ಕಾರು ಮಾಲೀಕನ ಸರ್‌ಫ್ರೈಸ್‌ಗೆ ಮಕ್ಕಳು ಫುಲ್ ಖುಷ್: ಟ್ರಾಫಿಕ್‌ನಲ್ಲಿ ಕಾರಿನ ಗ್ಲಾಸ್ ಕ್ಲೀನ್ ಮಾಡ್ತಿದ್ದ ಪುಟಾಣಿಗಳು
ಟ್ರಾಫಿಕ್‌ನಲ್ಲಿ ತನ್ನ ಕಾರಿನ ಗ್ಲಾಸ್ ಕ್ಲೀನ್ ಮಾಡಲು ಬಂದ ಬೀದಿಯ ಮಕ್ಕಳಿಗೆ ಕಾರಿನ ಮಾಲೀಕರೊಬ್ಬರು ಸರ್ಫ್ರೈಸ್ ನೀಡಿದ್ದು, ಇದರಿಂದ ಮಕ್ಕಳು ಫುಲ್ ಖುಷಿಯಾಗಿದ್ದಾರೆ. ಹಾಗೆಯೇ ಬೀದಿಯ ಮಕ್ಕಳಿಗೆ ಪ್ರೀತಿ ತೋರಿದ್ದ ಕಾರು ಮಾಲೀಕರೊಬ್ಬರ ಸ್ಟೋರಿ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ ಆಗಿದೆ.
ತುತ್ತಿನ ಚೀಲ ತುಂಬುವುದಕ್ಕಾಗಿ ಅನೇಕರು ಪಾಡಬಾರದ ಪಾಡು ಪಡುತ್ತಾರೆ. ಕೆಲ ಮಕ್ಕಳಿಗಂತೂ ಬಾಲ್ಯದಲ್ಲಿಯೇ ಇಡೀ ಕುಟುಂಬದ ಹೊಟ್ಟೆ ತುಂಬಿಸುವ ಹೊಣೆ ಹೆಗಲ ಮೇಲೇರುತ್ತದೆ. ಮತ್ತೆ ಕೆಲ ಮಕ್ಕಳು ಯಾವುದೋ ಮಾಫಿಯಾಗಳಿಗೆ ತುತ್ತಾಗಿ ಬಾಲ್ಯದಲ್ಲಿಯೇ ಪಡಬಾರದ ಕಷ್ಟಪಡುತ್ತಾರೆ. ಓದು ವಿದ್ಯಾಭ್ಯಾಸದ ಜೊತೆ ಅಪ್ಪ ಅಮ್ಮನ ಪ್ರೀತಿಯ ಅಕ್ಕರೆಯೊಂದಿಗೆ ಕಳೆಯಬೇಕಾದ ಸ್ವಚಂದದ ಬಾಲ್ಯವನ್ನು ಧೂಳಿನಿಂದ ತುಂಬಿದ ವಾಹನ ದಟ್ಟಣೆಯ ರಸ್ತೆಗಳಲ್ಲಿ ಪೆನ್ನು ಪುಸ್ತಕ, ಆಟದ ಸಾಮಾನುಗಳನ್ನು ಮಾರುತ್ತಾ ಕಳೆಯುತ್ತಾರೆ. ಹೀಗೆ ಟ್ರಾಫಿಕ್ ಇರುವ ರಸ್ತೆಗಳಲ್ಲಿ ಕೆಂಪು ಲೈಟ್ ಉರಿದಂತೆ ಈ ಮಕ್ಕಳು ನಿಂತ ಕಾರುಗಳ ಹಿಂದೆ ಮುಂದೆ ಹೋಗಿ ಕಾರಿನ ಗ್ಲಾಸು ಕ್ಲೀನ್ ಮಾಡುವ ಕೆಲಸ ಮಾಡುತ್ತಾರೆ, ಮತ್ತೆ ಕೆಲವರು ಪೆನ್ ಪುಸ್ತಕ ಮಾಸ್ಕ್ ಮಾರಾಟ ಮಾಡುತ್ತಾರೆ. ಹೀಗೆ ಟ್ರಾಫಿಕ್‌ನಲ್ಲಿ ತನ್ನ ಕಾರಿನ ಗ್ಲಾಸ್ ಕ್ಲೀನ್ ಮಾಡಲು ಬಂದ ಬೀದಿಯ ಮಕ್ಕಳಿಗೆ ಕಾರಿನ ಮಾಲೀಕರೊಬ್ಬರು ಸರ್ಫ್ರೈಸ್ ನೀಡಿದ್ದು, ಇದರಿಂದ ಮಕ್ಕಳು ಫುಲ್ ಖುಷಿಯಾಗಿದ್ದಾರೆ. ಹಾಗೆಯೇ ಬೀದಿಯ ಮಕ್ಕಳಿಗೆ ಪ್ರೀತಿ ತೋರಿದ್ದ ಕಾರು ಮಾಲೀಕರೊಬ್ಬರ ಸ್ಟೋರಿ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ ಆಗಿದೆ.
ಕವಲ್ ಜಿತ್ ಸಿಂಗ್ ಛಬ್ರಾ (@kawalchhabra) ಎಂಬುವವರು ಈ ಮನ ಮಿಡಿಯುವ ನೈಜ ಕತೆಯನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕವಲ್ ಜಿತ್ ಸಿಂಗ್ ಅವರು ತಮ್ಮ ಕಾರಿನಲ್ಲಿ ರಾತ್ರಿಯ ಭೋಜನ ಸೇವಿಸುವುದಕ್ಕಾಗಿ ತೆರಳುತ್ತಿದ್ದಾಗ ಈ ಮಕ್ಕಳು ಅವರಿಗೆ ಎದುರಾಗಿದ್ದಾರೆ. ಟ್ರಾಫಿಕ್‌ನಲ್ಲಿ ಕಾರು ನಿಂತ ಕೂಡಲೇ ಹತ್ತಿರ ಬಂದ ಮಕ್ಕಳು ತಾವು ನಿಮ್ಮ ಕಾರಿನ ಗ್ಲಾಸ್ ಕ್ಲೀನ್ ಮಾಡುತ್ತೇವೆ ನಮಗೆ 10 ರೂಪಾಯಿ ನೀಡಿ ಎಂದು ಕೇಳಿದ್ದಾರೆ. ಈ ವೇಳೆ ಕವಲ್ ಜಿತ್ ಏಕೆ 10 ರೂಪಾಯಿ ಅದರಲ್ಲೇನು ಮಾಡುತ್ತೀರಿ ಎಂದು ಕೇಳಿದ್ದಾರೆ. ಈ ವೇಳೆ ಮಕ್ಕಳು ನಗರದ ಪ್ರಸಿದ್ಧ ಹೊಟೇಲೊಂದರ ಮುಂದೆ ಇರುವ ಆಹಾರದ ತಳ್ಳುಗಾಡಿಯಲ್ಲಿ ಆಹಾರ ತಿನ್ನುವುದಕ್ಕಾಗಿ ಈ ಕೆಲಸ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಈ ವೇಳೆ ಮಕ್ಕಳೆನ್ನೆಲ್ಲಾ ತಮ್ಮ ಕಾರಿನಲ್ಲಿ ಕೂರಿಸಿಕೊಳ್ಳುವ ಅವರು ಅವರನ್ನು ಹೊಟೇಲೊಂದಕ್ಕೆ ಕರೆತರುತ್ತಾರೆ.
ಹೊಟ್ಟೆಪಾಡು: ಸೊಂಟಕ್ಕೆ ಮಗು ಕಟ್ಟಿಕೊಂಡು ರಿಕ್ಷಾ ಚಾಲನೆ ಮಾಡುತ್ತಿರುವ ತಾಯಿ
ಹೀಗೆ ಸ್ವಾಂಕಿ ಹೊಟೇಲ್‌ಗೆ (Swanky Hotel) ಬಂದ ವೇಳೆ ಮಕ್ಕಳ ಗುಂಪಿನಲ್ಲಿದ್ದ ಓರ್ವ ಹುಡುಗ ಆಹಾರ ನೀಡುವ ತಳ್ಳುಗಾಡಿ ಹೊರಭಾಗದಲ್ಲಿದೆ ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಮುಗ್ಧತೆಯಿಂದ ಕೇಳುತ್ತಾನೆ. ಅಲ್ಲದೇ ಮಕ್ಕಳು ತಮ್ಮ ಈ ಹೊಟೇಲ್‌ಗೆ ಮೊದಲ ಬಾರಿ ಬಂದಿದ್ದು, ಭಾರೀ ಉತ್ಸಾಹದಲ್ಲಿರುವುದು ಅವರ ಮುಖದಲ್ಲಿ ಎದ್ದು ಕಾಣುತ್ತಿದೆ. ನಂತರ ಛಬ್ರಾ ಅವರು ಪಿಜ್ಜಾದಿಂದ ಗೊಲ್ಗಪ್ಪವರೆಗೆ ಹಲವು ರೀತಿಯ ಭೋಜನಗಳನ್ನು ಮಕ್ಕಳಿಗೆ ಆರ್ಡರ್ ಮಾಡುತ್ತಾರೆ. ಬಫೆಟ್ ಮೂಲಕ ಹಲವು ರೀತಿಯ ಆಹಾರ ಸಿಹಿ ತಿನ್ನಿಸುಗಳನ್ನು ಮಕ್ಕಳು ಸವಿಯುತ್ತಾರೆ. ಈ ವೀಡಿಯೋ ಈಗ ಸಖತ್ ವೈರಲ್ ಆಗಿದ್ದು, ಕಾರು ಮಾಲೀಕನ ಮಾನವೀಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಗಂಡು ಮಕ್ಕಳಿಗೆ ಅಪ್ಪ ಏನು ಕಲಿಸಬೇಕೆಂದು ಹೇಳಿಕೊಟ್ಟ ನಟಿ ಸಾಯಿ ಪಲ್ಲವಿ!
ಈ ಮಕ್ಕಳು ಟ್ರಾಫಿಕ್ (Traffic) ದಟ್ಟಣೆಯಲ್ಲಿ ನಿಂತ ಕಾರಿನ ಬಳಿ ಸಿಕ್ಕಿದರು. ಪಂಚತಾರಾ (Fivestar Hotel) ಹೊಟೇಲೊಂದರ ಸಮೀಪವಿದ್ದ ತಳ್ಳುಗಾಡಿಯಲ್ಲಿ ಆಹಾರ ಸೇವಿಸುವುದಕ್ಕಾಗಿ ಈ ಮಕ್ಕಳು ಟ್ರಾಫಿಕ್‌ನಲ್ಲಿ ಕಾರಿನ ಗ್ಲಾಸ್ ಕ್ಲೀನ್ ಮಾಡುತ್ತಿದ್ದರು. ಇವರಿಗೆ ಹಣ ನೀಡುವ ಬದಲು ನಾನು ಅವರನ್ನು ಕಾರು ಹತ್ತುವಂತೆ ಕರೆದೆ ಆದರೆ ಅವರು ಹೊರಗಿನಿಂದ ನೋಡಿದ್ದ ಫೈವ್ ಸ್ಟಾರ್ ಹೊಟೇಲ್‌ಗೆ ನಾನು ಅವರನ್ನು ಕರೆದೊಯ್ದಾಗ ಅವರ ಕಣ್ಣು ಕುತೂಹಲ ಆಶ್ಚರ್ಯದಿಂದ ಅರಳಿತು. ಅವರ ಬದುಕಿನಲ್ಲಿ ಅವರು ಮೊದಲ ಸಾರಿ ಈ ಫೈವ್ ಸ್ಟಾರ್ ಊಟವನ್ನು ನೋಡಿದ್ದರು. ಒಟ್ಟಿಗೆ ಕುಳಿತ ನನಗೆ ಅವರ ಮುಖದಲ್ಲಿ ಖುಷಿ ಇರುವುದು ನನಗೆ ಕಾಣಿಸಿತು. ಭೋಜನ ಸವಿದ ಅವರು ನನಗೆ 100ಕ್ಕೂ ಹೆಚ್ಚು ಬಾರಿ ಧನ್ಯವಾದ ಹೇಳಿದರು. ಇದು ನನನ್ನು ಅಳವಾಗಿ ಭಾವುಕನನ್ನಾಗಿಸಿತು. ಇಂತಹ ಭಾವುಕ ಕ್ಷಣ ಸೃಷ್ಟಿಸಲು ಸಾಧ್ಯವಾಗಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ಜೀವನದ ಸುಂದರ ಕ್ಷಣಗಳು ಕೇವಲ ನಮ್ಮ ಆಸೆಗಳನ್ನು ಈಡೇರಿಸಿಕೊಳ್ಳುವುದರಿಂದ ಅಲ್ಲ ಇತರರ ಕನಸನ್ನು ಸಾಕಾರಗೊಳಿಸುವುದರಿಂದ ನಿರ್ಮಾಣವಾಗುತ್ತದೆ ಎಂದು ಛಬ್ರಾ ಅವರು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ವೀಡಿಯೋವನ್ನು 32 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, 4 ಮಿಲಿಯನ್‌ಗೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ಈ ಬೀದಿಯ ಮಕ್ಕಳಲ್ಲಿ ನಗು ತಂದ ಛಬ್ರಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ತವರಲ್ಲೇ ಬಿಸಿಯೂಟಕ್ಕೆ ಪುಟ್ಟ ಮಕ್ಕಳು 2 ಕಿಮೀ ಬಿಸಿಲಲ್ಲಿ ಅಲೆದಾಟ!