Asianet Suvarna News Asianet Suvarna News

ಗಂಡು ಮಕ್ಕಳಿಗೆ ಅಪ್ಪ ಏನು ಕಲಿಸಬೇಕೆಂದು ಹೇಳಿಕೊಟ್ಟ ನಟಿ ಸಾಯಿ ಪಲ್ಲವಿ!

ಮಕ್ಕಳು ಚಿಕ್ಕವರಿದ್ದಾಗಲೇ ಅವರಿಗೆ ಮಹಿಳೆಯರಿಗೆ ಗೌವರ ಕೊಡುವುದು ಅಭ್ಯಾಸವಾಗಿಬಿಟ್ಟರೆ ಮುಂದೆ ಸಮಾಜದವನ್ನು ದೂಷಿಸುವ ಅಥವಾ ತಿದ್ದುವ ಪರಿಸ್ಥಿತಿಯೇ ಬರುವುದಿಲ್ಲ. ಮನೆಯಲ್ಲಿಯೇ ಮಕ್ಕಳನ್ನು ತಿದ್ದದೇ ಬಿಟ್ಟರೆ, ಮುಂದೆ ಸಮಾಜದಲ್ಲಿ ಅವರನ್ನು ಸರಿ ದಾರಿಗೆ ತರುವವರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. 

Malayalam actress Sai pallavi says husband should give respect to his wife srb
Author
First Published Dec 3, 2023, 1:10 PM IST

ಮಲಯಾಳಂ ಮೂಲದ ಬಹುಭಾಷಾ ನಟಿ ಸಾಯಿ ಪಲ್ಲವಿ ಪೋಷಕರಿಗೆ ಕಿವಿ ಮಾತು ಹೇಳಿದ್ದಾರೆ. ಮಹಿಳೆಯರನ್ನು ಸಮಾಜದಲ್ಲಿ ಹಲವರು ಕೆಟ್ಟದಾಗಿ ಟ್ರೀಟ್ ಮಾಡುವ ಬಗ್ಗೆ ನೊಂದುಕೊಂಡಿರುವ ನಟಿ ಸಾಯಿ ಪಲ್ಲವಿ, ಸಮಾಜದ ಬಗ್ಗೆ ಮಾತನಾಡಿದ್ದಾರೆ. 'ಮನೆಯಲ್ಲಿ ಚಿಕ್ಕ ಮಕ್ಕಳ ಮುಂದೆ ನಾವು ಹೆಂಗಸರನ್ನು ಹೇಗೆ ಟ್ರೀಟ್ ಮಾಡುತ್ತೇವೋ ಹಾಗೆ, ಮಕ್ಕಳು ಸಮಾಜ ನೋಡಿ ಕಲಿಯಿತ್ತಾರೆ. ಮನೆಯೇ ಮೊದಲ ಪಾಠ ಶಾಲೆ, ಅಲ್ಲಿಯೇ ಮಕ್ಕಳು ಸಮಾಜದಲ್ಲಿ ಏನು ಮಾಡಬೇಕು, ಏನು ಮಾಡಬಾರದು, ಏನೇನು ಮಾಡಬಹುದು ಎಂಬುದನ್ನು ಕಲಿಯುತ್ತಾರೆ. 

ಅಪ್ಪ ಅಮ್ಮನ ಜತೆ ಹೇಗೆ ಮಾತನಾಡುತ್ತಾರೆ, ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ನೋಡಿ ಚಿಕ್ಕ ಗಂಡು ಮಕ್ಕಳು ಅದರಂತೆ ಮಹಿಳೆಯರ ಬಗ್ಗೆ ತಮ್ಮ ಭಾವನೆ ಬೆಳೆಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಮಹಿಳೆಯರು ತಮ್ಮ ಗಂಡಂದಿರನ್ನು ಚೆನ್ನಾಗಿ ನಡೆಸಿಕೊಳ್ಳುತ್ತಾರೆ. ಆದರೆ, ಗಂಡಸರು ಹೆಂಗಸನ್ನು ಕೀಳಾಗಿ ಕಾಣುತ್ತಾರೆ. ಇದಕ್ಕೆ ಸಾಕಷ್ಟು ಅಪವಾದಗಳು ಇವೆ. ಆದರೆ, ಸಮಾಜದಲ್ಲಿ ಹೆಚ್ಚಾಗಿ ನಡೆಯುವುದು ಹೆಣ್ಣಿನ ಶೋಷಣೆ, ಅದಕ್ಕೇ ನಾನು ಗಂಡು ಮಕ್ಕಳು ತಮ್ಮ ಅಪ್ಪನನ್ನು ನೋಡಿ ಕಲಿಯುತ್ತಾರೆ ಎಂದು ಹೇಳಿದ್ದು' ಎಂದಿದ್ದಾರೆ. 

ಯಾರದೋ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ, ರಶ್ಮಿಕಾ ಮಂದಣ್ಣ ಉಪದೇಶ ಕೇಳಿ ನೆಟ್ಟಿಗರು ಸುಸ್ತೋ ಸುಸ್ತು!

ಇನ್ನೂ, ಮಕ್ಕಳು ಚಿಕ್ಕವರಿದ್ದಾಗಲೇ ಅವರಿಗೆ ಮಹಿಳೆಯರಿಗೆ ಗೌವರ ಕೊಡುವುದು ಅಭ್ಯಾಸವಾಗಿಬಿಟ್ಟರೆ ಮುಂದೆ ಸಮಾಜದವನ್ನು ದೂಷಿಸುವ ಅಥವಾ ತಿದ್ದುವ ಪರಿಸ್ಥಿತಿಯೇ ಬರುವುದಿಲ್ಲ. ಮನೆಯಲ್ಲಿಯೇ ಮಕ್ಕಳನ್ನು ತಿದ್ದದೇ ಬಿಟ್ಟರೆ, ಮುಂದೆ ಸಮಾಜದಲ್ಲಿ ಅವರನ್ನು ಸರಿ ದಾರಿಗೆ ತರುವವರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೆ, ಮನೆಯಲ್ಲಿಯೇ ಅವರಿಗೆ ಸಂಸ್ಕಾರ ಸರಿಯಾಗಿ ರೂಢಿಯಾಗಿಬಿಟ್ಟರೆ ಸಮಾಜದಲ್ಲಿ ಆ ಸಮಸ್ಯೆಯೇ ಇರುವುದಿಲ್ಲ' ಎಂದು ಸಿನಿಮಾಗೆ ಸಂಬಂಧಪಟ್ಟ ಕಾರ್ಯಕ್ರಮವೊಂದರಲ್ಲಿ  ನಟಿ ಸಾಯಿ ಪಲ್ಲವಿ ಹೇಳಿದ್ದಾರೆ. 

ನಾನು ಗಂಡಸರ ಜತೆ ಕಾಲ ಕಳೆಯುವುದಿಲ್ಲ; ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್

ಅಂದಹಾಗೆ, ನಟಿ ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ನಟನೆಯ 'ಲವ್ ಸ್ಟೋರಿ' ಚಿತ್ರ 2021ರಲ್ಲಿ ತೆರೆಗೆ ಬಂದಿತ್ತು. ಚಿತ್ರವನ್ನು ಪ್ರತೇಕ್ಷರು ಇಷ್ಟಪಟ್ಟಿದ್ದು, ಮತ್ತೊಮ್ಮೆ ಈ ಜೋಡಿ ಮೋಡಿ ಮಾಡಿದೆ. 'ಪ್ರೇಮ ತೀರಂ' ಹಾಗೂ 'ದಿ ವರ್ಲ್ಡ್ #C19'ಚಿತ್ರ  ಕೂಡ ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಜೋಡಿಯಲ್ಲಿಯೇ ತೆರೆಗೆ ಬಂದಿತ್ತು. ಸದ್ಯ ನಟಿ ಸಾಯಿ ಪಲ್ಲವಿ ಸಿನಿಮಾ ಶೂಟಿಂಗ್‌ನಿಂದ ಸಣ್ಣ ಬ್ರೇಕ್ ತೆಗೆದುಕೊಂಡಿದ್ದು, ಮತ್ತೆ ವೃತ್ತಿ ಜೀವನದಲ್ಲಿ ಆದಷ್ಟು ಶೀಘ್ರ ಮುಂದುವರೆಯಲಿದ್ದಾರೆ. 

Follow Us:
Download App:
  • android
  • ios