ಇಬ್ಬರು ಮಕ್ಕಳ ತಂದೆ, ಹಿಂದೊಮ್ಮೆ ಮಗಳೇ ಎಂದು ಕರೆದಿದ್ದ ಸೈಫ್ ಅಲಿ ಖಾನ್ನನ್ನು ಮದುವೆಯಾಗಿರೋ ಕರೀನಾ ಕಪೂರ್ ಬಾಳಲ್ಲಿ ಮದುವೆಗೂ ಮುಂಚೆ ಬಂದಿದ್ದರು ಐವರು ನಟರು. ಈಕೆ ಇತಿಹಾಸ ಕೇಳಿ!
ಬಾಲಿವುಡ್ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಜೋಡಿ. ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್ ಅವರ ಜೊತೆಗೆ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಈ ಮೂಲಕ ಕರೀನಾಗೆ ಇಬ್ಬರು ಹಾಗೂ ಸೈಫ್ಗೆ ನಾಲ್ವರು ಮಕ್ಕಳಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್ ಸುದ್ದಿ ಮಾಡಿದವರು. ಸೈಫ್ ಅಲಿ ಖಾನ್ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು.
ಇದೀಗ, ಕರೀನಾ ಕಪೂರ್ ಅವರು ಮದುವೆಗೂ ಮುನ್ನ ಐವರ ಜೊತೆ ಸಂಬಂಧ ಹೊಂದಿದ್ದ ವಿಷಯವೊಂದು ಇದೀಗ ವೈರಲ್ ಆಗಿದೆ. ಸೈಫ್ಗೂ ಮುನ್ನ ಇನ್ನೊಬ್ಬ ಖಾನ್ ನಟಿಯ ಲೈಫ್ಗೆ ಎಂಟ್ರಿ ಕೊಟ್ಟಿದ್ದರು. ಅದರ ಜೊತೆ ಇನ್ನೂ ಐವರ ಎಂಟ್ರಿಯಾಗಿತ್ತು. ಮೊದಲಿಗೆ ಬಾಲಿವುಡ್ಗೆ ಕರೀನಾ ಎಂಟ್ರಿ ಕೊಡುತ್ತಿದ್ದಂತೆಯೇ, ಅದಾಗಲೇ ಮದುವೆಯಾಗಿದ್ದ ಹೃತಿಕ್ ರೋಷನ್ ಜೊತೆ ಡೇಟಿಂಗ್ ಶುರು ಹಚ್ಚಿಕೊಂಡಿದ್ರು. ಕೊನೆಗೆ ಹೃತಿಕ್ ಕೈಕೊಟ್ಟರು. ಮದುವೆಯಾಗಿ ನಂಬಿಸುವುದಾಗಿ ಜೊತೆಗೆ, ಪತ್ನಿಗೆ ಡಿವೋರ್ಸ್ ಕೊಡುವುದಾಗಿ ಕೊನೆಗೆ ಹೃತಿಕ್ ಕಂಗನಾ ರಣಾವತ್ ಹಿಂದೆ ಬಿದ್ದದ್ದು ಎಲ್ಲರಿಗೂ ತಿಳಿದದ್ದೇ. ಬಳಿಕ ಪತ್ನಿಗೆ ಡಿವೋರ್ಸ್ ಕೊಟ್ಟರೂ, ಕೊನೆಗೆ ಮತ್ತೋರ್ವಳ ಹಿಂದೆ ಹೋದ ನಟ ಅವರು. ಆದರೆ ಮೊದಲಿಗೆ ಕರೀನಾ ಜೊತೆ ಹೆಸರು ಕೇಳಿಬಂದಿತ್ತು. ಕರಣ್ ಜೋಹರ್ ಅವರ ಕಭೀ ಖುಷಿ ಕಭೀ ಗಮ್ ಸಿನಿಮಾದ ಟೈಮ್ನಲ್ಲಿ ಲವ್ನಲ್ಲಿ ಬಿದ್ದಿದ್ದರು ಎನ್ನಲಾಗಿದೆ.
ಅಲ್ಲಿ ಬ್ರೇಕಪ್ ಆದ ಬಳಿಕ ನಟಿಯ ಕಣ್ಣು ಬಿದ್ದದ್ದು ಅಭಿಷೇಕ್ ಬಚ್ಚನ್ ಮೇಲೆ. ರೆಫ್ಯೂಜಿ ಸಿನಿಮಾದ ಟೈಮ್ನಲ್ಲಿ ಇಬ್ಬರೂ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದರು. ಇವರನ್ನು ಬಿಟ್ಟು ಕೊನೆಗೆ ಅಭಿಷೇಕ್ ಐಶ್ವರ್ಯಳನ್ನು ಮದ್ವೆಯಾದರು. ಇದಾದ ಬಳಿಕ ಕರೀನಾ ಕಪೂರ್ ಪರ್ದೀನ್ ಖಾನ್ ಹಿಂದೆ ಬಿದ್ದರು. ಈ ಸಂಬಂಧವೂ ನಿಲ್ಲಲಿಲ್ಲ. ಕೊನೆಗೆ ಶಾಹೀದ್ ಕಪೂರ್ ಜೊತೆ ಕರೀನಾ ಕುಚು ಕುಚು ಶುರುವಾಯಿತು. ಇವರ ಲವ್ಸ್ಟೋರಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸಂದರ್ಶನವೊಂದಲ್ಲಿ ಖುದ್ದು ನಟಿಯೇ ಈ ಬಗ್ಗೆ ಹೇಳಿದ್ದರು ಕೂಡ.
ಕೊನೆಗೆ ಮದುವೆಯಾದದ್ದು ಇಬ್ಬರು ಮಕ್ಕಳ ತಂದೆ, ಒಂದು ಕಾಲದಲ್ಲಿ ಮಗಳೇ ಎಂದು ಹೇಳಿದ್ದ ಸೈಫ್ ಅಲಿ ಖಾನ್ ಜೊತೆ. ಇದೀಗ ಈ ಜೋಡಿಗೆ ಇಬ್ಬರು ಮಕ್ಕಳಾಗಿದ್ದು, ಸದ್ಯ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.
