- Home
- Entertainment
- TV Talk
- Naa Ninna Bidalaare ಸೀರಿಯಲ್ ಮಾಯಾ ಆತ್ಮಹ*ತ್ಯೆಗೆ ಯತ್ನ: ಶೂಟಿಂಗ್ ಸೆಟ್‌ನಲ್ಲಿ ಏನಾಯ್ತು ನೋಡಿ
Naa Ninna Bidalaare ಸೀರಿಯಲ್ ಮಾಯಾ ಆತ್ಮಹ*ತ್ಯೆಗೆ ಯತ್ನ: ಶೂಟಿಂಗ್ ಸೆಟ್‌ನಲ್ಲಿ ಏನಾಯ್ತು ನೋಡಿ
ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ, ಅಂಬಿಕಾಳ ಕೊಲೆ ರಹಸ್ಯ ಬಯಲಾಗುತ್ತಿದ್ದಂತೆ ಮಾಯಾ ಕಟ್ಟಡದಿಂದ ಜಿಗಿದು ಆತ್ಮ*ಹತ್ಯೆಗೆ ಯತ್ನಿಸುತ್ತಾಳೆ. ಈ ಅಪಾಯಕಾರಿ ದೃಶ್ಯದ ಚಿತ್ರೀಕರಣವನ್ನು ಹೇಗೆ ಮಾಡಲಾಯಿತು, ಎಷ್ಟು ಟೇಕ್‌ಗಳನ್ನು ತೆಗೆದುಕೊಳ್ಳಲಾಯಿತು ಎಂಬುದನ್ನು ಈ ಲೇಖನ ವಿವರಿಸುತ್ತದೆ.

ಸಾಹಸಮಯ ದೃಶ್ಯ
ಧಾರಾವಾಹಿಗಳನ್ನು ಹಲವು ವರ್ಷಗಳವರೆಗೆ ಎಳೆಯುತ್ತಾರೆ ಎನ್ನುವ ಆರೋಪ ಮಾಮೂಲು. ಆದರೆ ಒಂದೊಂದು ಎಪಿಸೋಡ್ ದೃಶ್ಯಗಳನ್ನು ಮಾಡುವಾಗಲೂ ನಟ-ನಟಿ ಮಾತ್ರವಲ್ಲದೇ ಇಡೀ ತಂಡ ಹೇಗೆಲ್ಲಾ ಸರ್ಕಸ್ ಮಾಡಬೇಕಾಗುತ್ತದೆ, ಎಷ್ಟು ಕಷ್ಟಪಡಬೇಕು ಎನ್ನುವುದು ಆ ತಂಡಕ್ಕೆ ಮಾತ್ರ ತಿಳಿದಿರುತ್ತದೆ. ಅದರಲ್ಲಿಯೂ ಒಂದು ಸೀರಿಯಲ್ನ ಒಂದೇ ಒಂದು ಸೀನ್ ಮಾಡುವಾಗಲೂ ಕೆಲವೊಮ್ಮೆ ಹಲವಾರು ಟೇಕ್‌ಗಳನ್ನು ತೆಗೆದುಕೊಳ್ಳುವುದು ಉಂಟು. ಆದ್ದರಿಂದ ಎಷ್ಟೋ ಬಾರಿ ದಿನಪೂರ್ತಿ ಶೂಟಿಂಗ್ ಮಾಡಿದರೂ ಕೆಲವೇ ದೃಶ್ಯಗಳನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ. ಅದರಲ್ಲಿಯೂ ಸಾಹಸಮಯ ದೃಶ್ಯಗಳನ್ನು ಮಾಡುವಾಗ ಕೆಲವೊಮ್ಮೆ ಅಪಾಯಕಾರಿ ಎನ್ನಿಸುವುದೂ ಉಂಟು.
ಮಾಯಾ ಆತ್ಮಹ*ತ್ಯೆ
ಇದೀಗ ನಾ ನಿನ್ನ ಬಿಡಲಾರೆ ಸೀರಿಯಲ್ (Naa Ninna Bidalaare Serial) ನಲ್ಲಿ ಮಾಯಾ, ಸೀರಿಯಲ್ನಲ್ಲಿ ಆತ್ಮಹ*ತ್ಯೆ ಮಾಡಿಕೊಳ್ಳುವ ದೃಶ್ಯವೊಂದಿದೆ. ಅಷ್ಟಕ್ಕೂ ಈ ಸೀರಿಯಲ್ನಲ್ಲಿ ಅಂಬಿಕಾಳನ್ನು ಸಾಯಿಸಿದ್ದು ಮಾಯಾನೇ ಎನ್ನುವ ಸತ್ಯ ದುರ್ಗಾಗೆ ತಿಳಿಯುತ್ತದೆ. ಅದಕ್ಕೆ ಸಾಕ್ಷಿಯಾಗಿ ಕಿವಿಯೋಲೆ ಸಿಗುತ್ತದೆ.
ಅಂಬಿಕಾ ಸಾವಿನ ರಹಸ್ಯ
ಈ ಬಗ್ಗೆ ಗರಂ ಆದ ದುರ್ಗಾ, ನೇರವಾಗಿಯೇ ಮಾಯಾ ಬಳಿ ಈ ವಿಷಯ ಕೇಳುತ್ತಾಳೆ. ನನಗೆ ಸಾಕ್ಷಿ ಸಿಕ್ಕಿದೆ. ನೀನೇ ಅಂಬಿಕಾ ಅವರನ್ನು ಕೊ*ಲೆ ಮಾಡಿದ್ದು ಎನ್ನುವುದು ಗೊತ್ತಾಗಿದೆ ಎನ್ನುತ್ತಾಳೆ. ಆಗ ಮಾಯಾಗೆ ತಪ್ಪಿಸಿಕೊಳ್ಳಲು ಯಾವ ಮಾರ್ಗವೂ ತೋಚುವುದಿಲ್ಲ.
ಬಣ್ಣ ಬಯಲು
ಇನ್ನು ತನ್ನ ಬಣ್ಣ ಬಯಲಾಗುತ್ತದೆ ಎಂದು, ಇಂಥ ಗಂಭೀರ ಆರೋಪ ಮಾಡಿದ ಮೇಲೆ ನಾನು ಬದುಕಿದ್ದು ಪ್ರಯೋಜನ ಇಲ್ಲ ಎಂದು ಅಲ್ಲೇ ಇರುವ ಬಿಲ್ಡಿಂಗ್ನಲ್ಲಿ ಬೀಳುತ್ತಾಳೆ. ಅದರ ಶೂಟಿಂಗ್ ಹೇಗೆ ಮಾಡಲಾಗಿದೆ ಎನ್ನುವ ವಿಡಿಯೋ ಅನ್ನು ಮಾಯಾ ಪಾತ್ರಧಾರಿ ರಮ್ಯಾ ಶೇರ್ ಮಾಡಿಕೊಂಡಿದ್ದಾರೆ.
ಶೂಟಿಂಗ್ನಲ್ಲಿ ಏನಾಯ್ತು?
ಹಗ್ಗವನ್ನು ಕಟ್ಟಿ ಬಿಲ್ಡಿಂಗ್ ಮೇಲುಗಡೆ ಕಳಿಸಲಾಗುತ್ತದೆ. ಬಳಿಕ ಹಗ್ಗವನ್ನು ಜಗ್ಗಿದಾಗ, ತೀರಾ ಹತ್ತಿರದಲ್ಲಿಯೇ ಇರುವ, ಎಲ್ಲಾ ಸೌಕರ್ಯ ಇರುವ ನೆಲದ ಮೇಲೆ ಬೀಳುತ್ತಾಳೆ. ಇಲ್ಲಿ ಎಡಿಟಿಂಗ್ ಮಾಡುವಾಗ ಹಗ್ಗ ಕಾಣಿಸುವುದಿಲ್ಲ. ನೇರವಾಗಿ ಎತ್ತರದ ಕಟ್ಟಡದಿಂದ ಬಿದ್ದಂತೆ ಕಾಣಿಸುತ್ತದೆ.
ಹಲವಾರು ಟೇಕ್
ಆದರೆ, ಈ ಸಮಯದಲ್ಲಿ ಯಾವುದೂ ಸರಿಯಾಗದೇ ಹಲವಾರು ಟೇಕ್ ತೆಗೆದುಕೊಳ್ಳುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಮೇಲಿನಿಂದ ಬೀಳುವಾಗ, ಒಂದೊಂದು ಸಲ ಒಂದೊಂದು ರೀತಿ ಬೀಳುವ ಕಾರಣ, ಹಲವಾರು ಟೇಕ್ ನಂತರ ಕೊನೆಗೂ ಮಾಯಾ ಸರಿಯಾಗಿ ಬಿದ್ದಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

