10:37 PM (IST) Feb 13

Karnataka LiveBhagyalakshmi Serial ಮುಗಿಯಲ್ಲ, ಪಾತ್ರ ಬದಲು- ಖುದ್ದು ನಟಿ ಸುಷ್ಮಾ ರಾವ್​ ಏನ್​ ಹೇಳಿದ್ರು ನೋಡಿ

ಭಾಗ್ಯಲಕ್ಷ್ಮಿ ಸೀರಿಯಲ್ ಮುಗಿಯುತ್ತಿದೆ ಎಂಬ ವದಂತಿಗಳ ನಡುವೆ, ಖಳನಾಯಕ ತಾಂಡವ್ ಪಶ್ಚಾತ್ತಾಪ ಪಡುತ್ತಿದ್ದಾನೆ. ಆದರೆ, ನಟಿ ಸುಷ್ಮಾ ಕೆ. ರಾವ್ ಅವರು ಇನ್​ಸ್ಟಾಗ್ರಾಮ್​ ಮೂಲಕ ಸೀರಿಯಲ್ ಸದ್ಯಕ್ಕೆ ಮುಗಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಕಥೆಯು ಕುತೂಹಲಕಾರಿ ಘಟ್ಟ ತಲುಪಿದೆ.
Read Full Story
09:22 PM (IST) Feb 13

Karnataka Liveಪಿಯು ವಿದ್ಯಾರ್ಥಿನಿಗೆ ನೀನು ಮುಸ್ಲಿಂ ಆಗು, ಇಲ್ಲವೇ ನಿನ್ನ ರೇಪ್ ಮಾಡಿದ ವಿಡಿಯೋ ವೈರಲ್ ಮಾಡ್ತೀನೆಂದ ಯುವಕ!

ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಯನ್ನು ಲಾಂಗ್ ರೈಡ್ ಕರೆದುಕೊಂಡು ಹೋದ ಅನ್ಯಕೋಮಿನ ಯುವಕ, ಆಕೆಯನ್ನ ಅತ್ಯಾ*ಚಾರ ಮಾಡಿ, ವಿಡಿಯೋ ತೆಗೆದು ಬ್ಲ್ಯಾಕ್‌ಮೇಲ್ ಮಾಡಲಾಗಿದೆ. ಮತಾಂತರಕ್ಕೂ ಒತ್ತಡ ಹೇರಿದ್ದಾನೆ. ಪೊಲೀಸರು, ಇಬ್ಬರನ್ನ ಬಂಧಿಸಿದ್ದಾರೆ. ಸರ್ಕಾರ ಎಸ್‌ಐಟಿ ರಚಿಸಿದೆ.

Read Full Story
09:15 PM (IST) Feb 13

Karnataka LiveNaa Ninna Bidalaare ಸೀರಿಯಲ್‌ ಮಾಯಾ ಆತ್ಮಹ*ತ್ಯೆಗೆ ಯತ್ನ - ಶೂಟಿಂಗ್‌ ಸೆಟ್‌ನಲ್ಲಿ ಏನಾಯ್ತು ನೋಡಿ

ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ, ಅಂಬಿಕಾಳ ಕೊಲೆ ರಹಸ್ಯ ಬಯಲಾಗುತ್ತಿದ್ದಂತೆ ಮಾಯಾ ಕಟ್ಟಡದಿಂದ ಜಿಗಿದು ಆತ್ಮ*ಹತ್ಯೆಗೆ ಯತ್ನಿಸುತ್ತಾಳೆ. ಈ ಅಪಾಯಕಾರಿ ದೃಶ್ಯದ ಚಿತ್ರೀಕರಣವನ್ನು ಹೇಗೆ ಮಾಡಲಾಯಿತು, ಎಷ್ಟು ಟೇಕ್‌ಗಳನ್ನು ತೆಗೆದುಕೊಳ್ಳಲಾಯಿತು ಎಂಬುದನ್ನು ಈ ಲೇಖನ ವಿವರಿಸುತ್ತದೆ.

Read Full Story
08:24 PM (IST) Feb 13

Karnataka LiveKSRTC ವೀಕೆಂಡ್ ಟೂರ್ ಪ್ಯಾಕೇಜ್ - ಕಡಿಮೆ ದರದಲ್ಲಿ ತಲಕಾಡು, ಮೇಲುಕೋಟೆ, ಚಿಕ್ಕತಿರುಪತಿ ಪ್ರವಾಸ!

ಬೆಂಗಳೂರಿನಿಂದ ವಾರಾಂತ್ಯದ ಪ್ರವಾಸ ಕೈಗೊಳ್ಳುವವರಿಗಾಗಿ ಕೆಎಸ್‌ಆರ್‌ಟಿಸಿ ಕಡಿಮೆ ದರದಲ್ಲಿ ವಿಶೇಷ ಪ್ಯಾಕೇಜ್ ಟೂರ್‌ಗಳನ್ನು ಆರಂಭಿಸಿದೆ. ಪ್ರತಿ ಶನಿವಾರ ಮತ್ತು ಭಾನುವಾರದಂದು ಲಭ್ಯವಿರುವ ಈ ಪ್ರವಾಸಗಳು ಗಗನಚುಕ್ಕಿ-ಭರಚುಕ್ಕಿ, ಕೋಟಿಲಿಂಗೇಶ್ವರ, ಮತ್ತು ಮೇಲುಕೋಟೆಯಂತಹ ಪ್ರಮುಖ ತಾಣಗಳನ್ನು ಒಳಗೊಂಡಿವೆ.
Read Full Story
07:54 PM (IST) Feb 13

Karnataka LiveBigg Boss - ಯು- ಟರ್ನ್​ ಹೊಡೆದ್ರಾ ಅಶ್ವಿನಿ ಗೌಡ? ಗಿಲ್ಲಿ ನಟನ ಬಗ್ಗೆ ಹೇಳಿದ್ದೇ ಬೇರೆಯಂತೆ- ಅದೇನು?

ಬಿಗ್‌ಬಾಸ್‌ 12 ಮುಗಿದರೂ ಸ್ಪರ್ಧಿಗಳ ನಡುವಿನ ಜಗಳ ನಿಂತಿಲ್ಲ. ವಿನ್ನರ್ ಗಿಲ್ಲಿ ನಟನ ಗೆಲುವಿನ ಬಗ್ಗೆ ಅಸಮಾಧಾನ ಹೊರಹಾಕಿದ್ದ ಅಶ್ವಿನಿ ಗೌಡ, 'ಬಡವನ ಸೋಗು' ಎಂಬ ಪದ ಬಳಸಿ ವಿವಾದ ಸೃಷ್ಟಿಸಿದ್ದರು. ಇದೀಗ, ಅಶ್ವಿನಿ ಕೊಟ್ಟ ಸ್ಪಷ್ಟನೆ ಏನು?

Read Full Story
07:31 PM (IST) Feb 13

Karnataka Liveಪ್ರಯಾಣಿಕರ ಗಮನಕ್ಕೆ - ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ಸೇರಿ ಹಲವು ರೈಲುಗಳ ಸಂಚಾರ ರದ್ದು!

Karnataka Train Cancellations: Shimoga-Bangalore Jan Shatabdi Cancelled ರಾಷ್ಟ್ರೀಯ ಹೆದ್ದಾರಿ-206ರಲ್ಲಿ ಮೇಲ್ಸೇತುವೆನಿರ್ಮಾಣ ಕಾಮಗಾರಿಯಿಂದಾಗಿ, ಬಿರೂರು-ತಾಳಗುಪ್ಪ ಮತ್ತು ಅರಸೀಕೆರೆ-ಚಿಕ್ಕಜಾಜೂರು ವಿಭಾಗಗಳಲ್ಲಿ ರೈಲ್ವೆ 'ಲೈನ್ ಬ್ಲಾಕ್' ಮಾಡಲಾಗುತ್ತಿದೆ. 

Read Full Story
06:30 PM (IST) Feb 13

Karnataka Liveಮಲೆ ಮಹದೇಶ್ವರ ಬೆಟ್ಟದ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ; 10ಕ್ಕೂ ಹೆಚ್ಚು ಮಂದಿಗೆ ಗಾಯ

ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದ ಘಾಟ್ ರಸ್ತೆಯ 7ನೇ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಚಾಲಕರು ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Read Full Story
06:15 PM (IST) Feb 13

Karnataka Liveಬಾಗಲಕೋಟೆ - ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 5 ಬಾಲಕಾರ್ಮಿಕರು ಸೇರಿದಂತೆ ಒಟ್ಟು 24 ಮಂದಿ ರಕ್ಷಣೆ!

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನಲ್ಲಿ, ಇಟ್ಟಿಗೆ ಭಟ್ಟಿಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ 24 ಒಡಿಶಾ ಮೂಲದ ಕಾರ್ಮಿಕರನ್ನು ಅಧಿಕಾರಿಗಳು ರಕ್ಷಿಸಿದ್ದಾರೆ. ಇವರಲ್ಲಿ ಐವರು ಬಾಲಕಾರ್ಮಿಕರಿದ್ದು, ಅಮಾನವೀಯವಾಗಿ ದುಡಿಸಿಕೊಳ್ಳಲಾಗುತ್ತಿತ್ತು. ಈ ಸಂಬಂಧ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Read Full Story
06:14 PM (IST) Feb 13

Karnataka Liveಸಾಹಸ ಸಿಂಹ ಬಿರುದು ಕೊಟ್ರೂ ವಿಷ್ಣು, ಜೋ ಸೈಮನ್ ಒಟ್ಟಿಗೆ ಸಿನಿಮಾ ಮಾಡಬಾರದು; ಧಮ್ಕಿ ಹಾಕಿ ಪತ್ರ ಬರೆದ್ರು!

ಡಾ ವಿಷ್ಣುವರ್ಧನ್‌ರಿಗೆ ಸಾಹಸಿಂಹ ಎಂಬ ಬಿರುದು ಕೊಟ್ಟಿದ್ದ ನಿರ್ದೇಶಕ ಜೋ ಸೈಮನ್‌ ಅವರು ಈಗ ಇಹಲೋಕ ತ್ಯಜಿಸಿದ್ದಾರೆ. ಆದರೆ ವಿಷ್ಣುವರ್ಧನ್‌ ಹಾಗೂ ಜೋ ಸೈಮನ್‌ ಅವರು ಸಿನಿಮಾ ಮಾಡಬಾರದು ಎಂದು ಕೆಲವರು ಪಟ್ಟು ಹಿಡಿದಿದ್ದರು.

Read Full Story
05:59 PM (IST) Feb 13

Karnataka Liveಶಿವಮೊಗ್ಗ ಗಾರೆ ಮೇಸ್ತ್ರಿಯ ಮರ್ಮಾಂಗಕ್ಕೆ ಚುಚ್ಚಿ ಕೊಂಡ ಕಿರಾತಕ ಸ್ನೇಹಿತರು; ಕಲ್ಲು ಎತ್ತಿಹಾಕಿದವರು ಅಂದರ್!

ಶಿವಮೊಗ್ಗದ ಗಾಜನೂರಿನಲ್ಲಿ ಕುಡಿದ ಮತ್ತಿನ ಜಗಳವೊಂದು ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಶ್ರೀನಿವಾಸ್ ಎಂಬ ವ್ಯಕ್ತಿಯನ್ನು ಆತನ ಸ್ನೇಹಿತರೇ ಕೈಕಾಲು ಮುರಿದು, ಮರ್ಮಾಂಗಕ್ಕೆ ಚುಚ್ಚಿ, ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಪೊಲೀಸರು ಇಬ್ಬರು ಆರೋಪಿಗಳನ್ನು 24 ಗಂಟೆಗಳಲ್ಲಿ ಬಂಧಿಸಿದ್ದಾರೆ.

Read Full Story
05:39 PM (IST) Feb 13

Karnataka Liveದ್ವಿತೀಯ ಪಿಯುಸಿ ಪರೀಕ್ಷೆ ಬರೆಯೋ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ತೋರಿಸಿದ್ರೆ KSRTC ಮತ್ತು BMTCಯಲ್ಲಿ ಉಚಿತ ಪ್ರಯಾಣ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಹಿನ್ನೆಲೆಯಲ್ಲಿ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಘೋಷಿಸಿವೆ. ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ, ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು.

Read Full Story
05:33 PM (IST) Feb 13

Karnataka Liveಸಿನಿಮಾಗಳನ್ನು ಪ್ರೀತಿಸಿ, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೇ ಉಸಿರು ಚೆಲ್ಲಿದ ಕನ್ನಡ ನಿರ್ದೇಶಕ Joe Siman

Kannada Director Joe Siman Death: ಸಿನಿಮಾಗಳನ್ನು ಪ್ರೀತಿಸಿ, ಸಿನಿಮಾವನ್ನು ಜೀವನವಾಗಿಸಿಕೊಂಡಿದ್ದ ನಟ, ನಿರ್ದೇಶಕ ಜೋ ಸೈಮನ್‌ ಅವರು ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.

Read Full Story
05:23 PM (IST) Feb 13

Karnataka Liveಬಿಗ್‌ ಬಾಸ್‌ ಮನೆಯಿಂದ ಬಂದಿದ್ದೇ ಬಂದಿದ್ದು, ಅಂದ್ಕೊಂಡಿದ್ದು ಒಂದೂ ಆಗಿಲ್ಲ - Gilli Nata ಬೇಸರ

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಗಿಲ್ಲಿ ನಟ ಅವರು ದೊಡ್ಮನೆ ಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬಿಗ್‌ ಬಾಸ್‌ ಶೋನಿಂದ ಇಲ್ಲಿಯವರೆಗೆ ಏನೇನು ಆಯ್ತು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story
04:59 PM (IST) Feb 13

Karnataka Liveತೆಕ್ಕಲಕೋಟೆ ಉತ್ಖನನದಲ್ಲಿ 3ನೇ ಅಸ್ಥಿಪಂಜರ ಪತ್ತೆ; ಪ್ರಾಗೈತಿಹಾಸಿಕ ಕಾಲದ ಸಮಾಧಿ ಪದ್ದತಿ ಬಿಚ್ಚಿಟ್ಟ ಕುರುಹುಗಳು!

ಬಳ್ಳಾರಿಯ ತೆಕ್ಕಲಕೋಟೆ ಉತ್ಖನನದಲ್ಲಿ ಅಂತಿಮ ಹಂತದ ಕಾರ್ಯಾಚರಣೆ ವೇಳೆ ಮೂರನೇ ಮಾನವ ಅಸ್ಥಿಪಂಜರ ಪತ್ತೆಯಾಗಿದೆ. ತಲೆಬುರುಡೆ ಮತ್ತು ಮಡಿಕೆ ಅವಶೇಷಗಳು ಅಂದಿನ ಅಂತ್ಯಕ್ರಿಯೆಯ ಪದ್ಧತಿಗಳ ಮೇಲೆ ಬೆಳಕು ಚೆಲ್ಲಿದ್ದು, ಈ ಐತಿಹಾಸಿಕ ಪ್ರದೇಶವನ್ನು ಸಂರಕ್ಷಿತ ಸ್ಥಳವೆಂದು ಘೋಷಿಸಲು ಪುರಾತತ್ವ ಇಲಾಖೆ ಮುಂದಾಗಿದೆ.

Read Full Story
04:48 PM (IST) Feb 13

Karnataka Liveತುಮಕೂರು - ಸರ್ಕಾರಿ ಶಾಲೆಯಲ್ಲಿ ಬಾಲಕಿಯ ಬೆರಳು ಕಟ್, ಚಿಕಿತ್ಸೆ ಕೊಡಿಸದೆ ಬೆರಳನ್ನು ಕಸದ ಬುಟ್ಟಿಗೆ ಎಸೆದ ಶಿಕ್ಷಕರು!

ತುಮಕೂರು ತಾಲೂಕಿನ ಗೂಳೂರು ಸರ್ಕಾರಿ ಶಾಲೆಯಲ್ಲಿ, ಆಟವಾಡುತ್ತಿದ್ದ 1ನೇ ತರಗತಿ ವಿದ್ಯಾರ್ಥಿನಿಯ ಕೈ ಬೆರಳುಗಳು ಕಬ್ಬಿಣದ ಬಾಗಿಲಿಗೆ ಸಿಲುಕಿ ತುಂಡಾಗಿವೆ. ಗಂಭೀರ ಗಾಯಗೊಂಡರೂ ಆಸ್ಪತ್ರೆಗೆ ಸಾಗಿಸದೆ ನಿರ್ಲಕ್ಷ್ಯ ತೋರಿದ ಶಿಕ್ಷಕರು, ತುಂಡಾದ ಬೆರಳುಗಳನ್ನು ಕಸಕ್ಕೆ ಎಸೆದಿದ್ದಾರೆ.

Read Full Story
04:17 PM (IST) Feb 13

Karnataka Liveರೀಲ್ಸ್‌ಗೋಸ್ಕರ ಗವರ್ನ್‌ಮೆಂಟ್ ಜಾಬ್ ಆಸೆ ಬಿಟ್ಟ Munnu, ಗಗನಸಖಿ ಕೆಲಸ ಬಿಟ್ಟ Sannu; ಕನ್ನಡ ಯುಟ್ಯೂಬರ್ಸ್‌ ಕಥೆ

Kannada Youtuber Sannu Munnu Love: ಸನ್ನು ಮೂನು ಎಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ಜೋಡಿಯೊಂದು ಮದುವೆಯಾಗಿದೆ. ಮಂಡ್ಯದ ಬಿ ಗೌಡಗೆರೆ ಚಾಮುಂಡಿ ದೇವಸ್ಥಾನದಲ್ಲಿ ಧನುಶ್ರೀ-ಮಂಜು ಗೌಡ ಮದುವೆಯಾಗಿದ್ದಾರೆ. ಇವರ ಲವ್‌ಸ್ಟೋರಿಯೇ ರೋಚಕವಾಗಿದೆ.

Read Full Story
03:37 PM (IST) Feb 13

Karnataka Liveಹೊಸಕೋಟೆ ದುರಂತ - ಮನೆಯಲ್ಲಿ ಹೇಳದೆ ನೈಟ್‌ರೈಡ್‌ ಹೋದ ಅಪ್ರಾಪ್ತರು! ಮಗನನ್ನು ಕಳೆದುಕೊಂಡ ಅಂಧ ತಾಯಿ! ಕಥೆ ಒಂದೊಂದಲ್ಲ

ಹೊಸಕೋಟೆ ಬಳಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಆರು ವಿದ್ಯಾರ್ಥಿಗಳು ಮತ್ತು ಓರ್ವ ಬೈಕ್ ಸವಾರ ಸೇರಿದಂತೆ ಏಳು ಮಂದಿ ದುರ್ಮರಣ ಹೊಂದಿದ್ದಾರೆ. ಅತೀವೇಗದಿಂದ ಬಂದ ಎಕ್ಸ್‌ಯುವಿ ಕಾರು ಬೈಕ್ ಹಾಗೂ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದ್ದೇ ದುರಂತಕ್ಕೆ ಕಾರಣ.

Read Full Story
03:05 PM (IST) Feb 13

Karnataka Liveಶಿವಮೊಗ್ಗದ ಈ ಬಾಲಕನಿಗೆ 'ಕಾಲು'ಗಳೇ ಐಡಿ ಕಾರ್ಡ್‌ಗಳು! ಮುಖ ನೋಡದೇ 150 ಜನರ ಪಾದ ನೋಡಿ ಹೆಸರು ಹೇಳ್ತಾನೆ ಈ ಪ್ರತಿಭೆ!

ಶಿವಮೊಗ್ಗದ ಹೊಸನಗರ ತಾಲೂಕಿನ ವಿದ್ಯಾರ್ಥಿ ಎಸ್. ಭುವನ್, ತನ್ನ ವಿಶಿಷ್ಟ ನೆನಪಿನ ಶಕ್ತಿಯಿಂದ ಗಮನ ಸೆಳೆದಿದ್ದಾನೆ. ಈತ ತನ್ನ ಶಾಲೆಯ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಕೇವಲ ಅವರ ಕಾಲಿನ ಬೆರಳು ಹಾಗೂ ಪಾದದ ವಿನ್ಯಾಸವನ್ನು ನೋಡಿ ನಿಖರವಾಗಿ ಗುರುತಿಸುತ್ತಾನೆ.

Read Full Story
02:57 PM (IST) Feb 13

Karnataka Liveಮಾಜಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಬಗ್ಗುಬಡಿದ ಜಿಂಬಾಬ್ವೆ! ಆರ್‌ಸಿಬಿ ವೇಗಿ ಜಿಂಬಾಬ್ವೆ ಗೆಲುವಿನ ರೂವಾರಿ

ಟಿ20 ಪಂದ್ಯದಲ್ಲಿ ಜಿಂಬಾಬ್ವೆ ತಂಡವು ಆಸ್ಟ್ರೇಲಿಯಾ ವಿರುದ್ಧ 23 ರನ್‌ಗಳ ಸ್ಮರಣೀಯ ಜಯ ಸಾಧಿಸಿದೆ. 170 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, ಆರ್‌ಸಿಬಿ ಮಾಜಿ ವೇಗಿ ಬ್ಲೆಸಿಂಗ್ ಮುಜರಬಾನಿ ಅವರ 4 ವಿಕೆಟ್‌ಗಳ ಮಾರಕ ದಾಳಿಗೆ ನಲುಗಿ 146 ರನ್‌ಗಳಿಗೆ ಸರ್ವಪತನ ಕಂಡಿತು.
Read Full Story
01:26 PM (IST) Feb 13

Karnataka Liveಬಿಗ್ ಬಾಸ್ ಮನೆಯ ಚಿಕ್ಕವ್ವ ದೊಡ್ಡವ್ವ ಜೊತೆ ನಿತ್ಕೊಂಡು ಗಿಲ್ಲಿ ನಟನ ಕಿವಿ ಹಿಂಡಿದ ಒಳ್ಳೆ ಹುಡುಗ ಪ್ರಥಮ್!

ಬಿಗ್ ಬಾಸ್ ಸೀಸನ್ 4ರ ವಿಜೇತ ಪ್ರಥಮ್, ಸೀಸನ್ 12ರ ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಜಾಹ್ನವಿ ಜೊತೆ ಕಾಣಿಸಿಕೊಂಡಿದ್ದಾರೆ. ಗಿಲ್ಲಿ ನಟ ಅವರಿಬ್ಬರನ್ನು 'ದೊಡ್ಡವ್ವ-ಚಿಕ್ಕವ್ವ' ಎಂದು ಕರೆದಿದ್ದನ್ನು ಪ್ರಶ್ನಿಸಿ, ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

Read Full Story