Asianet Suvarna News

ಮಿಲ್ಲರ್, ಟೈ ಸೇರಿ 7 ಆಟಗಾರರಿಗೆ ಕಿಂಗ್ಸ್ XI ಪಂಜಾಬ್ ಗೇಟ್ ಪಾಸ್..!

ಕಿಂಗ್ಸ್ ಇಲೆವನ್ ಪಂಜಾಬ್ ತಂಡವು ತನ್ನ ತಂಡದ ಸ್ಟಾರ್ ಕ್ರಿಕೆಟಿಗರಾದ ಡೇವಿಡ್ ಮಿಲ್ಲರ್, ಆ್ಯಂಡ್ರೂ ಟೈ ಸೇರಿದಂತೆ ಒಟ್ಟು 7 ಆಟಗಾರರನ್ನು ಕೈಬಿಟ್ಟಿದೆ. ಪಂಜಾಬ್ ತಂಡದಿಂದ ಹೊರಬಿದ್ದ ಆಟಗಾರರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

IPL 2020 Kings XI Punjab release 7 players ahead of Auction
Author
Bengaluru, First Published Nov 15, 2019, 8:53 PM IST
  • Facebook
  • Twitter
  • Whatsapp

ಬೆಂಗಳೂರು[ನ.15]: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಂತೆ ಕಿಂಗ್ಸ್ XI ಪಂಜಾಬ್ ತಂಡಕ್ಕೂ ಐಪಿಎಲ್ ಕಪ್ ಎನ್ನುವುದು ಕಳೆದ 12 ವರ್ಷಗಳಿಂದ ಗಗನ ಕುಸುಮವಾಗಿಯೇ ಉಳಿದಿದೆ. ಹೀಗಾಗಿ 2020ರ ಟೂರ್ನಿಯ ಮೇಲೆ ಕಣ್ಣಿಟ್ಟಿರುವ ಪ್ರೀತಿ ಜಿಂಟಾ, ನೆಸ್ ವಾಡಿಯಾ ಸಹ ಒಡೆತನದ ಕಿಂಗ್ಸ್ XI ಪಂಜಾಬ್ ಬಲಿಷ್ಠ ತಂಡ ಕಟ್ಟುವ ಉದ್ದೇಶದಿಂದ ಹರಾಜಿಗೂ ಮುನ್ನ 7 ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ. 

ಬಲಿಷ್ಠ ಆಟಗಾರರನ್ನು ಹೊರದಬ್ಬಿದ ಸನ್‌ರೈಸರ್ಸ್..!

ಅದರಲ್ಲೂ ಕಳೆದ 6 ವರ್ಷಗಳಿಂದ ಪಂಜಾಬ್ ತಂಡದ ಅವಿಭಾಜ್ಯ ಅಂಗವಾಗಿದ್ದ ಡೇವಿಡ್ ಮಿಲ್ಲರ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇನ್ನು 2018ರ ಆವೃತ್ತಿಯಲ್ಲಿ ಪರ್ಪಲ್ ಕ್ಯಾಪ್ ವಿಜೇತ ಆ್ಯಂಡ್ರೂ ಟೈಗೂ ತಂಡದಿಂದ ಗೇಟ್ ಪಾಸ್ ನೀಡಲಾಗಿದೆ. ಇವೆರಡಕ್ಕಿಂತ ಅಚ್ಚರಿಯೆಂದರೆ 2018ನೇ ಆವೃತ್ತಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ತಂಡಕ್ಕೆ ಆಸರೆಯಾಗಿದ್ದ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರನ್’ರನ್ನು ತಂಡ ಕೈಬಿಟ್ಟಿದೆ. ಇನ್ನು ತಮಿಳುನಾಡು ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ’ಗೂ ಗೇಟ್ ಪಾಸ್ ಸಿಕ್ಕಿದೆ. 2019ರ ಹರಾಜಿನಲ್ಲಿ ವರುಣ್ 8.4 ಕೋಟಿ ಪಡೆದಿದ್ದರು. 

IPL 2020: 9 ಕ್ರಿಕೆಟಿಗರಿಗೆ ಶಾಕ್; ನಿಮ್ಮ ಸೇವೆ ಸಾಕು ಎಂದ ಡೆಲ್ಲಿ ಕ್ಯಾಪಿಟಲ್ಸ್!

ಇನ್ನು ಕಳೆದೆರಡು ಆವೃತ್ತಿಗಳಲ್ಲಿ ಕಿಂಗ್ಸ್ XI ಪಂಜಾಬ್ ತಂಡವನ್ನು ಮುನ್ನಡೆಸಿದ್ದ ರವಿಚಂದ್ರನ್ ಅಶ್ವಿನ್ ಡೆಲ್ಲಿ ತಂಡದ ಪಾಲಾಗಿದ್ದಾರೆ. ಹೀಗಾಗಿ 2020ನೇ ಆವೃತ್ತಿಯಲ್ಲಿ ಪಂಜಾಬ್ ತಂಡದ ನಾಯಕ ಯಾರಾಗಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

KXIP ತಂಡದಿಂದ ಗೇಟ್ ಪಾಸ್ ಪಡೆದ ಆಟಗಾರರಿವರು:

1. ಅಗ್ನಿವೇಶ್ ಅಯಾಚಿ
2. ಆ್ಯಂಡ್ರೂ ಟೈ
3. ಡೇವಿಡ್ ಮಿಲ್ಲರ್
4. ಮೋಯಿಸ್ ಹೆನ್ರಿಕೇಸ್
5. ಪ್ರಭಾಸಿಮ್ರನ್ ಸಿಂಗ್
6. ಸ್ಯಾಮ್ ಕರನ್
7. ವರುಣ್ ಚಕ್ರವರ್ತಿ

Follow Us:
Download App:
  • android
  • ios