ಆ್ಯಂಕರ್​ ಅನುಶ್ರೀ ಸದ್ಯ ಮದುವೆಯ ಮೂಡ್​ನಲ್ಲಿದ್ದು, ಮಹಾನಟಿ ವೇದಿಕೆಯಲ್ಲಿ ಅವರಿಗೆ ಪ್ರಪೋಸ್​ ಪ್ರಶ್ನೆಯೊಂದು ಎದುರಾಗಿದೆ. ಪ್ರಪೋಸ್​ ಒಗಟಿನ ಪ್ರಶ್ನೆಗೆ ಅನುಶ್ರೀ ಹೇಳಿದ್ದೇನು? 

ಸದ್ಯ ಆ್ಯಂಕರ್​ ಅನುಶ್ರೀ ಅವರು ಸದ್ಯ ಮದುವೆಯ ಮೂಡ್​ನಲ್ಲಿ ಇದ್ದಾರೆ. ಅಷ್ಟಕ್ಕೂ ಆ್ಯಂಕರ್​ ಅನುಶ್ರೀ ಎಂದರೆ ಸಾಕು, ಅವರ ಅಸಂಖ್ಯ ಅಭಿಮಾನಿಗಳಿಗೆ ಒಂದೇ ಚಿಂತೆ. ಅದು ಅವರ ಮದುವೆಯ ಬಗ್ಗೆಯಾಗಿತ್ತು. ಅನುಶ್ರೀ ಅವರು ತಲೆ ಕೆಡಿಸಿಕೊಳ್ಳದಷ್ಟು ಹೆಚ್ಚು ತಲೆ ಕೆಡಿಸಿಕೊಂಡಿದ್ದರು ಅವರ ಫ್ಯಾನ್ಸ್​. ಇದೇ ವರ್ಷ ತಮ್ಮ ಮದುವೆ ಆಗುತ್ತದೆ ಎನ್ನುವ ಮೂಲಕ, ಹಲವು ವರ್ಷಗಳಿಂದ ಅಭಿಮಾನಿಗಳು ಕೇಳ್ತಿದ್ದ ಪ್ರಶ್ನೆಗೆ ಉತ್ತರ ಕೊಟ್ಟಿದ್ದರು ನಟಿ. ಕಾರ್ಯಕ್ರಮವೊಂದರಲ್ಲಿ ನಟಿ ಮಲೈಕಾ ವಸುಪಾಲ್​ ಅವರು ನಿಮ್ಮ ಗಂಡ ಹೇಗಿರಬೇಕು ಎಂದು ಅನುಶ್ರೀ ಅವರನ್ನು ಪ್ರಶ್ನಿಸಿದ್ದಾಗ, ಅನುಶ್ರೀ ಅವರು, ಹುಡುಗ ಬಹಳ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು ಎಂದಿದ್ದರು. ಈ ವರ್ಷ 'ಅನುಪತಿ' ಬಂದೇ ಬರ್ತಾನೆ ಎಂದೂ ಹೇಳಿದ್ದರು. ಅದೇ ರೀತಿ ಅನುಶ್ರೀ ಅವರ ಮದುವೆ ಆಗಸ್ಟ್​ 28ರಂದು ಮದುವೆಯಾಗುತ್ತಿರುವುದಾಗಿ ಹೇಳಲಾಗಿದೆ. ಅವರ ಹುಡುಗನ ಬಗ್ಗೆಯೂ ಇದಾಗಲೇ ರಿವೀಲ್​ ಆಗಿದೆ.

ಅದರ ನಡುವೆಯೇ ಮಹಾನಟಿ ರಿಯಾಲಿಟಿ ಷೋನಲ್ಲಿ ಅನುಶ್ರೀ ಅವರು ಆ್ಯಂಕರಿಂಗ್​ ಮಾಡುತ್ತಿದ್ದಾರೆ. ಈ ಷೋನಲ್ಲಿಯೂ ಅನೇಕ ಬಾರಿ ನಟಿಯ ಮದುವೆಯ ಪ್ರಸ್ತಾಪವೂ ಆಗಿದೆ. ಆದರೆ ಇದೀಗ ಸ್ಪರ್ಧಿಯೊಬ್ಬರು ಒಗಟನ್ನು ಕೇಳುವ ಮೂಲಕ ಅದಕ್ಕೂ ಅನುಶ್ರೀ ಮದುವೆಗೂ ಲಿಂಕ್​ ಮಾಡಲಾಗಿದೆ. ಕಬಾಬ್​ ಬಿರಿಯಾನಿಗೆ ಪ್ರಪೋಸ್​ ಮಾಡಲು ಹೋಗುತ್ತದೆ, ಆದರೆ ಮಾಡದೇ ವಾಪಸ್​ ಬಂದುಬಿಡುತ್ತದೆ, ಯಾಕೆ ಎಂದು ಕೇಳಿದ್ದಾರೆ. ಆದರೆ ಇದಕ್ಕೆ ನಿಶ್ವಿಕಾ ನಾಯ್ಡು, ತರುಣ್​ ಸುಧೀರ್​ ಎಲ್ಲಾ ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಮದುವೆಯ ಮೂಡ್​ನಲ್ಲಿ ಇರೋ ಅನುಶ್ರೀ ಥಟ್​ ಎಂದು ಉತ್ತರ ಕೊಟ್ಟಿದ್ದು, ಅದಕ್ಕೆ ಧಮ್​ ಇರಲ್ಲ ಎಂದಿದ್ದಾರೆ. ಒಹ್​ ಇದೇ ಸರಿಯಾದ ಉತ್ತರ ಎಂದು ಸ್ಪರ್ಧಿ ಹೇಳಿದಾಗ ಎಲ್ಲರೂ ಖುಷಿಪಟ್ಟಿದ್ದಾರೆ.

ಒಟ್ಟಿನಲ್ಲಿ ಆ್ಯಂಕರ್​ ಅನುಶ್ರೀಯ ಅಭಿಮಾನಿಗಳಂತೂ ಸಕತ್ ಖುಷಿಯಲ್ಲಿದ್ದಾರೆ. ಅಷ್ಟಕ್ಕೂ, ಇದಾಗಲೇ ತಿಳಿದಿರುವಂತೆ ಅನುಶ್ರೀ ಅವರು ಪುನೀತ್ ರಾಜಕುಮಾರ್ ಪರಿಚಯಿಸಿದ ಹುಡುಗನ ಜೊತೆಯೇ ಮದುವೆಯಾಗುತ್ತಿದ್ದಾರೆ. ಪುನೀತ್​ ಅವರ ʼಗಂಧದಗುಡಿʼ ಡಾಕ್ಯುಮೆಂಟರಿಯ ಇವೆಂಟ್‌ನಲ್ಲಿ ಅನುಶ್ರೀ ನಿರೂಪಣೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಅನುಶ್ರೀ ಹಾಗೂ ರೋಶನ್ ಪರಿಚಯ ಆಗಿತ್ತು. ಇವರಿಬ್ಬರು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು‌. ರೋಶನ್‌ ಅವರು ರಿಯಲ್ ಎಸ್ಟೇಟ್ ಉದ್ಯಮಿ ಎಂದು ಕೂಡ ಹೇಳಲಾಗುತ್ತಿದೆ. ಕಳೆದು ಎರಡು ವರ್ಷಗಳಿಂದ ಈ ಜೋಡಿ ಲವ್ ಮಾಡ್ತಿದೆಯಂತೆ. ಎರಡು ಕುಟುಂಬಗಳು ಈ ಪ್ರೀತಿಯನ್ನು ಒಪ್ಪಿ ಮದುವೆ ಮಾಡಲು ರೆಡಿಯಾಗಿವೆ. ಅನುಶ್ರೀ ಅವರ ತಮ್ಮ ಹೊಸ ಹೋಟೆಲ್ ಆರಂಭಿಸಿದ್ದರು. ಆ ಪೂಜೆಯಲ್ಲಿ ಅನುಶ್ರೀ ಹಾಗೂ ರೋಷನ್ ಭಾಗಿಯಾಗಿದ್ದರು. ಈ ವಿಡಿಯೋ ಈಗ ವೈರಲ್‌ ಆಗ್ತಿದೆ.

ಇತ್ತೀಚೆಗೆ ಅನುಶ್ರೀ ಅವರು ಕೆಲ ರಿಯಾಲಿಟಿ ಶೋ, ಇವೆಂಟ್‌ಗಳಲ್ಲಿ “ಈ ವರ್ಷ ನಾನು ಪಕ್ಕಾ ಮದುವೆ ಆಗ್ತೀನಿ, ಈ ವರ್ಷವೇ ನನ್ನ ಮದುವೆ ಆಗುತ್ತದೆ” ಎಂದು ಕಾನ್ಫಿಡೆಂಟ್‌ ಆಗಿ ಅನುಶ್ರೀ ಹೇಳಿದ್ದರು. ಈಗ ಮದುವೆ ಫಿಕ್ಸ್‌ ಆಗಿರೋ ಬಗ್ಗೆ ಅನುಶ್ರೀ ಅಧಿಕೃತ ಹೇಳಿಕೆ ನೀಡಬೇಕಿದೆ. ಅನುಶ್ರೀ ಚಿಕ್ಕ ವಯಸ್ಸಿನಲ್ಲಿದ್ದಾಗ ಅವರ ತಂದೆ ಮನೆ ಬಿಟ್ಟು ಹೋಗಿದ್ದರು. ಆ ನಂತರ ಅವರ ತಾಯಿಯೇ ಅನುಶ್ರೀಯನ್ನು, ಅವರ ತಮ್ಮನನ್ನು ಸಾಕಿ ಬೆಳೆಸಿದ್ದರು. ಅನುಶ್ರೀ ಅವರು ಮಂಗಳೂರಿನವರು. ಇಂದು ಕನ್ನಡದ ನಂ 1 ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ.

View post on Instagram