Asianet Suvarna News Asianet Suvarna News

ಹೊಟ್ಟೆಪಾಡು: ಸೊಂಟಕ್ಕೆ ಮಗು ಕಟ್ಟಿಕೊಂಡು ರಿಕ್ಷಾ ಚಾಲನೆ ಮಾಡುತ್ತಿರುವ ತಾಯಿ

ಬದುಕಿನಲ್ಲಿ ವಿಧಿ, ಅದೃಷ್ಟ ಕೈಕೊಟ್ಟಾಗ ವಿಧಿಗೆ ಸಡ್ಡು ಹೊಡೆದು ನಾ ಬದುಕಿಯೇ ತೀರುವೆ ಎಂದು ತೋರಿಸಿಕೊಟ್ಟವರು ನೋಯ್ಡಾದ ಈ ಚಂಚಲ್ ಶರ್ಮಾ. 

woman driving E-rickshaw with her one year old son in UP's Noida akb
Author
First Published Sep 25, 2022, 12:12 PM IST

ನೋಯ್ಡಾ: ಜೀವನದಲ್ಲಿ ಯಾವುದೂ ಸರಿಯಾದ ಮಾರ್ಗದಲ್ಲಿ ಸಾಗುತ್ತಿಲ್ಲ. ಆದರೆ ಬದುಕದೇ ವಿಧಿಯಿಲ್ಲ. ಬದುಕು ಸಾಗಿಸಲು ಸವಾಲುಗಳನ್ನು ಎದುರಿಸುವುದು ಬಿಟ್ಟು ಬೇರೆ ದಾರಿ ಇಲ್ಲ ಎಂಬುದು ಅರಿವಾದಾಗಲೇ ಹೊಸದಂದು ಮಾರ್ಗ ಕಾಣಿಸುತ್ತದೆ. ಒಂದರ ಅಂತ್ಯ ಮತ್ತೊಂದರ ಆರಂಭಕ್ಕೆ ಕಾರಣವಾಗುತ್ತದೆ. ಅದೇ ರೀತಿ ಬದುಕಿನಲ್ಲಿ ವಿಧಿ, ಅದೃಷ್ಟ ಕೈಕೊಟ್ಟಾಗ ವಿಧಿಗೆ ಸಡ್ಡು ಹೊಡೆದು ನಾ ಬದುಕಿಯೇ ತೀರುವೆ ಎಂದು ತೋರಿಸಿಕೊಟ್ಟವರು ನೋಯ್ಡಾದ ಈ ಚಂಚಲ್ ಶರ್ಮಾ. 

27ರ ಹರೆಯದ ಒಂದು ಮಗುವಿನ ಏಕಾಂಗಿ ಪೋಷಕರಾಗಿರುವ ಈ ಚಂಚಲ್ ಶರ್ಮಾ ಈಗ ನೋಯ್ದಾ ನಗರದ ಜನರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಇದಕ್ಕೆ ಕಾರಣವಾಗಿರುವುದು ಆಟೋ ಚಾಲನೆ, ಒಂದು ವರ್ಷದ ಮಗುವನ್ನು ಸೊಂಟಕ್ಕೆ ನೇತು ಹಾಕಿಕೊಂಡು ಅವರು ಬದುಕಿನ ಬಂಡಿ ಮುನ್ನಡೆಸಲು ಇ ಆಟೋ ಚಾಲನೆ (E-rickshaw driver) ಮಾಡುತ್ತಿದ್ದಾರೆ. 

ಕಳೆದೋದ ಕಂದನ ಹುಡುಕಿಕೊಟ್ಟ ಅರಣ್ಯ ಸಿಬ್ಬಂದಿ: ಥ್ಯಾಂಕ್ಸ್ ಹೇಳಿದ ಅಮ್ಮ

ಮಗುವಾದ ನಂತರ ಪತಿ ತೊರೆದು ಹೋದ ಬಳಿಕ ಧೈರ್ಯಗೆಡದ ಚಂಚಲಾ ಶರ್ಮಾ (Chanchal Sharma), ಸ್ವಾಭಿಮಾನಿಯಾಗಿ ಬದುಕು ಮುನ್ನಡೆಸುತ್ತಿದ್ದಾರೆ. ಹಾಗಂತ ಈ ರಿಕ್ಷಾ ಚಾಲನೆಯ ಕೆಲಸವೂ ಅವರಿಗೆ ಸುಲಭವಾಗಿ ಸಿಕ್ಕಿಲ್ಲ, ನೂರೆಂಟು ಅಡ್ಡಿ ಆತಂಕಗಳು ಅದಕ್ಕೂ ಎದುರಾಗಿದ್ದವು. ನೋಯ್ಡಾದ ಕೆಲವು ಮಾರ್ಗಗಳಲ್ಲಿ ಸಂಚರಿಸದಂತೆ ಈಗಾಗಲೇ ಇರುವ ಇ-ರಿಕ್ಷಾ ಆಟೋ ಚಾಲಕರು ಆಕೆಗೆ ತಡೆ ಒಡ್ಡಿದ್ದರು. ಆದರೆ ಟ್ರಾಫಿಕ್ ಪೊಲೀಸರು ಹಾಗೂ ಎಐಬಿ ಔಟ್‌ಪೋಸ್ಟ್ (AIB outpost) ಸಿಬ್ಬಂದಿ ಚಂಚಲಾರನ್ನು ಬೆಂಬಲಿಸಿದರು. ಪರಿಣಾಮ ಈಗ ಚಂಚಲಾಗೆ ಯಾವುದೇ ಭಯವಿಲ್ಲ. ಪ್ರಸ್ತುತ ಚಂಚಲಾ ನೋಯ್ಡಾದ ಸೆಕ್ಟರ್ 62ರಲ್ಲಿ ಲೇಬರ್ ಚೌಕ್‌ನಿಂದ(Labour Chowk)  ಸಾಯಿ ಮಂದಿರ, ಕಾಲಾ ಪತ್ತರ್ (Kala Patthar)  ಹಾಗೂ ಪೆಹ್ಲಾ ಪುಸ್ತ (Pehla Pusta) ಪ್ರದೇಶಗಳಿಗೆ ಆಟೋ ಸರ್ವಿಸ್ ನೀಡುತ್ತಾರೆ. 

ಪ್ರಸ್ತುತ ನಾನು ಆಟೋ ಇ-ರಿಕ್ಷಾವನ್ನು ಚಾಲನೆ ಮಾಡುತ್ತಿದ್ದೇನೆ. ನನ್ನ ಮಗ ತುಂಬಾ ಚಿಕ್ಕವನು, ಬೇರೆಲ್ಲಾದರು ಕೆಲಸಕ್ಕೆ ಹೋದರೆ ಆತನನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಆದರೆ ಆಟೋ ಓಡಿಸುವುದರಿಂದ ನಾನು ನನ್ನ ಮಗುವನ್ನು ಜೊತೆಯಲ್ಲೇ ಕರೆದೊಯ್ಯಬಹುದು. ಕೆಲವೊಮ್ಮೆ ನಾನು ನನ್ನ ತಾಯಿಯೊಂದಿಗೆ ಖೋಡ ಕಾಲೋನಿಯಲ್ಲಿ ವಾಸ ಮಡುತ್ತೇನೆ. ಮತ್ತೆ ಕೆಲವೊಮ್ಮೆ ನನ್ನ ಸಹೋದರಿಯ ಜೊತೆ ಇರುತ್ತೇನೆ ಎಂದು ಚಂಚಲಾ ಹೇಳಿದರು. 

11 ಜನ ಮಕ್ಕಳಿದ್ದರೂ ಒಬ್ಬಂಟಿ ಈ ತಾಯಿ, 78ರ ಇಳಿವಯಸ್ಸಿನಲ್ಲಿ ದಯಾಮರಣಕ್ಕೆ ಹೆತ್ತವ್ವ ಮನವಿ!

ಗಂಡ ತೊರೆದು ಹೋದ ಬಳಿಕ ಚಂಚಲಾ ಸ್ವಾಭಿಮಾನದಿಂದ ಗೌರವದಿಂದ ಬದುಕಲು ನಿರ್ಧರಿಸಿದರು. ಅಲ್ಲದೇ ಹಣಕ್ಕಾಗಿ ಜೀವನೋಪಾಯಕ್ಕಾಗಿ ಆತನ ಬಳಿಗೆ ಮರಳಿ ಹೋಗಲು ಆಕೆ ಬಯಸಲಿಲ್ಲ. ಹೀಗಾಗಿ ಅವರು ಆಟೋ ಚಾಲಕಳಾಗಿ ಕೆಲಸ ಮಾಡಲು ನಿರ್ಧರಿಸಿದರು. ಚಂಚಲಾ ಆಟೋ ಚಾಲನೆಯಿಂದ ದಿನಕ್ಕೆ 300 ರಿಂದ 400 ರೂಪಾಯಿ  ದುಡಿಯುತ್ತಿದ್ದು, ತನ್ನ ಹಾಲುಗಲ್ಲದ ಕಂದನೊಂದಿಗೆ ಬದುಕುತ್ತಿದ್ದಾರೆ. ಮಗುವನ್ನು ಸೊಂಟದಲ್ಲಿ ಸಿಕ್ಕಿಸಿಕೊಂಡು ಚಂಚಲಾ ಆಟೋ ಚಾಲನೆ ಮಾಡುತ್ತಾರೆ. 

2019ರಲ್ಲಿ ಅಂದರೆ ಮೂರು ವರ್ಷದ ಹಿಂದೆ ಚಂಚಲಾ ಗೌತಮ್ ಬುದ್ಧ ನಗರ ಜಿಲ್ಲೆಯ ದದ್ರಿ (Dadri) ಪಟ್ಟಣದ ಛಯನ್ಸ(Chhayansa village)  ಗ್ರಾಮದ ಯುವಕನನ್ನು ಮದುವೆಯಾಗಿದ್ದರು. ಆದರೆ ಆತನ ಕಿರುಕುಳ ತಡೆಯಲಾರದೇ ಮದುವೆಯಾಗಿ ಮೂರು ತಿಂಗಳಿಗೆ ಕೋರ್ಟ್ ಮೆಟ್ಟಿಲೇರುವಂತೆ ಆಗಿತ್ತು. ಪ್ರಕರಣ ಇನ್ನು ಕೋರ್ಟ್‌ನಲ್ಲಿದೆ ಎಂದು ಅವರು ತಮ್ಮ ಬದುಕಿನ ಪಡಿಪಾಟಾಲನ್ನು ಹೇಳಿಕೊಂಡರು. ಲಾಲ್ ಕೌನ್ ಮೂಲದ ಚಂಚಲಾಳ ತಂದೆ ಆಕೆ ಬಾಲ್ಯದಲ್ಲಿರುವಾಗಲೇ ಮೃತಪಟ್ಟಿದ್ದರು. ನಾಲ್ವರು ಸಹೋದರಿಯರನ್ನು ಚಂಚಲಾ ಹೊಂದಿದ್ದು ಎಲ್ಲರಿಗೂ ಮದುವೆಯಾಗಿದೆ. 

Follow Us:
Download App:
  • android
  • ios