ಬೆಂಗಳೂರು[ಡಿ.17]: 2020ರ ಐಪಿಎಲ್‌ ಆಟಗಾರರಿಗೆ ಇನ್ನೆರಡು ದಿನ ಮಾತ್ರ ಬಾಕಿ ಇದೆ. ಡಿ.19ರಂದು ಕೋಲ್ಕತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು 332 ಆಟಗಾರರು ಅದೃಷ್ಟಪರೀಕ್ಷೆಗೆ ಇಳಿಯಲಿದ್ದಾರೆ. ಈ ಪೈಕಿ ಗರಿಷ್ಠ 73 ಆಟಗಾರರು ವಿಶ್ವದ ಶ್ರೀಮಂತ ಟಿ20 ಲೀಗ್‌ನಲ್ಲಿ ಆಡಲು ಅವಕಾಶ ಪಡೆಯಬಹುದು. ಹರಾಜು ಪ್ರಕ್ರಿಯೆಗೆ ತಂಡಗಳು ಹೇಗೆ ಸಿದ್ಧಗೊಂಡಿವೆ?, ಯಾವ ತಂಡಗಳು ಎಷ್ಟುಹಣ ಹೊಂದಿವೆ? ಭಾರೀ ನಿರೀಕ್ಷೆ ಹುಟ್ಟಿಸಿರುವ ಆಟಗಾರರು ಯಾರು? ಈ ಎಲ್ಲಾ ಮಾಹಿತಿ ಇಲ್ಲಿದೆ.

IPL ಹರಾಜಿಗೂ ಮುನ್ನ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ ವಿರಾಟ್ ಕೊಹ್ಲಿ !

ರಾಯಲ್‌ ಚಾಲೆಂಜ​ರ್ಸ್ ಬೆಂಗಳೂರು, ಚೆನ್ನೈ ಸೂಪರ್‌ ಕಿಂಗ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌, ಕಿಂಗ್ಸ್‌ ಇಲೆವೆನ್‌ ಪಂಜಾಬ್‌, ಕೋಲ್ಕತಾ ನೈಟ್‌ರೈಡ​ರ್ಸ್ , ಮುಂಬೈ ಇಂಡಿಯನ್ಸ್‌, ಸನ್‌ರೈಸರ್ಸ್ ಹೈದರಾಬಾದ್‌, ರಾಜಸ್ಥಾನ ರಾಯಲ್ಸ್‌ ಐಪಿಎಲ್‌ ಹರಾಜಿಗೆ ಯೋಜನೆ ಸಿದ್ಧಪಡಿಸಿಕೊಂಡಿವೆ. ಕೆಕೆಆರ್‌, ಆರ್‌ಸಿ ಹಾಗೂ ರಾಜಸ್ಥಾನ ತಂಡಗಳು ಹರಾಜಿಗೂ ಮುನ್ನ ಹಲವು ಆಟಗಾರರನ್ನು ಕೈಬಿಟ್ಟಿವೆ. 35 ವಿದೇಶಿಗರು ಸೇರಿ, ಒಟ್ಟು 127 ಆಟಗಾರರು ತಂಡಗಳಲ್ಲಿ ಉಳಿದುಕೊಂಡಿದ್ದಾರೆ. 2019ರ ಹರಾಜಿನಲ್ಲಿ ಆಟಗಾರರ ಖರೀದಿಗೆ ತಂಡಗಳಿಗೆ ಒಟ್ಟು 82 ಕೋಟಿ ರುಪಾಯಿ ನಿಗದಿಪಡಿಸಲಾಗಿತ್ತು. ಈ ವರ್ಷ 3 ಕೋಟಿ ರುಪಾಯಿ ಹೆಚ್ಚುವರಿಯಾಗಿ ನೀಡಲಾಗಿದೆ. ಹೀಗಾಗಿ ಪ್ರತಿ ತಂಡ ಗರಿಷ್ಠ 85 ಕೋಟಿ ಖರ್ಚು ಮಾಡಬಹುದು. 

ಎಲ್ಲಾ ತಂಡಗಳು ತಮ್ಮಿಚ್ಛೆಯ ಆಟಗಾರರನ್ನು ಉಳಿಸಿಕೊಳ್ಳಲು ಈಗಾಗಲೇ ಕೋಟ್ಯಂತರ ರುಪಾಯಿ ಹಣ ಖರ್ಚು ಮಾಡಿವೆ. ಒಂದು ತಂಡ ಕನಿಷ್ಠ 18, ಗರಿಷ್ಠ 25 ಆಟಗಾರರನ್ನು ಹೊಂದಲು ಅವಕಾಶವಿದೆ. ಗರಿಷ್ಠ 8 ವಿದೇಶಿ ಆಟಗಾರರು ತಂಡದಲ್ಲಿರಬಹುದು. ಯಾವ ತಂಡದಲ್ಲಿ ಎಷ್ಟು ಆಟಗಾರರು ಉಳಿದುಕೊಂಡಿದ್ದಾರೆ, ಎಷ್ಟು ಆಟಗಾರರು ಬೇಕಾಗಿದ್ದರೆ, ಎಷ್ಟು ಹಣ ಬಾಕಿ ಇದೆ. ಆ ವಿವರ ಇಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು:

ಉಳಿಸಿಕೊಂಡ ಆಟಗಾರರು: 13

IPL 2020 ಅರ್ಧಕ್ಕರ್ಧ ಆಟಗಾರರಿಗೆ ಗೇಟ್ ಪಾಸ್ ಕೊಟ್ಟ RCB..!

ಖರ್ಚು ಮಾಡಿರುವ ಮೊತ್ತ: 57.10 ಕೋಟಿ ರುಪಾಯಿ

ಬಾಕಿ ಇರುವ ಮೊತ್ತ: 27.90 ಕೋಟಿ ರುಪಾಯಿ

ಚೆನ್ನೈ ಸೂಪರ್‌ಕಿಂಗ್ಸ್:

ಉಳಿಸಿಕೊಂಡ ಆಟಗಾರರು: 20

#IPLAuction2019 ಚೆನ್ನೈ ಸೂಪರ್ ಕಿಂಗ್ಸ್ ಕಂಪ್ಲೀಟ್ ತಂಡ ಹೀಗಿದೆ ನೋಡಿ

ಖರ್ಚು ಮಾಡಿರುವ ಮೊತ್ತ: 70.40 ಕೋಟಿ ರುಪಾಯಿ

ಬಾಕಿ ಇರುವ ಮೊತ್ತ: 14.60 ಕೋಟಿ ರುಪಾಯಿ

ಡೆಲ್ಲಿ ಕ್ಯಾಪಿಟಲ್ಸ್:

ಉಳಿಸಿಕೊಂಡ ಆಟಗಾರರು: 14

IPL 2020: 9 ಕ್ರಿಕೆಟಿಗರಿಗೆ ಶಾಕ್; ನಿಮ್ಮ ಸೇವೆ ಸಾಕು ಎಂದ ಡೆಲ್ಲಿ ಕ್ಯಾಪಿಟಲ್ಸ್!

ಖರ್ಚು ಮಾಡಿರುವ ಮೊತ್ತ: 57.15 ಕೋಟಿ ರುಪಾಯಿ

ಬಾಕಿ ಇರುವ ಮೊತ್ತ: 27.85 ಕೋಟಿ ರುಪಾಯಿ

ಕಿಂಗ್ಸ್ ಇಲೆವನ್ ಪಂಜಾಬ್‌ 

ಉಳಿಸಿಕೊಂಡ ಆಟಗಾರರು: 16

ಮಿಲ್ಲರ್, ಟೈ ಸೇರಿ 7 ಆಟಗಾರರಿಗೆ ಕಿಂಗ್ಸ್ XI ಪಂಜಾಬ್ ಗೇಟ್ ಪಾಸ್..!

ಖರ್ಚು ಮಾಡಿರುವ ಮೊತ್ತ: 42.30 ಕೋಟಿ ರುಪಾಯಿ

ಬಾಕಿ ಇರುವ ಮೊತ್ತ: 42.70 ಕೋಟಿ ರುಪಾಯಿ

ಕೋಲ್ಕತಾ ನೈಟ್‌ರೈಡರ್ಸ್:

ಉಳಿಸಿಕೊಂಡ ಆಟಗಾರರು: 14

IPL 2020: ಕಪ್ ಗೆಲ್ಲಿಸಿಕೊಟ್ಟ ಸ್ಟಾರ್ ಆಟಗಾರನನ್ನೇ ಕೈಬಿಟ್ಟ KKR!

ಖರ್ಚು ಮಾಡಿರುವ ಮೊತ್ತ: 49.35 ಕೋಟಿ ರುಪಾಯಿ

ಬಾಕಿ ಇರುವ ಮೊತ್ತ: 36.65 ಕೋಟಿ ರುಪಾಯಿ

ಮುಂಬೈ ಇಂಡಿಯನ್ಸ್:

ಉಳಿಸಿಕೊಂಡ ಆಟಗಾರರು: 18

IPL 2020: ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ನ್ನೇ ಕೈಬಿಟ್ಟ ಮುಂಬೈ ಇಂಡಿಯನ್ಸ್!

ಖರ್ಚು ಮಾಡಿದ ಮೊತ್ತ: 71.95 ಕೋಟಿ ರುಪಾಯಿ

ಬಾಕಿ ಇರುವ ಮೊತ್ತ: 13.05 ಕೋಟಿ ರುಪಾಯಿ

ರಾಜಸ್ಥಾನ ರಾಯಲ್ಸ್:

ಉಳಿದುಕೊಂಡ ಆಟಗಾರರು: 14

IPL 2020: ಹನ್ನೊಂದು ಆಟಗಾರರನ್ನು ಕೈಬಿಟ್ಟ ರಾಜಸ್ಥಾನ ರಾಯಲ್ಸ್

ಖರ್ಚು ಮಾಡಿರುವ ಮೊತ್ತ: 56.10 ಕೋಟಿ ರುಪಾಯಿ

ಬಾಕಿ ಇರುವ ಮೊತ್ತ: 28.90 ಕೋಟಿ ರುಪಾಯಿ

ಸನ್‌ರೈಸ​ರ್ಸ್ ಹೈದರಾಬಾದ್:

ಉಳಿದಿರುವ ಆಟಗಾರರು: 18

IPL 2020 ಬಲಿಷ್ಠ 5 ಆಟಗಾರರನ್ನು ಹೊರದಬ್ಬಿದ ಸನ್‌ರೈಸರ್ಸ್..!

ಖರ್ಚು ಮಾಡಿರುವ ಮೊತ್ತ: 68 ಕೋಟಿ ರುಪಾಯಿ

ಬಾಕಿ ಇರುವ ಮೊತ್ತ: 17 ಕೋಟಿ ರುಪಾಯಿ