ಭಾರತೀಯ ಸಂಸ್ಕೃತಿಯಲ್ಲಿ, ವಿಶೇಷವಾಗಿ ಮದುವೆಯ ರಾತ್ರಿ ನವದಂಪತಿಗಳಿಗೆ ವೀಳ್ಯೆದೆಲೆ ನೀಡುವ ಸಂಪ್ರದಾಯವಿದೆ. ಇದು ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆಯಿದ್ದರೂ, ಅದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ. ಮುಖ್ಯವಾಗಿ, ವೀಳ್ಯೆದೆಲೆಯು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆಬಾಯಿಯನ್ನು ತಾಜಾವಾಗಿರುತ್ತೆ.

ಭಾರತೀಯರ ಪ್ರತಿ ಮನೆಯಲ್ಲೂ ವೀಳ್ಯೆದೆಲೆ ಇರುತ್ತೆ. ರಾತ್ರಿ ಊಟದ ಬಳಿಕ ಪಾನ್(ವೀಳ್ಯದೆಲೆ) ಜಗಿಯುವುದು ಹಿಂದಿನಿಂದಲೂ ಅಭ್ಯಾಸವಾಗಿದೆ. ಮದುವೆಯ ದಿನ ರಾತ್ರಿ ವಧು-ವರರಿಗೆ ಪಾನ್ ತಿನ್ನಿಸಲಾಗುತ್ತೆ. ಊಟದ ಬಳಿಕ ಅತಿಥಿಗಳಿಗೂ ಪಾನ್ ನೀಡುವುದು ನೀವು ಗಮನಿಸಿರುತ್ತಿರಿ

ಈಗ ಕಾಲ ಬದಲಾದಂತೆ ಪ್ರತಿದಿನ ಪಾನ್‌ ತಿನ್ನುವವರ ಸಂಖ್ಯೆ ಕಡಿಮೆ ಆಗಿರಬಹುದು. ಮದುವೆಯಂತಹ ವಿಶೇಷ ಸಂದರ್ಭಗಳಲ್ಲಿ ಪಾನ್ ತಿನ್ನುವ ಸಂಪ್ರದಾಯ ಇನ್ನೂ ಮುಂದುವರೆದಿದೆ. ವಿಶೇಷವಾಗಿ ಮದುವೆ ದಿನ ನವದಂಪತಿಗಳಿಗೆ ಪಾನ್ ತಿನ್ನಿಸಲಾಗುತ್ತೆ. ಮದುವೆಯ ರಾತ್ರಿ ಪಾನ್ ಏಕೆ ತಿನ್ನಿಸಲಾಗುತ್ತೆ? ಅಥವಾ ರಾತ್ರಿ ಊಟದ ಬಳಿಕ ಪಾನ್ ತಿನ್ನುವುದೇಕೆ? ಇದರ ಹಿಂದಿನ ಆಸಕ್ತಿದಾಯಕ ಕಾರಣ ಇಲ್ಲಿದೆ.

ಮದುವೆಯ ರಾತ್ರಿ ವಿಳ್ಯದೆಲೆ ಏಕೆ ತಿನ್ನಿಸಲಾಗುತ್ತೆ?

ಭಾರತೀಯ ಸಂಸ್ಕೃತಿಯಲ್ಲಿ ವೀಳ್ಯದೆಲೆ ಶುಭ ವಸ್ತು. ಪೂಜೆಗಳಿಂದ ಹಿಡಿದು ಮದುವೆ ಸಮಾರಂಭಗಳವರೆಗೆ ವೀಳ್ಯದೆಲೆ ಎಲೆಗಳನ್ನು ಬಳಸಲಾಗುತ್ತದೆ. ಊಟದ ನಂತರ ಅತಿಥಿಗಳಿಗೆ ಪಾನ್ ನೀಡುವ ಒಂದು ಪ್ರಾಚೀನ ಸಂಪ್ರದಾಯವೂ ಇದೆ. ನವವಿವಾಹಿತರಿಗೆ ಅವರ ಮದುವೆಯ ನಂತರ ಪಾನ್ ನೀಡುವುದು ಅನೇಕ ಸಮುದಾಯ, ಸ್ಥಳಗಳಲ್ಲಿ ಸಂಪ್ರದಾಯ. ಮದುವೆಯ ರಾತ್ರಿ, ಪಾನ್ ತಿನ್ನುವುದು ವೈವಾಹಿಕ ಜೀವನದಲ್ಲಿ ಹೊಸ ಆರಂಭದ ಸಂಕೇತವಾಗಿದೆ. ನವವಿವಾಹಿತರು ಪಾನ್ ತಿನ್ನುವುದರಿಂದ ಪ್ರೀತಿ ಹೆಚ್ಚುತ್ತದೆ ಎಂಬ ನಂಭಿಕೆಯಿದೆ.

ರಾತ್ರಿ ಊಟದ ಬಳಿಕ ಪಾನ್ ತಿನ್ನುವುದರಿಂದ ಕಾಮಾಸಕ್ತಿ ಹೆಚ್ಚಿಸುತ್ತಾ?

ಸಾಂಪ್ರಾದಾಯಿಕ ನಂಬಿಕೆಗಳ ಪ್ರಕಾರ ರಾತ್ರಿ ಊಟದ ಬಳಿಕ ವೀಳ್ಯದೆಲೆ ತಿನ್ನುವುದರಿಂದ ಕಾಮಾಸಕ್ತಿ ಬಯಕೆ ಹೆಚ್ಚುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಮದುವೆಯ ರಾತ್ರಿ ನವದಂಪತಿಗಳಿ ಪಾನ್(ವೀಳ್ಯೆದೆಲೆ) ನೀಡಲು ಕಾರಣವೆಂದು ಹೇಳಲಾಗಿದೆ. ಈ ಸಂಪ್ರಾದಾಯ ನಿನ್ನೆ ಮೊನ್ನೆಯದಲ್ಲ ಪ್ರಾಚೀನದಿಂದಲೂ ಭಾರತೀಯ ನಂಬಿಕೆ. ಪಾನ್ ತಿನ್ನುವುದರಿಂದ ದೇಹ ಉಲ್ಲಾಸಿತಗೊಳ್ಳುತ್ತದೆ. ದೈಹಿಕ ಬಯಕೆ ಹೆಚ್ಚಿಸುತ್ತದೆ ಎಂದು ನಂಬಿದ್ದರು. ಆದರೆ ಆದರೆ ನಿಜವಾಗಿಯೂ ಪಾನ್ ತಿನ್ನುವುದರಿಂದ ಕಾಮಾಸಕ್ತಿ ಹೆಚ್ಚುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಮದುವೆಯ ರಾತ್ರಿ ಪಾನ್ ತಿನ್ನುವುದು ಒಂದು ಸಂಪ್ರಾದಾಯವಾಗಿ ಮುಂದುವರಿದಿರಬಹುದು.

ಮೌತ್ ಫ್ರೆಶ್ ಆಗಿರಲಿ ಪಾನ್ ತಿನ್ನುವುದು

ಪಾನ್ ತಿನ್ನಲು ಇನ್ನೊಂದು ಪ್ರಮುಖ ಕಾರಣವೆಂದರೆ, ಊಟದ ಬಳಿಕ ಪಾನ್ ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ ಅಷ್ಟೇ ಅಲ್ಲದೆ ಬಾಯಿ ವಾಸನೆ ತಡೆಯುವುದು. ವಿಶೇಷವಾಗಿ ಸಿಹಿ ಪಾನ್‌ನಲ್ಲಿ ಸೋಂಪು, ಏಲಕ್ಕಿ, ಗುಲ್ಕಂಡ್‌ನಂತಹ ಪದಾರ್ಥ ಸೇರಿಸಲಾಗುತ್ತೆ. ಪಾನ್‌ನ ರುಚಿ ಸುವಾಸನೆ ಹೆಚ್ಚಿಸುತ್ತೆ. ಏಲಕ್ಕಿ, ಸೋಂಪು ಸುವಾಸನೆಯ ಪಾನ್ ತಿನ್ನುವುದರಿಂದ ಬಾಯಿ ಫ್ರೆಶ್ ಆಗಿರುತ್ತೆ. ಆದ್ದರಿಂದಲೇ ಊಟದ ನಂತರ ಪಾನ್‌ ತಿನ್ನುವುದು ಸಾಮಾನ್ಯ. ಕೆಲವರಿಗೆ ಊಟದ ನಂತರ ಪಾನ್ ಬೇಕೇಬೇಕು.

ಪಾನ್(ವೀಳ್ಯದೆಲೆ) ಬಗ್ಗೆ ಆಯುರ್ವೇದ ಹೇಳೋದೇನು?

ಸಾಂಪ್ರಾದಾಯಿಕ ಹಾಗೂ ಆಯುರ್ವೇದಗಳಲ್ಲಿ ಹಿಂದಿನಿಂದಲೂ ವಿಳ್ಯದೆಲೆ ಬಳಸಲಾಗುತ್ತಿದೆ. ವಿಳ್ಯದೆಲೆ ಹಲವು ಔಷಧಿಯ ಗುಣಗಳನ್ನು ಹೊಂದಿದೆ. ಅವುಗಳನ್ನ ಜನಪ್ರಿಯ ಮನೆಮದ್ದಾಗಿಯೂ ಬಳಸಲಾಗುತ್ತೆ. ಆದರೂ ಯಾವುದೇ ಕಾಯಿಲೆಗೆ ಚಿಕಿತ್ಸೆ ನೀಡಲು ವಿಳ್ಯದೆಲೆ ಅವಲಂಬಿಸುವುದು ಒಳ್ಳೆಯದಲ್ಲ ನರಹುಲಿ ನಿವಾರಣೆಗೆ, ಇತರ ಚರ್ಮದ ಸಮಸ್ಯೆಗಳಿಗೆ ವೀಳ್ಯದ ಎಲೆಗಳನ್ನು ಬಳಸುವ ಅನೇಕ ಸಾಂಪ್ರದಾಯಿಕ ಪರಿಹಾರಗಳಿವೆ. ಅದೇ ರೀತಿ, ಮೊಡವೆಗಳಿಗೆ ಬಿಸಿಮಾಡಿದ ವೀಳ್ಯದ ಎಲೆಗಳನ್ನು ಹಚ್ಚುವ ಮನೆಮದ್ದಾಗಿ ಬಳಕೆಯಾಗುತ್ತೆ.ಆದರೆ ಯಾವುದೇ ಕಾಯಿಲೆ ಅಥವಾ ಸೋಂಕು ಗಂಭೀರ ಚರ್ಮದ ಸಮಸ್ಯೆಯಾಗಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.