ಬೆಂಗಳೂರು[ಡಿ.18]: ಬಹುನಿರೀಕ್ಷಿತ 12ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಗೆ ತೆರೆಬಿದ್ದಿದ್ದು, ಹಾಲಿ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ತಂಡವು ಇಬ್ಬರು ಭಾರತೀಯ ಆಟಗಾರರನ್ನು ಖರೀದಿಸಿದೆ.

ಈಗಾಗಲೇ 23 ಆಟಗಾರನ್ನು ರೀಟೈನ್ ಮಾಡಿಕೊಂಡಿದ್ದ ಎಂ.ಎಸ್ ಧೋನಿ ನೇತೃತ್ವದ ಸಿಎಸ್’ಕೆ ಇಂದು ನಡೆದ ಹರಾಜಿನಲ್ಲಿ ಮೋಹಿತ್ ಶರ್ಮಾ ಅವರನ್ನು 5 ಕೋಟಿ ರುಪಾಯಿ ನೀಡಿ ಖರೀದಿಸಿದರೆ, ಮಹರಾಷ್ಟ್ರ ಮೂಲದ ಯುವ ಬ್ಯಾಟ್ಸ್’ಮನ್ ಋತುರಾಜ್ ಗಾಯಕ್ವಾಡ್ ಅವರನ್ನು 20 ಲಕ್ಷ ರುಪಾಯಿ ನೀಡಿ ಖರೀದಿಸಿದೆ.

ಹರಾಜಿನ ಬಳಿಕ ಚೆನ್ನೈ ಸೂಪರ್’ಕಿಂಗ್ಸ್ ತಂಡ ಹೀಗಿದೆ ನೋಡಿ..


ಮಹೇಂದ್ರ ಸಿಂಗ್ ಧೋನಿ[ನಾಯಕ], ಸುರೇಶ್ ರೈನಾ, ಫಾಫ್ ಡುಪ್ಲೆಸಿಸ್, ಮುರುಳಿ ವಿಜಯ್, ರವೀಂದ್ರ ಜಡೇಜಾ, ಸ್ಯಾಮ್ ಬಿಲ್ಲಿಂಗ್ಸ್, ಮಿಚೆಲ್ ಸ್ಯಾಂಟ್ನರ್, ಡೇವಿಡ್ ವಿಲ್ಲಿ, ಡ್ವೇನ್ ಬ್ರಾವೋ, ಶೇನ್ ವಾಟ್ಸನ್, ಲುಂಗಿ ಎನ್ಜಿಡಿ, ಇಮ್ರಾನ್ ತಾಹಿರ್, ಕೇದಾರ್ ಜಾದವ್, ಅಂಬಟಿ ರಾಯುಡು, ಹರ್ಭಜನ್ ಸಿಂಗ್, ದೀಪಕ್ ಚಾಹರ್, ಕೆ.ಎಂ ಆಸಿಫ್, ಕರಣ್ ಶರ್ಮಾ, ಧೃವ್ ಶೋರೆ, ಜೆ ಜಗದೀಶನ್, ಶಾರ್ದೂಲ್ ಠಾಕೂರ್, ಮೋನು ಕುಮಾರ್, ಚೈತನ್ಯ ಬಿಷ್ಣೋಯಿ
ಹೊಸದಾಗಿ: ಮೋಹಿತ್ ಶರ್ಮಾ, ಋತುರಾಜ್ ಗಾಯಕ್ವಾಡ್