ಸಚಿವ ಪ್ರಿಯಾಂಕ್ ಖರ್ಗೆ ತವರಲ್ಲೇ ಬಿಸಿಯೂಟಕ್ಕೆ ಪುಟ್ಟ ಮಕ್ಕಳು 2 ಕಿಮೀ ಬಿಸಿಲಲ್ಲಿ ಅಲೆದಾಟ!
ಹಳ್ಳಿ ಮಕ್ಕಳು, ಅದರಲ್ಲೂ ಹೆಚ್ಚಿನವರು ಬಡವರ ಮಕ್ಕಳು ಈ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾರೆ. ಮಧ್ಯಾಹ್ನ ಸರ್ಕಾರಿ ಶಾಲೆಯಲ್ಲಿ ಕೊಡುವ ಬಿಸಿಯೂಟವನ್ನು ನಂಬಿ ಮಕ್ಕಳನ್ನ ಶಾಲೆಗೆ ಬಿಟ್ಟು ಕೂಲಿಗೆ ಹೋಗುವ ಕೃಷಿ ಕಾರ್ಮಿಕರು ಒಂದು ಕಡೆ, ಇತ್ತ ಬಡ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕಾಗಿ ಪ್ರತಿನಿತ್ಯ ಬಿಸಿಲಲ್ಲೇ ಎರಡು ಕಿಲೋ ಮೀಟರ್ ನಡೆಯುವ ಮಕ್ಕಳು ಒಂದು ಕಡೆ. ಈ ಮಕ್ಕಳ ಕಷ್ಟ ನಿಜಕ್ಕೂ ಮನಮಿಡಿಯುವಂತಿದೆ.
ಚಿತ್ತಾಪುರ (ಡಿ.2): ಹಳ್ಳಿ ಮಕ್ಕಳು, ಅದರಲ್ಲೂ ಹೆಚ್ಚಿನವರು ಬಡವರ ಮಕ್ಕಳು ಈ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾರೆ. ಮಧ್ಯಾಹ್ನ ಸರ್ಕಾರಿ ಶಾಲೆಯಲ್ಲಿ ಕೊಡುವ ಬಿಸಿಯೂಟವನ್ನು ನಂಬಿ ಮಕ್ಕಳನ್ನ ಶಾಲೆಗೆ ಬಿಟ್ಟು ಕೂಲಿಗೆ ಹೋಗುವ ಕೃಷಿ ಕಾರ್ಮಿಕರು ಒಂದು ಕಡೆ, ಇತ್ತ ಬಡ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕಾಗಿ ಪ್ರತಿನಿತ್ಯ ಬಿಸಿಲಲ್ಲೇ ಎರಡು ಕಿಲೋ ಮೀಟರ್ ನಡೆಯುವ ಮಕ್ಕಳು ಒಂದು ಕಡೆ. ಈ ಮಕ್ಕಳ ಕಷ್ಟ ನಿಜಕ್ಕೂ ಮನಮಿಡಿಯುವಂತಿದೆ.
ಹೀಗೆ ಬಿರುಬಿಸಿಲಲ್ಲಿ ಕಲ್ಲು-ಮುಳ್ಳಿನ ಹಾದಿಯಲ್ಲಿ ಹೆಜ್ಜೆಹಾಕ್ತಿರೋ ಸರ್ಕಾರಿ ಶಾಲೆಯ ಪುಟ್ಟ ಮಕ್ಕಳು. ಹೀಗೆ ನೆತ್ತಿಸುಡುವ ಬಿಸಿಲಲ್ಲಿ ಮಕ್ಕಳು ಅಲೆದಾಟ ನಡೆಸುತ್ತಿರೋದು ಮಧ್ಯಾಹ್ನದ ಬಿಸಿಯೂಟಕ್ಕಾಗಿ. ಅರೇ ಶಾಲೆಯಲ್ಲೇ ಬಿಸಿಯೂಟ ನೀಡ್ತಾರಲ್ಲ. ಮತ್ಯಾಕೆ ಬೇರೆಡೆಗೆ ಹೋಗ್ಬೇಕು ಅಂದ್ರಾ? ಅಲ್ಲೇ ಇರೋದು ಕಹಾನಿ ಮೇ ಟ್ವಿಸ್ಟ್.
ಊಟಕ್ಕಾಗಿ ಬಿಸಿಲಲ್ಲಿ ಅಲೆದಾಟ ನಡೆಸುತ್ತಿರೋ ಈ ಮಕ್ಕಳು ವ್ಯಾಸಂಗ ಮಾಡ್ತಿರೋದು ಸಚಿವ ಪ್ರಿಯಾಂಕ್ ಖರ್ಗೆ(Priyank kharge) ಕ್ಷೇತ್ರ ಚಿತ್ತಾಪುರ ತಾಲೂಕಿನ ಲಾಡ್ಲಾಪೂರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ. ಆದ್ರೆ ದುರಂತ ಏನಂದ್ರೆ ಇವರು ಪಾಠ ಕೇಳ್ತಿರೋದೇ ಒಂದು ಶಾಲೆಯಲ್ಲಿ. ಊಟ ಮಾಡ್ತಿರೋದೇ ಮತ್ತೊಂದು ಶಾಲೆಯಲ್ಲಿ..
ಹೆತ್ತ ಮಗನೇ ತಾಯಿಯ ಹೆಣ ಹಾಕಿಬಿಟ್ಟನಾ..? ಪುತ್ರನ ನಡವಳಿಕೆ ಪೊಲೀಸರಿಗೆ ಕೊಟ್ಟಿತ್ತು ಸುಳಿವು ..!
ಲಾಡ್ಲಾಪುರ ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಬೇರೆ ಬೇರೆ ಕಡೆಯಿವೆ. ಆದ್ರೆ ಬಿಸಿಯೂಟ ಅಡುಗೆ ಕೋಣೆ ಹಾಗೂ ಸಿಬ್ಬಂದಿ ಇರೋದು ಪ್ರೌಢಶಾಲೆಯಲ್ಲಿ ಮಾತ್ರ. ಹೀಗಾಗಿ ಪ್ರಾಥಮಿಕ ಶಾಲೆಯ ಒಂದರಿಂದ ಮೂರನೇ ತರಗತಿವರೆಗಿನ ಮಕ್ಕಳು ಬಿಸಿಯೂಟಕ್ಕಾಗಿ 1 ಕಿಲೋ ಮೀಟರ್ ದೂರದಲ್ಲಿರುವ ಪ್ರೌಢಶಾಲೆಗೆ ಹೋಗಬೇಕು. ಪ್ರೌಢಶಾಲೆಯಲ್ಲಿ ಊಟ ಮಾಡಿ ಬಳಿಕ ಪ್ರಾಥಮಿಕ ಶಾಲೆಗೆ ಹಿಂದಿರುಗಬೇಕು.ಹೀಗಾಗಿ ಮಕ್ಕಳು ನಿತ್ಯ ಬಿಸಿಲಲ್ಲಿ 2 ಕಿಲೋ ಮೀಟರ್ ಅಲೆದಾಡಬೇಕಾದ ದುಸ್ಥಿತಿ ಎದುರಾಗಿದೆ
ಗಮನಿಸಿ ಪ್ರಯಾಣಿಕರೇ, ಸೊಲ್ಲಾಪುರ -ಕಲಬುರಗಿ- ಹಾಸನ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ 63 ದಿನ ರದ್ದು!
ಇನ್ನು ಪ್ರಾಥಮಿಕ ಶಾಲೆಯಲ್ಲೇ ಅಡುಗೆ ತಯಾರಿಕೆಗೆ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಮಕ್ಕಳ ಬಿಸಿಯೂಟಕ್ಕಾಗಿ ಅಕ್ಷರ ದಾಸೋಹ ಯೋಜನೆಯಡಿ ಸರ್ಕಾರ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತೆ. ಹೀಗಿದ್ರೂ ಒಂದು ಹೊತ್ತಿನ ಊಟಕ್ಕಾಗಿ ಪುಟ್ಟ ಮಕ್ಕಳು ಸುಡು ಬಿಸಿಲಿನಲ್ಲಿ ಅಲೇಯಬೇಕಾಗಿರುವುದು ನಿಜಕ್ಕೂ ದುರ್ದೈವ. ಇನ್ನಾದ್ರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಮಕ್ಕಳ ಸಮಸ್ಯೆ ಬಗೆಹರಿಸಬೇಕಿದೆ.
Chittapur, Mid Day Meal, Students, Education,