜ್ರದ ಆಭರಣಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕಲ್ಯಾಣ್‌ ಜ್ಯುವೆಲ್ಲರಿ, ಜೋಯಾಲುಕ್ಕಾಸ್‌, ಭೀಮಾ ಜ್ಯುವೆಲ್ಲ​ರ್‍ಸ್, ಮಲಬಾರ್‌ ಗೋಲ್ಡ್‌ ಅಂಡ್‌ ಡೈಮಂಡ್ಸ್‌, ಶ್ರೀಸಾಯಿ ಗೋಲ್ಡ್‌ ಪ್ಯಾಲೇಸ್‌, ಜಿಆರ್‌ಟಿ, ಪಿಎನ್‌ಜಿ ಜ್ಯುವೆಲ್ಲ​ರ್‍ಸ್, ತನಿಷ್‌್ಕ, ಸೆನ್ಕೊ ಗೋಲ್ಡ್‌ ಮತ್ತು ಡೈಮಂಡ್ಸ್‌ ಆನ್‌ಲೈನ್‌ನಲ್ಲಿ ಚಿನ್ನ ಖರೀದಿಸುವ ಅವಕಾಶ ಕಲ್ಪಿಸಿವೆ. ಚಿನ್ನದ ಖರೀದಿ ಜತೆಗೆ ಚಿನ್ನದ ಇಟಿಎಫ್‌ಗಳಲ್ಲಿ ಸಹ ಹೂಡಿಕೆ ಮಾಡಬಹುದಾಗಿದೆ.

ಅಕ್ಷಯ ತೃತೀಯ: ಚಿನ್ನ ಆನ್‌ಲೈನಲ್ಲೇ ಮಾರಾಟ!

ಫೋನ್‌ ಪೇನಲ್ಲೂ ಚಿನ್ನ ಮಾರಾಟ:

ಫೋನ್‌ಪೇ ತನ್ನ ಗ್ರಾಹಕರಿಗೆ 24 ಕ್ಯಾರೆಟ್‌ ಶುದ್ಧ ಚಿನ್ನ ಮಾರಾಟ ಆರಂಭಿಸಿದೆ. ಅಲ್ಲದೇ ಖರೀದಿಸಿದ ಚಿನ್ನಕ್ಕೆ ಫೋನ್‌ಪೇ ಮತ್ತು ಪೇಟಿಎಂ ಮೂಲಕವೂ ಹಣ ಪಾವತಿಸಬಹುದಾಗಿದೆ.

ಚಿನ್ನ ಖರೀದಿಗೆ ಪ್ರಮಾಣ ಪತ್ರ!

ಅಕ್ಷಯ ತೃತೀಯ ಶುಭ ದಿನದಂದು ಚಿನ್ನ ಖರೀದಿಸುವವರಿಗೆ ಚಿನ್ನದ ಮಾಲೀಕತ್ವ ಪ್ರಮಾಣ ಪತ್ರ ಸಿಗುತ್ತದೆ. ಇದೇ ಮೊದಲ ಬಾರಿಗೆ ಗ್ರಾಹಕ ಎಷ್ಟುಮೊತ್ತದ ಚಿನ್ನ ಖರೀದಿಸಿದ್ದಾರೆ ಎಂಬುದಕ್ಕೆ ಪ್ರಮಾಣ ಪತ್ರ ನೀಡಲು ಜ್ಯುವೆಲ್ಲರಿಗಳು ನಿರ್ಧರಿಸಿವೆ. ಗ್ರಾಹಕರು ಎರಡು ಗ್ರಾಂ ಮೇಲ್ಪಟ್ಟು ಖರೀದಿಸಬೇಕು. ಅಕ್ಷಯ ತೃತೀಯ ದಿನದಂದು ಚಿನ್ನದ ಮಾಲೀಕತ್ವ ಪ್ರಮಾಣ ಪತ್ರ ತಲುಪುವಂತೆ ಕಳಿಸಲಾಗುತ್ತದೆ.

ಆಹಾರ ಕಿಟ್‌ನಲ್ಲಿ ಸಿಕ್ಕ ಚಿನ್ನದ ಉಂಗುರ: ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಾಲಕ..!

ವಿಶೇಷ ಕೊಡುಗೆಗಳು:

ಜೋಯಾಲುಕ್ಕಾಸ್‌ ಪ್ರತಿ ಗ್ರಾಂ ಮೇಲೆ 50 ರು. ರಿಯಾಯಿತಿ ಹಾಗೂ ವಜ್ರ ಮೌಲ್ಯದ ಮೇಲೆ ಶೇ.20 ರಿಯಾಯಿತಿ ಘೋಷಿಸಿದೆ. ಗ್ರಾಹಕರು ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಮೂಲಕ ಪೇಮೆಂಟ್‌ ಮಾಡಿದರೆ ಪ್ರತಿ ಪಾವತಿ ಮೇಲೆ ಹೆಚ್ಚುವರಿಯಾಗಿ ಶೇ.5 ಕ್ಯಾಶ್‌ಬ್ಯಾಕ್‌ ಪಡೆಯಬಹುದು. ಜೋಯಾಲುಕ್ಕಾಸ್‌ ವೆಬ್‌ಸೈಟ್‌ ಅಥವಾ ಅಮೆಜಾನ್‌ ಇತರೆ ಸೈಟ್‌ಗಳಲ್ಲಿ ಖರೀದಿಸಿದರೆ ವಿಶೇಷ ಗಿಫ್ಟ್‌ ವೋಚರ್‌ ಪಡೆಯುವ ಅವಕಾಶವಿದೆ.

ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್ಸ್‌ ನಲ್ಲಿ ಮೇಕಿಂಗ್‌ ಚಾಜ್‌ರ್‍ನಲ್ಲಿ ಶೇ.30 ಕಡಿತ, ವಜ್ರದ ಮೌಲ್ಯದ ಮೇಲೆ ಶೇ.20ರ ವರೆಗೆ ರಿಯಾಯಿತಿ ದೊರೆಯಲಿದೆ. ಇದಲ್ಲದೆ, ನೀವು ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಮೂಲಕ 15 ಸಾವಿರ ರೂ.ಗಿಂತ ಹೆಚ್ಚು ಮೌಲ್ಯದ ಆಭರಣ ಖರೀದಿಸಿದರೆ ಹೆಚ್ಚುವರಿಯಾಗಿ ಶೇ.5 ಕ್ಯಾಶ್‌ಬ್ಯಾಕ್‌ ಸಿಗÜಲಿದೆ. ಈ ಆಫರ್‌ಗಳನ್ನು ಏ.26ರ ವರೆಗೆ ಪಡೆಯಬಹುದು. ಶ್ರೀಸಾಯಿ ಗೋಲ್ಡ್‌ ಪ್ಯಾಲೇಸ್‌ ಜ್ಯುವೆಲ್ಲರಿಯಲ್ಲಿ ಮೇಕಿಂಗ್‌ನಲ್ಲಿ ಶೇ.25ರಷ್ಟುವಿನಾಯಿತಿ ನೀಡುತ್ತಿದೆ.

ಕೊರೋನಾ ಎಫೆಕ್ಟ್: ಚಿನ್ನಕ್ಕೆ ಬೇಡಿಕೆಯೇ ಇಲ್ಲ!

ದರ ಇಳಿಕೆಯಾದರೆ ಹಣ ವಾಪಸ್‌!

ಬುಕ್‌ ಮಾಡಿದ ದಿನ ಯಾವ ದರ ಇರುತ್ತದೆಯೋ ಆ ದರವನ್ನೇ ಗ್ರಾಹಕರು ಪಾವತಿಸಬೇಕು. ಆದರೆ ಮಳಿಗೆಗೆ ಹೋಗಿ ಚೀಟಿ ತೋರಿಸಿ ಆಭರಣ ಪಡೆಯುವಾಗ ತಾವು ಬುಕ್‌ ಮಾಡಿದ ದರಕ್ಕಿಂತ ಗ್ರಾಂ.ಗೆ ನೂರು ಅಥವಾ ಇನ್ನೂರು ರು. ಕಡಿಮೆಯಾಗಿದ್ದರೆ ಗ್ರಾಹಕರಿಗೆ ಆ ಇಳಿಕೆಯಾದ ಹಣವನ್ನು ಹಿಂದಿರುಗಿಸಲಾಗುವುದು. ಆದರೆ, ದರ ಹೆಚ್ಚಾದರೆ ಗ್ರಾಹಕರು ಮತ್ತೆ ಹಣ ಪಾವತಿಸಬೇಕಿಲ್ಲ ಎಂದು ಮಲಬಾರ್‌ ಗೋಲ್ಡ್‌ ತಿಳಿಸಿದೆ.