ಮೈಸೂರಿನ ಕಂಟೆಂಟ್ ಕ್ರಿಯೇಟರ್ ರಮ್ಯಾ ಅವರು ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದು 31.70 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದರು. ಆದರೆ, ಇತ್ತೀಚೆಗೆ ಶಾಲೆಯಲ್ಲಿ ಘಟನೆಯೊಂದು ಬೇಸರ ತರಿಸಿದ್ದು, ಇದರಿಂದ ಶಾಲೆಯ ಜವಾಬ್ದಾರಿಯಿಂದ ಹೊರಬಂದಿರುವ ಬಗ್ಗೆ ವಿಡಿಯೋ ಮೂಲಕ ತಿಳಿಸಿದ್ದಾರೆ.

ಮೈಸೂರಿನ ಸೋಶಿಯಲ್ ಮೀಡಿಯಾ ಇನ್‌ಫ್ಲಯೆನ್ಸರ್ ಹಾಗೂ ಕಂಟೆಂಟ್ ಕ್ರಿಯೇಟರ್ ಆದ ರಮ್ಯಾ ಅವರು ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದು ಅಲ್ಲಿನ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿದ ವಿಚಾರ ಹಲವರಿಗೆ ಗೊತ್ತಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಮತ್ತು ಅವರ ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹದಿಂದ ಸಾಲಗಾರರಾಗಬಾರದು ಎಂಬ ಉದ್ದೇಶದಿಂದ ಮಹತ್ವ ಕಾರ್ಯಕ್ಕೆ ಕೈಹಾಕಿದ್ದರು.

ತಾವು ದತ್ತು ಪಡೆದ ಸರ್ಕಾರಿ ಶಾಲೆಯನ್ನು ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಅತ್ಯಾಧುನಿಕ ಸೌಲಭ್ಯಗಳನ್ಉನ ಅಭಿವೃದ್ಧಿ ಪಡಿಸಿದ್ದರು. ತಮ್ಮ ಕನಸಿನ ಯೋಜನೆಗೆ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ಕೆಲಸ ಮಾಡಿದ್ದರು. ಆದರೆ ಈಗ ಏಕಾಏಕಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಅವರು, ಶಾಲೆಯ ಅಭಿವೃದ್ಧಿಗೆ ಖರ್ಚು ಮಾಡಿದ ಹಣ ಎಷ್ಟು ಅಂತ ರಿವೀಲ್ ಮಾಡಿದ್ದು, ಇದೇ ಸಂದರ್ಭದಲ್ಲಿ ಅವರಿಗೆ ಶಾಲೆಯಲ್ಲಿ ಎದುರಾದ ಕಹಿ ಘಟನೆಯ ಬಗ್ಗೆಯೂ ಬೇಸರ ಹಾಕಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಒಂದಷ್ಟು ದಿನಗಳ ಹಿಂದೆ ಶಾಲೆಗೆ ದತ್ತು ಪಡೆದುಕೊಂಡಿದ್ದೆ. ಈಗ ಶಾಲೆಗೆ ಖರ್ಚು ಮಾಡಿದ ಹಣ ಬಗ್ಗೆ ಲೆಕ್ಕಾ ಹಾಕಿರಲಿಲ್ಲ. ಈಗ ಹಣ ಲೆಕ್ಕಾ ಹಾಕುವ ಸಮಯ ಬಂದಿದೆ. 31 ಲಕ್ಷದ 70 ಸಾವಿರ ಖರ್ಚು ಮಾಡಿ ನಮ್ಮ ಕೈಲಾದ ಅಭಿವೃದ್ಧಿ ಮಾಡಿದ್ದೇವೆ. ಆದರೆ ನಿನ್ನೆ ಕೆಲವರು ಮಹನೀಯರು ಶಾಲೆಗೆ ಬಂದಿದ್ದರು. ಅದೇ ಶಾಲೆಗೆ 8ನೇ ತರಗತಿ ತರಲು ಮನವಿ ಮಾಡಿದ್ದೇವು. ಇದಕ್ಕೆ ಅಗತ್ಯ ಅನುಮತಿ ಪಡೆದುಕೊಳ್ಳಲು ಹೇಳಿದ್ದೇವು. ಶಾಲೆಗೆ ಅಗತ್ಯವಿರುವ ಬಿಲ್ಡಿಂಗ್ ಕೂಡ ನಾವೇ ನಿರ್ಮಾಣ ಮಾಡಬೇಕು ಎಂದು ಕೊಂಡಿದ್ದೇವು. ಆದರೆ ಅವರು ನಿಮಗೆ ಇದನ್ನು ಮಾಡಲು ಅರ್ಹತೆ ಇಲ್ಲ ಎಂದು ಹೇಳಿದ್ದರು. ಇನ್ನು ಹಲವು ಮಾತುಗಳು ಹೇಳಿದರು, ಇದರಿಂದ ಬೇಸರ ಆಗಿ ಶಾಲೆ ಹೋಗಬಾರದು ಎಂದು ನಿರ್ಧಾರ ಮಾಡಿದ್ದೇವೆ. ನನ್ನ ಕಾರ್ಯ ಹಲವರಿಗೆ ಸ್ಫೂರ್ತಿಯಾಗಲಿ ಎಂದು ವಿಡಿಯೋ ಮಾಡಿ ಶೇರ್ ಮಾಡುತ್ತಿದ್ದೇವು. ಆದರೆ ಈಗ ಶಾಲೆಗೆ ರಾಜೀನಾಮೆ ನೀಡಿ ಹೊರ ಬಂದಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು, ಶಾಲೆಗೆ ಸಣ್ಣ ಲೈಬ್ರರಿ, ಮಕ್ಕಳಿಗೆ ಹೊಸ ಯೂನಿಫರ್ಮ್, ಸಭಾಂಗಣ, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಿದ್ದೇವೆ. ಇದರಿಂದ ಬಹಳ ಸಂತಸ ಆಗಿದೆ. ನಮ್ಮಿಂದ ಸಣ್ಣ ಕೆಲಸ ಆಗಿರೋದು ಅಷ್ಟೇ ಮಾಡಿದ್ದೇವೆ. ನಮ್ಮ ಕೆಲಸ ಇನ್ನು ಹಲವರಿಗೆ ಸ್ಫೂರ್ತಿ ಆಗಲಿ ಎಂದು ಈ ಕೆಲಸ ಮಾಡಿದ್ದೇವೆ. ಶಾಲೆಯ ದತ್ತನ್ನು ನಿಯಮಗಳ ಅನ್ವಯ ಪಡೆದುಕೊಂಡಿದ್ದು, ಶಾಲೆಯ ಅಭಿವೃದ್ಧಿಯ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇವೆ ಎಂದು ವಿವರಿಸಿದ್ದಾರೆ.