ಗದಗ ಜಿಲ್ಲೆಯ ಮುಂಡರಗಿಯಲ್ಲಿ ಕಸದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದೆ. ಪೊಲೀಸ್ ಠಾಣೆಗೆ ದೂರು ನೀಡಿದ್ದಕ್ಕೆ ಕೋಪಗೊಂಡ ಒಂದು ಕುಟುಂಬ, ಮತ್ತೊಂದು ಕುಟುಂಬದ ಮನೆಗೆ ರಾತ್ರಿ ನುಗ್ಗಿ ಹಲ್ಲೆಗೆ ಯತ್ನಿಸಿದೆ ಎಂದು ಆರೋಪಿಸಲಾಗಿದೆ. ಈ ದಾಳಿಯಲ್ಲಿ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ.
ಗದಗ (ಸೆ.6): ಕಸದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆಯಾದ ಘಟನೆ ಗದಗ ಜಿಲ್ಲೆಯ ಮುಂಡರಗಿಯ ವಿವೇಕಾನಂದನಗರ ನಡೆದಿದ್ದು, ರಾತ್ರಿ ವೇಳೆ ಪಕ್ಕದ ಮನೆಯ ಕುಟುಂಬದವರು ಮನೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಸದ ವಿಚಾರಕ್ಕೆ ಗಲಾಟೆ
ಧನಪ್ಪ ಲಮಾಣಿ ಹಲ್ಲೆಗೆ ಯತ್ನಿದ ಆರೋಪ. ಹನಮಂತ ಚೆನ್ನದಾರ್ ಎಂಬುವವರ ಮೇಲೆ ಹಲ್ಲೆಗೆ ಯತ್ನ.ರಾತ್ರಿ ಮನೆಯಲ್ಲಿರುವಾಗಲೇ ಧನಪ್ಪ ಕುಟುಂಬಸ್ಥರು ಮನೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ.
ಪೊಲೀಸ್ ಠಾಣೆಗೆ ದೂರು ನೀಡಿದ್ದಕ್ಕೆ ಹಲ್ಲೆಗೆ ಯತ್ನ
ಧನಪ್ಪ ಲಮಾಣಿ, ಹನಮಂತ ಚೆನ್ನದಾಸರ್ ಎರಡು ಕುಟುಂಬಗಳು ವಿವೇಕಾನಂದನಗರದ ಅಕ್ಕಪಕ್ಕದ ಮನೆಯವರು. ಅನ್ಯೋನ್ಯವಾಗಿರಬೇಕಿದ್ದ ಕುಟುಂಬ ಕಸದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಆಗಾಗ ಕಿರಿಕ್ ಆಗುತ್ತಿದೆ. ಕಸ ಸ್ವಚ್ಛಗೊಳಿಸುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಪದೇಪದೆ ಕಿರಿಕ್ ಆಗ್ತಿದೆ. ಇದರಿಂದ ಮಾನಸಿಕ ಹಿಂಸೆಗೆ ಒಳಗಾದ ಹನಮಂತ ಚೆನ್ನದಾಸರ್ ಕುಟುಂಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ.
ತಮ್ಮ ವಿರುದ್ಧ ದೂರು ನೀಡಲು ಹೋಗಿದ್ದರು ಎಂಬ ಕಾರಣಕ್ಕೆ ಕೋಪಗೊಂಡಿದ್ದ ಧನಪ್ಪ ಕುಟುಂಬಸ್ಥರು ರಾತ್ರಿ ಹನಮಂತ ಚೆನ್ನದಾಸರ್ ಮನೆಯಲ್ಲಿರುವ ದಾಳಿಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಐದಾರು ಜನರು ಕೈಯಲ್ಲಿ ಬ್ಯಾಟ್, ಬಾಟಲ್, ಕಲ್ಲಿನಿಂದ ದಾಳಿಗೆ ಯತ್ನಿಸಿದ್ದಾರೆ. ಹನಮಂತ ಚೆನ್ನದಾಸರ್ ಮನೆಯ ಕಿಟಕಿ ಗಾಜು ಪುಡಿಪುಡಿ ಮಾಡಿದ್ದಾರೆ. ಬಾಗಿಲು ಮುಚ್ಚಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹನಮಂತ ಕುಟುಂಬಸ್ಥರ ಮೇಲೆಯೇ ದೊಣ್ಣೆಯಿಂದ ಹಲ್ಲೆಗೆ ಯತ್ನಿಸಿದ್ದಾರೆ ಆರೋಪಿಸಲಾಗಿದೆ. ಸದ್ಯ ಘಟನೆ ಸಂಬಂಧ ದೂರು ದಾಖಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಪೊಲೀಸ್ ವಿಚಾರಣೆ ಬಳಿಕ ಸತ್ಯಾಂಶ ಏನೆಂಬುದು ತಿಳಿಯಲಿದೆ.


