ಈ ಪ್ರಕರಣದಲ್ಲಿ ನಮ್ಮದೇನೂ ಪಾತ್ರ ಇಲ್ಲ. ನಮ್ಮ ಮನೆಯಲ್ಲಿ ಏನಾದ್ರು ಸಿಗಬಹುದು ಅಂತ ನನ್ನ ಮನೆಯಲ್ಲಿ ಸರ್ಚ್ ಮಾಡ್ತಿದ್ದಾರೆ. ಇಲ್ಲೇನ್ ಬದನೇಕಾಯಿಯೂ ಸಿಗಲ್ಲ. ಸಿಐಡಿ ಅಧಿಕಾರಿಗಳು ಸರ್ಚ್ ಮಾಡ್ತಿದ್ದಾರೆ ನಾನು ಅವರಿಗೆ ಸಹಕಾರ ನೀಡುತ್ತೇನೆ. ಅಧಿಕಾರಿಗಳು ಅವರ ಕೆಲಸ ಮಾಡ್ತಿದ್ದಾರೆ‌: ಬಿಜೆಪಿ ಎಂಎಲ್‌ಸಿ ಸುನೀಲ್ ವಲ್ಯಾಪುರೆ 

ಕಲಬುರಗಿ(ಅ.19): ಭೋವಿ ನಿಗಮದಲ್ಲಿ ಅವ್ಯವಹಾರ ಆಗಿದೆ ಅಂತ ನಾನೇ ಧ್ವನಿ ಎತ್ತಿದ್ದೆ. ಕಳೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಭೋವಿ ನಿಗಮದಲ್ಲಿ ಅವ್ಯವಹಾರ ಆಗಿದೆ ಅಂತ ಪ್ರಸ್ತಾವನೆ ಸಲ್ಲಿಸಿ ಮಾತನಾಡಿದ್ದೆ. ಈ ಹಗರಣದಲ್ಲಿ ಕೆಲವು ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಅವರೇ ನನ್ನ ಮೇಲೆ ಗೂಬೆ ಕುರಿಸಲು ಈ ರೀತಿ ಮಾಡ್ತಿದ್ದಾರೆ ಎಂದು ಬಿಜೆಪಿ ಎಂಎಲ್‌ಸಿ ಸುನೀಲ್ ವಲ್ಯಾಪುರೆ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭೋವಿ ನಿಗಮದಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಇಂದು(ಶನಿವಾರ) ನಗರದ ತಮ್ಮ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ ಬಗ್ಗೆ ಮಾತನಾಡಿದ MLC ಸುನೀಲ್ ವಲ್ಯಾಪುರೆ ಅವರು, ಈ ಪ್ರಕರಣದಲ್ಲಿ ನಮ್ಮದೇನೂ ಪಾತ್ರ ಇಲ್ಲ. ನಮ್ಮ ಮನೆಯಲ್ಲಿ ಏನಾದ್ರು ಸಿಗಬಹುದು ಅಂತ ನನ್ನ ಮನೆಯಲ್ಲಿ ಸರ್ಚ್ ಮಾಡ್ತಿದ್ದಾರೆ. ಇಲ್ಲೇನ್ ಬದನೇಕಾಯಿಯೂ ಸಿಗಲ್ಲ. ಸಿಐಡಿ ಅಧಿಕಾರಿಗಳು ಸರ್ಚ್ ಮಾಡ್ತಿದ್ದಾರೆ ನಾನು ಅವರಿಗೆ ಸಹಕಾರ ನೀಡುತ್ತೇನೆ. ಅಧಿಕಾರಿಗಳು ಅವರ ಕೆಲಸ ಮಾಡ್ತಿದ್ದಾರೆ‌ ಎಂದು ತಿಳಿಸಿದ್ದಾರೆ. 

ಬೋವಿ ನಿಗಮದ ಹಗರಣ: ಬಿಜೆಪಿ ಎಂಎಲ್‌ಸಿ ಸುನೀಲ್ ವಲ್ಯಾಪೂರೆ ಮನೆ ಮೇಲೆ ಸಿಐಡಿ ದಾಳಿ

ಅವ್ಯವಹಾರ ಆಗಿದೆ ಅಂತ ನಾನೇ ಪ್ರಶ್ನೆ ಮಾಡಿದ್ದೇ ನನ್ನ ಮನೆಯಲ್ಲೇ ಸರ್ಚ್ ಮಾಡ್ತಿದ್ದಾರೆ ಈ ಬಗ್ಗೆ ಸದ್ಯಕ್ಕೆ ನಾನೇನೂ ಮಾತಾಡಲ್ಲ. ಸಮಯ ಬಂದಾಯ ಮಾತಾಡುವೆ ಎಂದು ಬಿಜೆಪಿ ಎಂಎಲ್‌ಸಿ ಸುನೀಲ್ ವಲ್ಯಾಪುರೆ ಹೇಳಿದ್ದಾರೆ.