ದಸರಾ ಹಬ್ಬದ ನಿಮಿತ್ತ ತಾತನಿಗೆ ಬನ್ನಿ ಕೊಟ್ಟು ವಾಪಸ್ ಬರುವ ವೇಳೆ ಸ್ಕೂಟರ್ ಗೆ ಕಾರ್ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ರಭಸಕ್ಕೆ ಸ್ಕೂಟರ್ ನಲ್ಲಿ ಹಿಂದೆ ಕುಳಿತಿದ್ದ ಸಾಕ್ಷಿ ರಸ್ತೆಗೆ ಬಿದ್ದು ಸಾವನ್ನಪ್ಪಿದ್ದಾಳೆ.
ರಾಯಚೂರು(ಅ.13): ಸ್ಕೂಟರ್ ಮತ್ತು ಕಾರು ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಓರ್ವ ಯುವತಿ ಸಾವನ್ನಪ್ಪಿ, ಮತ್ತೊಬ್ಬ ಯುವತಿಗೆ ಗಂಭೀರವಾದ ಗಾಯಗಳಾದ ಘಟನೆ ರಾಯಚೂರು ನಗರದ ಡಿಸಿ ಬಂಗಲೆ ಬಳಿ ನಿನ್ನೆ(ಶನಿವಾರ) ಸಂಜೆ ನಡೆದಿದೆ. ಸಾಕ್ಷಿ(20) ಮೃತ ಯುವತಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ದಸರಾ ಹಬ್ಬದ ನಿಮಿತ್ತ ತಾತನಿಗೆ ಬನ್ನಿ ಕೊಟ್ಟು ವಾಪಸ್ ಬರುವ ವೇಳೆ ಸ್ಕೂಟರ್ ಗೆ ಕಾರ್ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ರಭಸಕ್ಕೆ ಸ್ಕೂಟರ್ ನಲ್ಲಿ ಹಿಂದೆ ಕುಳಿತಿದ್ದ ಸಾಕ್ಷಿ ರಸ್ತೆಗೆ ಬಿದ್ದು ಸಾವನ್ನಪ್ಪಿದ್ದಾಳೆ.
ಹಬ್ಬದ ದಿನವೇ ಕಾಲುವೆಗೆ ಉರುಳಿದ ಕಾರ್; 3 ಮಕ್ಕಳು ಸೇರಿ ಒಂದೇ ಕುಟುಂಬದ 8 ಮಂದಿ ಜಲಸಮಾಧಿ
ಅಪಘಾತದ ಬಳಿಕ ಕಾರು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ರಾಯಚೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.