ಬಾಲಿವುಡ್‌ ಚಿತ್ರರಂಗದ ಫಾರ್ ಎವರ್ ಯಂಗ್ ನಟಿ ಹಾಗೂ ಸಿಂಗಲ್ ಮದರ್ ಸುಸ್ಮಿತಾ ಸೇನ್‌ ಲಾಕ್‌ಡೌನ್‌ ವೇಳೆ ಮನೆಯಲ್ಲಿ ಪಾರ್ಟ್ನರ್ ಜೊತೆ ಮಾಡುತ್ತಿರುವ ಫಿಟ್ನೆಸ್‌ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ.

ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಸೆಲೆಬ್ರಿಟಿಗಳು ವಿಭಿನ್ನ ರೀತಿಯಲ್ಲಿ ಟೈಂ ಪಾಸ್‌ ಮಾಡುತ್ತಿದ್ದಾರೆ. ಕೆಲವರು ಫಿಟ್ನೆಸ್  ಕಾಪಾಡಿಕೊಳ್ಳಲು ಸಾಹಸ ಮಾಡುತ್ತಿದ್ದಾರೆ. ಇನ್ನು ಕೆಲವರು ಕೆಲಸ, ಅಡುಗೆ ಮಾಡುತ್ತಾ ಮನೆ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದಾರೆ. 

ಮಗಳಿಂದ 'ಆ' ಮಾತು ಕೇಳಿ ಭಾವುಕರಾದ ಸುಶ್ಮಿತಾ ಸೇನ್!

ನಟಿ ಸುಸ್ಮಿತಾ ಸೇನ್‌ ಮತ್ತು  ಬಾಯ್‌ ಫ್ರೆಂಡ್‌ ರೋಹ್ಮನ್‌ ಯೋಗಾಸನಗಳ ಭಂಗಿಗಳನ್ನು ಮಾಡಿ ಆ ನಂತರ ಇಬ್ಬರೂ ರಿಲ್ಯಾಕ್ಸ್‌ ಮಾಡಲು ಕುಳಿತಿದ್ದರು. ಆಗ ರೋಹ್ಮನ್‌ ಸುಸ್ಮಿತಾಗೆ ಕಿಸ್‌ ಮಾಡಿ,  'You are my best GirlFriend' ಎನ್ನುತ್ತಾರೆ. ಈ ವಿಡಿಯೋವನ್ನು ಸುಸ್ಮಿತಾ 'ನೆಮ್ಮದಿಯಾಗಿರಲು ಯೋಗ ಬೆಸ್ಟ್‌ ' ಎಂದು ಅಪ್ಲೋಡ್‌ ಮಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದ್ದು, ಅಭಿಮಾನಿಗಳು ಅವರು ಮಾಡಿದ ಯೋಗ ಸೂಪರ್‌, ಜೋಡಿ ಡೂಪರ್‌ ಎಂದಿದ್ದಾರೆ.

ಆದರೆ, ಇನ್ನೂ ಗರ್ಲ್ ಫ್ರೆಂಡ್ ಎಂದು ಹೇಳುತ್ತಿರುವ ರೋಹ್ಮನ್ ಸುಸ್ಮಿತಾಗೆ ಪತಿ ಆಗುವುದು ಯಾವಾಗ ಎಂಬ ಅನುಮಾನವೂ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ. ಹಲವು ವರ್ಷಗಳಿಂದ ಈ ಜೋಡಿ ಸಹ ಜೀವನ ನಡೆಸುತ್ತಿದ್ದು, ಮದುವೆ ಬಗ್ಗೆ ಆಗಾಗ ಗಾಸಿಪ್‌ಗಳು ಹರಿದಾಡುತ್ತಲೇ ಇರುತ್ತದೆ. 

ಸುಶ್ಮಿತಾ ಸೇನ್ ಬದುಕಬೇಕೆಂದರೆ 8 ಗಂಟೆಗೊಮ್ಮೆ ಸ್ಟೆರಾಯ್ಡ್ ತೆಗೆದುಕೊಳ್ಳಬೇಕಿತ್ತು!

ಭಾರತದಲ್ಲಿ ಮೊತ್ತ ಮೊದಲಿಗೆ ಮಿಸ್ ಯೂನಿವರ್ಸ್ ಗರಿ ಮುಡಿಗೇರಿಸಿಕೊಂಡ ಸುಸ್ಮಿತಾ ಸೇನ್  ಕೆಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದರಾದರೂ, ಯಶಸ್ಸು ಕಂಡಿದ್ದು ಕಡಿಮೆ.  1996ರಲ್ಲಿ ದಸ್ತಕ್ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಈ ಬ್ಯೂಟಿ ಕ್ವೀನ್ ಜೋರ್, ಫಿಜಾ, ಫಿಲ್ಹಾಲ್, ವಾಸ್ತು ಶಾಸ್ತ್ರ, ಪೈಸಾ ವಸೂಲ್, ಚಿಂಗಾರಿ ಮೊದಲು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಭೀವಿ ನಂ.1, ಸಿರ್ಫ್ ತುಮ್ಮ, ಬಸ್ ಇತ್ನಾ ಸಾ ಖ್ವಾಬ್ ಹೈ...ಯಂಥ ಚಿತ್ರಗಳು ಬೆಸ್ಟ್ ಸಪೋರ್ಟಿಂಗ್ ನಟಿ, IIFA ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 

44 ವರ್ಷದ ಸ್ಫುರದ್ರೂಪಿ ಸುಸ್ಮತಾ ಸೇನ್ ದಾಂಪತ್ಯ ಬಂಧನಕ್ಕೆ ಯಾವಾಗ ಕಾಲಿಡುತ್ತಾರೋ ಗೊತ್ತಿಲ್ಲ. ಆದರೆ, ರೀನಿ ಮತ್ತು ಆಲಿಸಾ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದು ಬೆಳೆಸುತ್ತಿದ್ದಾರೆ. ಆದರೆ, ಇದೀಗ ಕೆಲವು ವರ್ಷಗಳಿಂದ ಸುಸ್ಮಿತಾ ಸೇನ್ 29 ವರ್ಷದ ರೋಹ್ಮನ್ ಜೊತೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದು, ಈ ಜೋಡಿ ಹಸೆಮಣೆ ಏರುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ, ಕಳೆದ ವರ್ಷ ಸುಸ್ಮಾತ್ ಪುಟ್ಟ ಗಂಡು ಮಗು  ಹಾಗೂ ತನ್ನ ಕುಟುಂಬದ ಸದಸ್ಯರು ಕಾಲ ಕಳೆಯುತ್ತಿರುವ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದು, ಗಂಡು ಮಗುವನ್ನೂ ದತ್ತು ಪಡೆದುಕೊಂಡಿದ್ದಾರೆಂಬ ಸುದ್ದಿ ಹರಿದಾಡಿತ್ತು. ಆದರೆ, ಈ ವಿಷಯವಾಗಿ ಮತ್ತೆಲ್ಲೂ ಸುದ್ದಿಯಾಗಲೇ ಇಲ್ಲ.