ನವದೆಹಲಿ(ನ.15): ಐಪಿಎಲ್ ಟೂರ್ನಿ ಕಸರತ್ತು ಆರಂಭಗೊಂಡಿದೆ. ಎಲ್ಲಾ ಫ್ರಾಂಚೈಸಿಗಳು ತಂಡದ ಕೆಲ ಆಟಗಾರರನ್ನು ರಿಲೀಸ್ ಮಾಡಿ, ಹೊಸ ಮುಖಗಳನ್ನು ಖರೀದಿಸಲು ಸಜ್ಜಾಗಿದೆ. ಇದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಹೊರತಾಗಿಲ್ಲ. ಟ್ರೇಡಿಂಗ್  ಮೂಲಕ ಅಜಿಂಕ್ಯ ರಹಾನೆ, ಆರ್ ಅಶ್ವಿನ್ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರನ್ನೇ ಖರೀದಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಇದೀಗ ತಂಡದಲ್ಲಿದ್ದ 9 ಕ್ರಿಕೆಟಿಗರಿಗೆ ಶಾಕ್ ನೀಡಿದೆ. 

ಇದನ್ನೂ ಓದಿ: ಅರ್ಧಕ್ಕರ್ಧ ಆಟಗಾರರಿಗೆ ಗೇಟ್ ಪಾಸ್ ಕೊಟ್ಟ RCB..!

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೊಲಿನ್ ಮುನ್ರೊ, ಹನುಮಾ ವಿಹಾರಿ ಸೇರಿದಂತೆ 9 ಕ್ರಿಕೆಟಿಗರನ್ನು ತಂಡದಿಂ ಡ್ರಾಪ್ ಮಾಡಿದೆ. ನವೆಂಬರ್ 15 ಆಟಗಾರರ ರಿಲೀಸ್‌ಗೆ ಕೊನೆಯ ದಿನವಾಗಿತ್ತು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೀ ಪ್ಲೇಯರ್ಸ್‌ಗಳನ್ನು ಉಳಿಸಿಕೊಂಡು ಕೆಲವರಿಗೆ ಕೊಕ್ ನೀಡಿದೆ.

ಇದನ್ನೂ ಓದಿ:IPL 2020: ಹನ್ನೊಂದು ಆಟಗಾರರನ್ನು ಕೈಬಿಟ್ಟ ರಾಜಸ್ಥಾನ ರಾಯಲ್ಸ್. 

ಡೆಲ್ಲಿ ಕ್ಯಾಪಿಟಲ್ಸ್ ರಿಲೀಸ್ ಮಾಡಿದ ಕ್ರಿಕಟಿಗರು:
1) ಅಂಕುಸ್ ಬೈನ್ಸ್
2) ಬಿ ಅಯ್ಯಪ್ಪ
3) ಕ್ರಿಸ್ ಮೊರಿಸ್
4) ಕೊಲಿನ್ ಇನ್‌ಗ್ರಾಂ
5) ಕೊಲಿನ್ ಮುನ್ರೊ
6) ಹನುಮಾ ವಿಹಾರಿ
7) ಜಲಜ್ ಸಕ್ಸೇನಾ
8) ಮನೋಜ್ ಕಾರ್ಲಾ
9) ನಾಥು ಸಿಂಗ್