ಅಣ್ಣ-ತಮ್ಮ ಹಾಗೂ ಅಕ್ಕ-ತಂಗಿ ನಡುವಿನ ಲವ್​ ಸ್ಟೋರಿಯ ಕಥಾಹಂದರವನ್ನು ಹೊಂದಿರೋ ಪ್ರೇಮ ಕಾವ್ಯ ಸೀರಿಯಲ್​ ಪ್ರೊಮೋ ಇದೀಗ ರಿಲೀಸ್​ ಆಗಿದ್ದು, ಯಾವ ಸೀರಿಯಲ್​ ಮುಗಿಯಲಿದೆ? 

ಜೀ ಕನ್ನಡ ಮತ್ತು ಕಲರ್ಸ್​ ಕನ್ನಡದಲ್ಲಿ ಹೊಸ ಹೊಸ ಸೀರಿಯಲ್​ಗಳ ಪರ್ವವೇ ಶುರುವಾಗಿದೆ. ಒಂದಾದ ಮೇಲೊಂದರಂತೆ ಸೀರಿಯಲ್​ಗಳು ಬರುತ್ತಲೇ ಇವೆ. ಹೊಸ ಸೀರಿಯಲ್​​ ಬಂದ ತಕ್ಷಣ ಹಳೆಯ ಸೀರಿಯಲ್​ ಟಿಆರ್​ಪಿ ಕುಸಿತವೂ ಕಾಣುವ ಘಟನೆಗಳೂ ನಡೆಯುತ್ತವೆ. ಇದು ಹೊಸ ಸೀರಿಯಲ್ ವೀಕ್ಷಿಸಲು ವೀಕ್ಷಕರು ಎಷ್ಟು ಕಾತರರಾಗಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಅದೇ ರೀತಿ ಇದೀಗ ಕಲರ್ಸ್​ ಕನ್ನಡದಲ್ಲಿ ಪ್ರೇಮ ಕಾವ್ಯ ಎನ್ನುವ ಹೊಸ ಸೀರಿಯಲ್​ ಶುರುವಾಗಲಿದ್ದು, ಅದರ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಅಂದಹಾಗೆ, ಸದ್ಯ ಯಾವ ಸೀರಿಯಲ್​ ಮುಗಿಯಲಿದೆ,, ಇದು ಯಾವಾಗ ಆರಂಭವಾಗಲಿದೆ ಎಂದು ಇನ್ನಷ್ಟೇ ನೋಡಬೇಕಿದೆ.

ಅಣ್ಣ-ತಮ್ಮ ಹಾಗೂ ಅಕ್ಕ-ತಂಗಿ ನಡುವಿನ ಲವ್​ ಸ್ಟೋರಿ ಇದು. ನಾಯಕ ಹಾಗೂ ನಾಯಕಿ ಇಬ್ಬರೂ ನಟ ದರ್ಶನ್ ಅಭಿಮಾನಿಗಳು. ನೆಚ್ಚಿನ ನಟನ ಸಿನಿಮಾ ನೋಡೋಕೆ ಚಿತ್ರಮಂದಿರಕ್ಕೆ ಬಂದಾಗಲೂ ಲವ್ ಟ್ರ್ಯಾಕ್ ನಡೆಯುವಂತೆ ಪ್ರೋಮೊದಲ್ಲಿ ಈ ಹಿಂದೆ ತೋರಿಸಲಾಗಿತ್ತು. ಗಜ ಸಿನಿಮಾ ರೀ-ರಿಲೀಸ್ ಆಗಿ ಚಿತ್ರಮಂದಿರದ ಮುಂದೆ ಕಟೌಟ್ ಹಾಕಿ ಅಭಿಮಾನಿಗಳ ಸಂಭ್ರಮಾಚರಣೆಯನ್ನು ತೋರಿಸಲಾಗಿತ್ತು. ಇದು ಸಹಜವಾಗಿಯೇ ನಟ ದರ್ಶನ್ ಅಭಿಮಾನಿಗಳ ಗಮನ ಸೆಳೆದಿತ್ತು.

ಆದರೆ ಇದೀಗ ಹೊಸ ಪ್ರೊಮೋ ಹಂಚಿಕೊಳ್ಳಲಾಗಿದೆ. ಇದರಲ್ಲಿ ನಾಯಕಿ ತನ್ನ ಗಂಡನಾಗುವವನ ಬಗ್ಗೆ ಸ್ವಾಮೀಜಿ ಬಳಿ ಕೇಳುತ್ತಾಳೆ. ಆತ ಹೀಗೆ, ಈ ರೀತಿಯಾಗಿ ಆತ ನಿನಗೆ ಸಿಗುತ್ತಾನೆ ಎನ್ನುತ್ತಾನೆ. ಆದರೆ... ಎಂದು ಹೇಳುವಷ್ಟರಲ್ಲಿಯೇ ಆಕೆ, ಮುಂದಿನದ್ದು ನನಗೆ ಬೇಡ, ಮುಂದೆ ಮದ್ವೆಯಾಗಿ ಮಕ್ಕಳಾಗುತ್ತದೆ ಎಂದು ಹೇಳಿ ಸ್ವಾಮೀಜಿ ಹೇಳುವುದನ್ನೂ ಕೇಳದೇ ಓಡಿ ಹೋಗುತ್ತಾಳೆ. ಅಲ್ಲಿ ನಾಯಕ ಸಿಗುತ್ತಾನೆ. ಇದರ ಪ್ರೊಮೊ ಹಂಚಿಕೊಳ್ಳಲಾಗಿದೆ. ಇನ್ನು ಈ ಧಾರಾವಾಹಿಯ ತಾರೆಯರ ಕುರಿತು ಹೇಳುವುದಾದರೆ, ಕಾವೇರಿ ಕನ್ನಡ ಮೀಡಿಯಂ ಬಳಿಕ ಪ್ರಿಯಾ ಆಚಾರ್ ಮತ್ತೆ ಹಳ್ಳಿ ಗೆಟಪ್​ನ ಲಂಗಾ ದಾವಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮೃಧು ಸ್ವಭಾವದ ಯುವಕನಾಗಿ ವಿಕಾಸ್ ಕಾಣಿಸಿಕೊಂಡಿದ್ದಾರೆ. ಆತನಿಗೆ ಚೈತ್ರಾ ಜೋಡಿಯಾಗಿದ್ದಾರೆ. ತಮಿಳಿನ ಸಿಂಧು ಭೈರವಿ ಧಾರಾವಾಹಿ ರೀಮೆಕ್ ಪ್ರೇಮ ಕಾವ್ಯ ಧಾರಾವಾಹಿ ಎನ್ನಲಾಗುತ್ತಿದೆ.

ಅಷ್ಟಕ್ಕೂ, ಕಲರ್ಸ್ ಕನ್ನಡದಲ್ಲಿ ಒಂದರ ಹಿಂದೆ ಒಂದರಂತೆ ಹೊಸ ಹೊಸ ಧಾರಾವಾಹಿ, ರಿಯಾಲಿಟಿ ಶೋಗಳು ಬರುತ್ತಿವೆ. ಇತ್ತೀಚೆಗಷ್ಟೆ ಲಕ್ಷ್ಮೀ ಬಾರಮ್ಮ, ಮಜಾ ಟಾಕೀಸ್ ಬಾಯ್ಸ್ vs ಗರ್ಲ್ಸ್ ಶೋಗಳು ಮುಕ್ತಾಯಕಂಡಿವೆ. ಶುರುವಾದ ಆರೇ ತಿಂಗಳಿನಲ್ಲಿ ವಧು ಧಾರಾವಾಹಿ ಕೂಡ ಕೊನೆಯಾಗಿದೆ. ಇದರ ಬೆನ್ನಲ್ಲೆ ಕಲರ್ಸ್ ಹೊಸ ಹೊಸ ಧಾರಾವಾಹಿ, ಶೋನೊಂದಿಗೆ ಬರುತ್ತಿದೆ. ಈಚೆಗಷ್ಟೇ ನಂದಗೋಕುಲ ಎಂಬ ಹೊಸ ಧಾರಾವಾಹಿ ಪ್ರಾರಂಭವಾಯಿತು. ಜೊತೆಗೆ, ವೀಕೆಂಡ್​ನಲ್ಲಿ ಕ್ವಾಟ್ಲೆ ಕಿಚನ್ ಶುರುವಾಗಿದ್ದು, ಈಗ ಯಾವ ಸೀರಿಯಲ್ ಮುಗಿಯಲಿದೆ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ.

View post on Instagram