ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ 2012 ಹಾಗೂ 2014ರಲ್ಲಿ ಪ್ರಶಸ್ತಿ ಗೆದ್ದಿದೆ. ಈ ಎರಡು ಪ್ರಶಸ್ತಿ ಗೆಲುವಿಗೆ ಕಾರಣರಾದ ಸ್ಟಾರ್ ಆಟಗಾರನನ್ನು ಕೆಕೆಆರ್ ತಂಡದಿಂದ ಕೈಬಿಟ್ಟಿದೆ. ಈ ಸ್ಟಾರ್ ಆಟಗಾರನ ಜೊತೆಗೆ 11 ಕ್ರಿಕೆಟಿಗರಿಗೂ ಗೇಟ್ ಪಾಸ್ ನೀಡಲಾಗಿದೆ.

ಕೋಲ್ಕತಾ(ನ.15): ಐಪಿಎಲ್ ಹರಾಜಿಗೆ ಸಜ್ಜಾಗುತ್ತಿರುವ ಕೋಲ್ಕತಾ ನೈಟ್ ರೈಡರ್ಸ್ ಇದೀಗ ತಂಡದ ಸ್ಟಾರ್ ಆಟಗಾರರು ಸೇರಿದಂತೆ 11 ಕ್ರಿಕೆಟಿಗರನ್ನು ಡ್ರಾಪ್ ಮಾಡಿದೆ. ಈ ಮೂಲಕ ಡಿಸೆಂಬರ್ಲ 19 ರಂದು ನಡೆಯಲಿರುವ ಹರಾಜಿನಲ್ಲಿ ಹೊಸ ಆಟಗಾರರನ್ನು ಖರೀದಿಸಲು ಕೋಲ್ಕತಾ ಮುಂದಾಗಿದೆ. ಈ ಮೂಲಕ 2014ರ ಬಳಿಕ ಐಪಿಎಲ್ ಟ್ರೋಫಿ ಗೆಲ್ಲಲು ವಿಫಲವಾಗಿರುವ ಕೆಕೆಆರ್ ಕೊರಗನ್ನು ನೀಗಿಸಲು ಮುಂದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ಅರ್ಧಕ್ಕರ್ಧ ಆಟಗಾರರಿಗೆ ಗೇಟ್ ಪಾಸ್ ಕೊಟ್ಟ RCB..!

ಕಳೆದ 8 ವರ್ಷಗಳಿಂದ ತಂಡದ ಜೊತೆಗಿದ್ದು, 2 ಬಾರಿ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಟ್ಟ ಕನ್ನಡಿಗ ರಾಬಿನ್ ಉತ್ತಪ್ಪಾಗೆ ಕೋಲ್ಕತಾ ನೈಟ್ ರೈಡರ್ಸ್ ಗೇಟ್ ಪಾಸ್ ನೀಡಿದೆ. ಉತ್ತಪ್ಪ ಸೇರಿದಂತೆ 11 ಕ್ರಿಕೆಟಿಗರನ್ನು ತಂಡದಿಂದ ಡ್ರಾಪ್ ಮಾಡಲಾಗಿದೆ.

ಇದನ್ನೂ ಓದಿ: IPL 2020: ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ನ್ನೇ ಕೈಬಿಟ್ಟ ಮುಂಬೈ ಇಂಡಿಯನ್ಸ್!

ಕೆಕೆಆರ್ ತಂಡದಿಂದ ಕೈಬಿಟ್ಟ ಆಟಗಾರರ ಪಟ್ಟಿ:
1) ರಾಬಿನ್ ಉತ್ತಪ್ಪ
2) ಕಾರ್ಲೋಸ್ ಬ್ರಾಥ್ವೈಟ್
3) ಕ್ರಿಸ್ ಲಿನ್
4) ಕೆಸಿ ಕರಿಯಪ್ಪ
5) ಪಿಯೂಷ್ ಚಾವ್ಲಾ
6) ಅನಿರಿಚ್ ನೋರ್ಜೆ
7) ಜೋ ಡೆನ್ಲಿ
8) ಮ್ಯಾಟ್ ಕೆಲ್ಲಿ
9) ನಿಖಿಲ್ ನಾಯ್ಕ್
10) ಪೃಥ್ವಿ ರಾಜ್ ಯಾರ
11) ಶ್ರೀಕಾಂತ್ ಮುಂಡೆ