- Home
- Entertainment
- TV Talk
- Bigg Boss : ಯು- ಟರ್ನ್ ಹೊಡೆದ್ರಾ ಅಶ್ವಿನಿ ಗೌಡ? ಗಿಲ್ಲಿ ನಟನ ಬಗ್ಗೆ ಹೇಳಿದ್ದೇ ಬೇರೆಯಂತೆ- ಅದೇನು?
Bigg Boss : ಯು- ಟರ್ನ್ ಹೊಡೆದ್ರಾ ಅಶ್ವಿನಿ ಗೌಡ? ಗಿಲ್ಲಿ ನಟನ ಬಗ್ಗೆ ಹೇಳಿದ್ದೇ ಬೇರೆಯಂತೆ- ಅದೇನು?
ಬಿಗ್‌ಬಾಸ್ 12 ಮುಗಿದರೂ ಸ್ಪರ್ಧಿಗಳ ನಡುವಿನ ಜಗಳ ನಿಂತಿಲ್ಲ. ವಿನ್ನರ್ ಗಿಲ್ಲಿ ನಟನ ಗೆಲುವಿನ ಬಗ್ಗೆ ಅಸಮಾಧಾನ ಹೊರಹಾಕಿದ್ದ ಅಶ್ವಿನಿ ಗೌಡ, 'ಬಡವನ ಸೋಗು' ಎಂಬ ಪದ ಬಳಸಿ ವಿವಾದ ಸೃಷ್ಟಿಸಿದ್ದರು. ಇದೀಗ, ಅಶ್ವಿನಿ ಕೊಟ್ಟ ಸ್ಪಷ್ಟನೆ ಏನು?

ನಿಲ್ಲದ ಬಿಗ್‌ಬಾಸ್ ಜಗಳ
ಅತ್ಯಧಿಕ ವೋಟ್ ಮೂಲಕ ಬಿಗ್‌ಬಾಸ್ ಇತಿಹಾಸದಲ್ಲಿಯೇ ದಾಖಲೆ ಬರೆದಿರುವ ಬಿಗ್‌ಬಾಸ್ 12 (Bigg Boss 12) ಮುಗಿದು ಹಲವು ದಿನಗಳು ಕಳೆದರೂ, ಇನ್ನೂ ಕೆಲವು ಸ್ಪರ್ಧಿಗಳ ಜಗಳ ನಿಂತಿಲ್ಲ. ಇದಾಗಲೇ ಅಶ್ವಿನಿ ಗೌಡ ಮತ್ತು ಚೈತ್ರಾ ಕುಂದಾಪುರ ನಡುವೆ ವಾಕ್ಸಮರ ನಡೆಯುತ್ತಲೇ ಇದೆ.
ಗಿಲ್ಲಿ ಬಗ್ಗೆ ಅಸಮಾಧಾನ
ಅದರ ನಡುವೆಯೇ, ಇದೀಗ ಗಿಲ್ಲಿ ನಟ ವಿನ್ ಆದಾಗಿನಿಂದಲೂ ಭಾರಿ ಬೇಸರ ಹೊರಹಾಕುತ್ತಿರುವ, ನಾನೇ ವಿನ್ನಿಂಗ್ ಅಭ್ಯರ್ಥಿಯಾಗಿದೆ ಎನ್ನುತ್ತಿರುವ, ನನಗಿಂತ ಸ್ಟ್ರಾಂಗ್ ಅಭ್ಯರ್ಥಿ ಇದುವರೆಗೂ ಬಿಗ್‌ಬಾಸ್‌ಗೆ ಬಂದೇ ಇಲ್ಲ ಎನ್ನುತ್ತಲೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವ ಅಶ್ವಿನಿ ಗೌಡ (Bigg Boss Ashwini Gowda) ಈಗ ನೀಡಿರುವ ಹೇಳಿಕೆ ಜಾಲತಾಣದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕುತ್ತಿದೆ.
ಅಶ್ವಿನಿ ಗೌಡ ಏನಂದಿದ್ರು?
ಇದಾಗಲೇ, ಅಶ್ವಿನಿ ಗೌಡ ಅವರು, ಬಿಗ್‌ಬಾಸ್ ಎನ್ನುವುದು ಕಾಮಿಡಿ ಷೋ ಅಲ್ಲ, ಅದು ವ್ಯಕ್ತಿತ್ವದ ಷೋ ಎನ್ನುವ ಮೂಲಕ ಗಿಲ್ಲಿನಟನ ಗೆಲುವಿಗೆ ಅಸಮಾಧಾನ ಹೊರಹಾಕಿದ್ದರು. ಬಡವನ ಸೋಗಿನಲ್ಲಿ ಎನ್ನುವ ಪದವನ್ನು ಪದೇ ಪದೇ ಬಳಸಿದ್ದರು. ಇದು ಗಿಲ್ಲಿ ನಟನ ಅಭಿಮಾನಿಗಳನ್ನು ಕೆರಳಿಸಿತ್ತು.
ಈಗ ಸ್ಪಷ್ಟನೆ
ಇದೀಗ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಶ್ವಿನಿ ಗೌಡ ಅವರು, ಗಿಲ್ಲಿ ಬಡವ ಎಂದು ನಾನು ಎಲ್ಲೂ ಹೇಳಿಲ್ಲ. ಬಿಗ್‌ಬಾಸ್ ಮುಗಿಯುತ್ತಿದ್ದಂತೆಯೇ ನನಗೆ ಮಾಧ್ಯಮಗಳಲ್ಲಿ ಸಂದರ್ಶನಕ್ಕೆ ಕರೆಯಲಾಯಿತು. ಆ ಸಂದರ್ಭದಲ್ಲಿ ನಾನು ಸಾಮಾಜಿಕ ಜಾಲತಾಣಗಳಲ್ಲಿ ಆಗುತ್ತಿದ್ದ ಚರ್ಚೆಗಳ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಾನು ಉತ್ತರ ಕೊಟ್ಟಿದ್ದೇ ಹೊರತು, ನಾನು ಗಿಲ್ಲಿಯ ಬಗ್ಗೆ ತಪ್ಪಾಗಿ ಏನೂ ಹೇಳಿಲ್ಲ. ನಾನು ಹೇಳಿದ ಮಾತುಗಳನ್ನು ಅರ್ಥ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದಿದ್ದಾರೆ.
ನಾನು ಹಾಗೆ ಹೇಳೇ ಇಲ್ಲ
ನಾನು ಗಿಲ್ಲಿ ನಟ ಬಡವ ಎಂದಾಗಲಿ, ಅಥವಾ ಅವರು ನಾನು ಬಡವ ಎಂದು ಹೇಳಿದ್ದಾರೆ ಎಂದಾಗಲಿ ಎಲ್ಲಿಯೂ ಹೇಳಿಯೇ ಇಲ್ಲ. ಪ್ರಶ್ನೆಗಳಿಗೆ ಉತ್ತರಿಸಿದ್ದೇನೇ ವಿನಾ, ನಾನೇ ಖುದ್ದಾಗಿ ಎಲ್ಲಿ ಹೇಳಿದ್ದೇನೆ ಎಂದು ಪ್ರಶ್ನಿಸಿದ್ದಾರೆ.
ಬಡವನ ಸೋಗು
ಹಾಗಿದ್ದರೆ ಬಡವನ ಸೋಗಿನಲ್ಲಿ ಗೆಲುವು ಎಂದೆಲ್ಲಾ ವಿವಿಧ ಮಾಧ್ಯಮಗಳಿಗೆ ಅಶ್ವಿನಿ ಗೌಡ ಸಂದರ್ಶನ ನೀಡಿದ್ದು ಏನು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ದುಬಾರಿ ಕಾರಿನಲ್ಲಿ ಓಡಾಡುವವನು ಬಡವ ಹೇಗೆ ಆಗುತ್ತಾನೆ ಎಂದಿದ್ದು ಯಾಕೆ ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಮತ್ತೆ ಕೆಲವರು ಅಶ್ವಿನಿ ಪರವಾಗಿದ್ದು, ಅದೆಲ್ಲಾ ಅವರು ಮೀಡಿಯಾದವರು ಕೇಳಿರುವ ಪ್ರಶ್ನೆಗೆ ಉತ್ತರಿಸಿದ್ದು ಅಷ್ಟೇ ಎನ್ನುತ್ತಿದ್ದಾರೆ.
ಕಚ್ಚಾಟಕ್ಕೆ ಕಾರಣ
ಒಟ್ಟಿನಲ್ಲಿ ಬಿಗ್‌ಬಾಸ್ 12 ರಾಜಕೀಯದ ರೀತಿಯಲ್ಲಿ, ಕಚ್ಚಾಟಗಳಿಗೆ ಕಾರಣವಾಗಿದೆ. ಸಾಮಾನ್ಯವಾಗಿ ಬಿಗ್‌ಬಾಸ್ ಮುಗಿದ ಮೇಲೆ ಒಂದೆರಡು ವಾರ ಅದರ ಹವಾ ಇದ್ದು, ಆಮೇಲೆ ತಣ್ಣಗಾಗುತ್ತದೆ. ಆದರೆ ಈ ಬಾರಿಯ ಬಿಗ್‌ಬಾಸ್ ಮಾತ್ರ ಇನ್ನೂ ಗರಂ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

