snake bite insurance policy : ಮಳೆಗಾಲದಲ್ಲಿ ಹಾವು ಕಡಿತ ಹೆಚ್ಚಾಗ್ತಿದೆ. ಹಾವು ಕಡಿತಕ್ಕೊಳಗಾದ್ರೆ ಉಚಿತ ಚಿಕಿತ್ಸೆ ಸಿಗುತ್ತಾ? ವಿಮಾ ಪಾಲಿಸಿ ನಿಯಮಗಳು ಏನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಈ ವರ್ಷ ಹಾವು ಕಚ್ಚಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿದೆ. ಮಳೆಗಾಲ ಶುರು ಆಗ್ತಿದ್ದಂತೆ ಹಾವುಗಳು ಹೊಲ, ಗದ್ದೆ ಮಾತ್ರವಲ್ಲ ನಗರ ಪ್ರದೇಶಗಳಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ವೆ. ಹಾವು ಕಚ್ಚಿದರೆ ಅದನ್ನು ವೈದ್ಯಕೀಯ ತುರ್ತು ಪರಿಸ್ಥಿತಿ ಅಂತ ಪರಿಗಣಿಸಲಾಗುತ್ತೆ. ಯಾವುದೇ ಮನೆಮದ್ದು ಮಾಡದೆ, ತಕ್ಷಣ ಆಸ್ಪತ್ರೆಗೆ ಹೋಗೋದು ಅತ್ಯಗತ್ಯ.
ಹಾವು ಕಚ್ಚಿದ್ರೆ ಉಚಿತ ಚಿಕಿತ್ಸೆ
ವಿಮೆ ತಜ್ಞರ ಪ್ರಕಾರ, ಆರೋಗ್ಯ ವಿಮೆ ಪಾಲಿಸಿ ಸಕ್ರಿಯವಾಗಿದ್ದರೆ, ಹೆಚ್ಚಿನ ಸಂದರ್ಭಗಳಲ್ಲಿ ಹಾವು ಕಚ್ಚಿದ ಬಳಿಕ ಆಸ್ಪತ್ರೆಗೆ ದಾಖಲಾಗಿ ಪಡೆಯುವ ಚಿಕಿತ್ಸೆಯ ವೆಚ್ಚವನ್ನು ವಿಮಾ ಕಂಪನಿಯೇ ಭರಿಸುತ್ತವೆ. ಇದರಲ್ಲಿ ಆಸ್ಪತ್ರೆ ದಾಖಲಾತಿ ವೆಚ್ಚ, ವೈದ್ಯರ ಶುಲ್ಕ, ಔಷಧಿಗಳ ವೆಚ್ಚ, ಅಗತ್ಯ ವೈದ್ಯಕೀಯ ಪರೀಕ್ಷೆಗಳು, ಆಂಟಿ-ವೆನಮ್ (Anti-Venom) ಇಂಜೆಕ್ಷನ್ಗಳು ಹಾಗೂ ಅಗತ್ಯವಿದ್ದರೆ ಐಸಿಯು ಚಿಕಿತ್ಸೆಯ ವೆಚ್ಚ ಒಳಗೊಂಡಿರುತ್ತದೆ.
ಬೆಕ್ಕು vs ಕಿಂಗ್ ಕೋಬ್ರಾ.. ರಣ ರೋಚಕ ಕಾಳಗದಲ್ಲಿ ಗೆದ್ದಿದ್ದು ಯಾರು..? VIDEO
ಸಾವಾದರೆ ಕುಟುಂಬಕ್ಕೆ ಪರಿಹಾರ ?
ಹಾವು ಕಚ್ಚಿ ವ್ಯಕ್ತಿ ಮೃತಪಟ್ಟರೆ, ಸಾಮಾನ್ಯ ಹೆಲ್ತ್ ಇನ್ಶೂರೆನ್ಸ್ನಿಂದ ಪರಿಹಾರ ಸಿಗುವುದಿಲ್ಲ. ಆದರೆ ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಇದ್ದರೆ, ಪಾಲಿಸಿಯ ನಿಯಮಗಳ ಪ್ರಕಾರ ಕುಟುಂಬಕ್ಕೆ ಪರಿಹಾರ ಸಿಗುವ ಸಾಧ್ಯತೆ ಇರುತ್ತದೆ. ಮರಣವನ್ನು ಪಾಲಿಸಿಯ ನಿಯಮಗಳ ಪ್ರಕಾರ ಅಪಘಾತದಿಂದ ಸಂಭವಿಸಿದ ಸಾವು ಎಂದು ಪರಿಗಣಿಸಬೇಕು ಮತ್ತು ಎಲ್ಲಾ ಷರತ್ತುಗಳು ಅನ್ವಯಿಸಬೇಕು.
ಕ್ಲೇಮ್ ಗೆ ಬೇಕಾಗುವ ದಾಖಲೆಗಳು
ಕ್ಲೇಮ್ ಸಲ್ಲಿಸಲು ಆಸ್ಪತ್ರೆಯ ಡಿಸ್ಚಾರ್ಜ್ ಸಮರಿ, ವೈದ್ಯರ ವರದಿ, ಪರೀಕ್ಷಾ ವರದಿ, ಕ್ಲೇಮ್ ಫಾರ್ಮ್ ಹಾಗೂ ವಿಮೆ ಪಾಲಿಸಿಯ ದಾಖಲೆಗಳನ್ನು ಸಲ್ಲಿಸಬೇಕು. ದಾಖಲೆಗಳು ಸರಿಯಾಗಿದ್ದರೆ ಕ್ಲೇಮ್ ಪ್ರಕ್ರಿಯೆ ವೇಗವಾಗಿ ಪೂರ್ಣಗೊಳ್ಳುತ್ತದೆ.
Snake Bite: ನೀರಿನಲ್ಲಿ ಹಾವುಗಳು ಕಚ್ಚುವುದಿಲ್ಲ ಎಂಬುದು ನಿಜವೇ? ಸತ್ಯ ಇಲ್ಲಿದೆ
ಯಾವಾಗ ಕ್ಲೇಮ್ ಸಿಗುವುದಿಲ್ಲ?
ಪಾಲಿಸಿ ಅವಧಿ ಮುಗಿದಿದ್ದರೆ, ಚಿಕಿತ್ಸೆ ಪಾಲಿಸಿಯ ವ್ಯಾಪ್ತಿಗೆ ಬರದಿದ್ದರೆ ಅಥವಾ ಅಗತ್ಯ ದಾಖಲೆಗಳು ಇಲ್ಲದಿದ್ದರೆ ವಿಮಾ ಕಂಪನಿ ಕ್ಲೇಮ್ ತಿರಸ್ಕರಿಸಬಹುದು.
ವಿಮೆ ಖರೀದಿ ವೇಳೆ ಇದು ನೆನಪಿರಲಿ
ಆರೋಗ್ಯ ವಿಮೆ ಅಥವಾ ಪರ್ಸನಲ್ ಆಕ್ಸಿಡೆಂಟ್ ವಿಮೆ ತೆಗೆದುಕೊಳ್ಳುವ ಮೊದಲು ಅದರ ನಿಯಮಗಳು, ಕವರ್ ಆಗುವ ಸೌಲಭ್ಯಗಳು ಮತ್ತು ವಿನಾಯಿತಿಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ. ಸರಿಯಾದ ಸಮಯದಲ್ಲಿ ಸರಿಯಾದ ವಿಮೆ ನಿಮ್ಮ ಚಿಕಿತ್ಸೆಯ ಆರ್ಥಿಕ ಹೊರೆ ಕಡಿಮೆ ಮಾಡಲು ನೆರವಾಗಬಹುದು.


