ಸನ್‌ರೈಸರ್ಸ್ ಹೈದರಾಬಾದ್ ತಂಡವು 2020ರ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಐವರು ಆಟಗಾರರನ್ನು ತಂಡದಿಂದ ಹೊರಗಟ್ಟಿದೆ. ಹೈದರಾಬಾದ್ ತಂಡದಿಂದ ಹೊರಬಿದ್ದ ಆಟಗಾರರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..

ಬೆಂಗಳೂರು[ನ.15]: 2016ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ತಂಡ, ಮುಂಬರುವ 2020ರ ಆಟಗಾರರ ಹರಾಜಿಗೂ ಮುನ್ನ ಐವರು ಕ್ರಿಕೆಟಿಗರನ್ನು ತಂಡದಿಂದ ಹೊರದಬ್ಬಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

IPL 2020; 6 ಸ್ಟಾರ್ ಕ್ರಿಕೆಟಿಗರಿಗೆ ಕೋಕ್ ನೀಡಿದ CSK!

ನಿರೀಕ್ಷೆಯಂತೆಯೇ ಐಸಿಸಿ ನಿಷೇಧಕ್ಕೆ ಗುರಿಯಾಗಿರುವ ಶಕೀಬ್ ಅಲ್ ಹಸನ್’ರನ್ನು ಸನ್‌ರೈಸರ್ಸ್ ಹೈದರಬಾದ್ ತಂಡ ಹೊರಗಿಟ್ಟಿದೆ. ಇನ್ನುಳಿದಂತೆ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ಮಾರ್ಟಿನ್ ಗಪ್ಟಿಲ್, ಯೂಸುಫ್ ಪಠಾಣ್ ಅವರಿಗೂ ಕೊಕ್ ನೀಡಲಾಗಿದೆ. ಇನ್ನು ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟ್ಸ್’ಮನ್’ಗಳಾದ ದೀಪಕ್ ಹೂಡಾ ಹಾಗೂ ರಿಕಿ ಬೊಯೆಯನ್ನು ತಂಡದಿಂದ ಕೈಬಿಡಲಾಗಿದೆ.

IPL 2020: ಹನ್ನೊಂದು ಆಟಗಾರರನ್ನು ಕೈಬಿಟ್ಟ ರಾಜಸ್ಥಾನ ರಾಯಲ್ಸ್

ಡಿಸೆಂಬರ್ 19ರಂದು ನಡೆಯಲಿರುವ ಆಟಗಾರರ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 5 ದೇಶಿ ಹಾಗೂ 2 ವಿದೇಶಿ ಆಟಗಾರರನ್ನು ಖರೀದಿಸಬಹುದಾಗಿದೆ.

SRH ತಂಡದಿಂದ ಗೇಟ್ ಪಾಸ್ ಪಡೆದ ಆಟಗಾರರಿವರು:
1. ದೀಪಕ್ ಹೂಡಾ
2. ಮಾರ್ಟಿನ್ ಗಪ್ಟಿಲ್
3. ರಿಕಿ ಬೊಯೆ
4. ಶಕೀಬ್ ಅಲ್ ಹಸನ್
5. ಯೂಸುಫ್ ಪಠಾಣ್