MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • WPL 2026: ಎರಡನೇ ಸಲ ಕಪ್ ಗೆಲ್ಲಿಸಿ ಮತ್ತೆ ಗುಡುಗಿದ ಸ್ಮೃತಿ ಮಂಧನಾ! ಆರ್‌ಸಿಬಿ ಫ್ಯಾನ್ಸ್ ದಿಲ್ ಖುಷ್!

WPL 2026: ಎರಡನೇ ಸಲ ಕಪ್ ಗೆಲ್ಲಿಸಿ ಮತ್ತೆ ಗುಡುಗಿದ ಸ್ಮೃತಿ ಮಂಧನಾ! ಆರ್‌ಸಿಬಿ ಫ್ಯಾನ್ಸ್ ದಿಲ್ ಖುಷ್!

ವಡೋದರಾ: 2026ನೇ ಸಾಲಿನ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರ ಬೆನ್ನಲ್ಲೇ ಸ್ಮೃತಿ ಮಂಧನಾ ಆರ್‌ಸಿಬಿ ಅಭಿಮಾನಿಗಳು ಹೃದಯ ಗೆಲ್ಲುವಂತ ಮಾತುಗಳನ್ನಾಡಿದ್ದಾರೆ. 

2 Min read
Author : Naveen Kodase
Published : Feb 06 2026, 08:23 AM IST
Share this Photo Gallery
  • FB
  • TW
  • Linkdin
  • Whatsapp
16
RCB ಮತ್ತೊಮ್ಮೆ WPL ಚಾಂಪಿಯನ್
Image Credit : X/@RCBTweets

RCB ಮತ್ತೊಮ್ಮೆ WPL ಚಾಂಪಿಯನ್

ನಾಲ್ಕನೇ ಸೀಸನ್ ವುಮೆನ್ಸ್ ಪ್ರೀಮಿಯರ್ ಲೀಗ್‌ ಫೈನಲ್‌ನಲ್ಲಿ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿದ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಬಾರಿಗೆ WPL ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಸತತ ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ಟ್ರೋಫಿ ಮತ್ತೊಮ್ಮೆ ಮರಿಚಿಕೆಯಾಗಿ ಪರಿಣಮಿಸಿದೆ.

26
ಡೆಲ್ಲಿ ಕ್ಯಾಪಿಟಲ್ಸ್-ಆರ್‌ಸಿಬಿ ರೋಚಕ ಫೈನಲ್
Image Credit : Instagram@DC/RCB

ಡೆಲ್ಲಿ ಕ್ಯಾಪಿಟಲ್ಸ್-ಆರ್‌ಸಿಬಿ ರೋಚಕ ಫೈನಲ್

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಜೆಮಿಮಾ ರೋಡ್ರಿಗಸ್ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 203 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಇನ್ನು ಈ ಕಠಿಣ ಗುರಿ ಬೆನ್ನತ್ತಿದ ಆರ್‌ಸಿಬಿ ಆರಂಭಿಕ ಆಘಾತದ ಹೊರತಾಗಿಯೂ ನಾಯಕಿ ಸ್ಮೃತಿ ಮಂಧನಾ ಹಾಗೂ ಜಾರ್ಜಿಯಾ ವೋಲ್ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಇನ್ನೂ ಎರಡು ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗು ಬೀರುವಲ್ಲಿ ಯಶಸ್ವಿಯಾಗಿದೆ.

Related Articles

Related image1
WPL 2026: ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ಮತ್ತೊಮ್ಮೆ ಚಾಂಪಿಯನ್; ಡೆಲ್ಲಿ ಕ್ಯಾಪಿಟಲ್ಸ್‌ಗೆ ನಾಲ್ಕನೇ ಬಾರಿ ಹಾರ್ಟ್‌ ಬ್ರೇಕ್!
Related image2
WPL 2026: ಎಲ್ಲಾ ತಂಡಗಳ ನಾಯಕಿಯರ ಸಂಬಳ ಎಷ್ಟು? ಸ್ಮೃತಿ ಸಂಬಳ ಇಷ್ಟೊಂದಾ?
36
ಹ್ಯಾಟ್ರಿಕ್ ಟ್ರೋಫಿ ಗೆದ್ದ ಆರ್‌ಸಿಬಿ ಫ್ರಾಂಚೈಸಿ
Image Credit : INSTAGRAM/royalchallengers.bengaluru

ಹ್ಯಾಟ್ರಿಕ್ ಟ್ರೋಫಿ ಗೆದ್ದ ಆರ್‌ಸಿಬಿ ಫ್ರಾಂಚೈಸಿ

ಆರ್‌ಸಿಬಿ ಫ್ರಾಂಚೈಸಿಯು ಇದೀಗ ಕಳೆದ ಮೂರು ವರ್ಷಗಳಲ್ಲಿ ಮೂರು ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ. 2024ರಲ್ಲಿ ನಡೆದ ಎರಡನೇ ಸೀಸನ್ WPL ಟೂರ್ನಿಯಲ್ಲಿ ಆರ್‌ಸಿಬಿ ಮೊದಲ ಸಲ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ ಕಳೆದ ವರ್ಷ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದು ಬೀಗಿತ್ತು. ಇದೀಗ ಮತ್ತೆ WPLನಲ್ಲಿ ಸ್ಮೃತಿ ಮಂಧನಾ ಪಡೆ ಟ್ರೋಫಿ ಗೆಲ್ಲುವ ಮೂಲಕ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್ ನೀಡಿದೆ.

46
ಗೆಲುವನ್ನು ಅಭಿಮಾನಿಗಳಿಗೆ ಅರ್ಪಿಸಿದ ನಾಯಕಿ ಸ್ಮೃತಿ ಮಂಧನಾ
Image Credit : X@wplt20

ಗೆಲುವನ್ನು ಅಭಿಮಾನಿಗಳಿಗೆ ಅರ್ಪಿಸಿದ ನಾಯಕಿ ಸ್ಮೃತಿ ಮಂಧನಾ

ಇದೀಗ ಫ್ರಾಂಚೈಸಿ ಲೀಗ್ ಕ್ರಿಕೆಟ್ ಇತಿಹಾಸದಲ್ಲೇ ಪುರುಷ ಹಾಗೂ ಮಹಿಳಾ ತಂಡಗಳು ಏಕಕಾಲದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಏಕೈಕ ತಂಡ ಎನ್ನುವ ಹೆಗ್ಗಳಿಕೆಗೆ ಆರ್‌ಸಿಬಿ ಪಾತ್ರವಾಗಿದೆ. ಇದೇ ವೇಳೆ ನಾಯಕಿ ಸ್ಮೃತಿ ಮಂಧನಾ, ಈ ಗೆಲುವನ್ನು ಮತ್ತೊಮ್ಮೆ ಆರ್‌ಸಿಬಿ ಅಭಿಮಾನಿಗಳಿಗೆ ಅರ್ಪಿಸುವ ಮೂಲಕ ತಮ್ಮ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ.

56
ಆರ್‌ಸಿಬಿ ಫ್ಯಾನ್ಸ್ ಜಗತ್ತಿನ ಅತ್ಯುತ್ತಮ ಫ್ಯಾನ್ಸ್ ಎಂದ ಸ್ಮೃತಿ
Image Credit : AFP

ಆರ್‌ಸಿಬಿ ಫ್ಯಾನ್ಸ್ ಜಗತ್ತಿನ ಅತ್ಯುತ್ತಮ ಫ್ಯಾನ್ಸ್ ಎಂದ ಸ್ಮೃತಿ

ಎರಡನೇ ಬಾರಿ ಟ್ರೋಫಿ ಗೆಲುವಿನ ಬಳಿಕ ಮಾತನಾಡಿದ ಮಂಧನಾ, ನನ್ನ ಪ್ರಕಾರ ಆರ್‌ಸಿಬಿ ಫ್ಯಾನ್ಸ್ ಜಗತ್ತಿನ ಅತ್ಯುತ್ತಮ ಫ್ಯಾನ್ಸ್ ಎಂದು ಬಣ್ಣಿಸಿದ್ದಾರೆ. ನಾವು ಎಲ್ಲೇ ಆಡಿದರೂ ತುಂಬಾ ದೊಡ್ಡ ಮಟ್ಟದಲ್ಲಿ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ನಾವು ಏನೇ ಮಾಡಿದರೂ ಅದು ನಮ್ಮ ಫ್ಯಾನ್ಸ್‌ಗಾಗಿ ಎಂದು ಮಂಧನಾ ಹೇಳಿದ್ದಾರೆ.

66
ಈ ಸಲ ಕಪ್ ನಮ್ದು 2
Image Credit : INSTA/smriti_mandhana

ಈ ಸಲ ಕಪ್ ನಮ್ದು 2

ಇನ್ನು ಇಡೀ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ಬಳಿಕ ಮತ್ತೆ ಕೊನೆಯಲ್ಲಿ ಸ್ಮೃತಿ ಮಂಧನಾ, ಟ್ರೋಫಿ ಹಿಡಿಯುವ ಮುನ್ನ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮೈದಾನಕ್ಕೆ ಬಂದು ತಂಡವನ್ನು ಹುರಿದುಂಬಿಸಿದ ಆರ್‌ಸಿಬಿ ಅಭಿಮಾನಿಗಳಿಗೆ ತುಂಬಾ ಧನ್ಯವಾದಗಳು. ಇದು ನಿಮಗಾಗಿಯೇ. ನಾನು ಎರಡನೇ ಸೀಸನ್‌ನಲ್ಲಿ ಅಂದ್ರೆ 2024ರಲ್ಲಿ ಹೇಳಿದ್ದೇ, ಈಗಲೂ ಅದನ್ನೇ ಹೇಳುತ್ತಿದ್ದೇನೆ. ಈ ಸಲ ಕಪ್ ನಮ್ದು 2 ಎಂದು ಸ್ಮೃತಿ ಮಂಧನಾ ಗುಡುಗಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಮಹಿಳಾ ಪ್ರೀಮಿಯರ್ ಲೀಗ್
ಸ್ಮೃತಿ ಮಂಧನ
ಆರ್‌ಸಿಬಿ
ಡೆಲ್ಲಿ ಕ್ಯಾಪಿಟಲ್ಸ್

Latest Videos
Recommended Stories
Recommended image1
WPL 2026: ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ಮತ್ತೊಮ್ಮೆ ಚಾಂಪಿಯನ್; ಡೆಲ್ಲಿ ಕ್ಯಾಪಿಟಲ್ಸ್‌ಗೆ ನಾಲ್ಕನೇ ಬಾರಿ ಹಾರ್ಟ್‌ ಬ್ರೇಕ್!
Recommended image2
U19 World Cup: ಟಾಪ್ 07 ರನ್ ಸರದಾರರಲ್ಲಿ ಭಾರತದ ಏಕೈಕ ಆಟಗಾರ! ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ?
Recommended image3
U19 World Cup: ಪಾಕಿಸ್ತಾನದ 19 ವರ್ಷಗಳ ಹಳೆಯ ದಾಖಲೆ ಧೂಳೀಪಟ ಮಾಡಿದ ಭಾರತ!
Related Stories
Recommended image1
WPL 2026: ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ಮತ್ತೊಮ್ಮೆ ಚಾಂಪಿಯನ್; ಡೆಲ್ಲಿ ಕ್ಯಾಪಿಟಲ್ಸ್‌ಗೆ ನಾಲ್ಕನೇ ಬಾರಿ ಹಾರ್ಟ್‌ ಬ್ರೇಕ್!
Recommended image2
WPL 2026: ಎಲ್ಲಾ ತಂಡಗಳ ನಾಯಕಿಯರ ಸಂಬಳ ಎಷ್ಟು? ಸ್ಮೃತಿ ಸಂಬಳ ಇಷ್ಟೊಂದಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved