ಬೆಂಗಳೂರು[ನ.15]: ಕಳೆದ 12 ಆವೃತ್ತಿಗಳಿಂದಲೂ ಕಪ್ ಗೆಲ್ಲಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 2020ರ ಆವೃತ್ತಿಯಲ್ಲಿ ಶತಾಯಗತಾಯ ಕಪ್ ಗೆಲ್ಲಲು ಬೆಂಗಳೂರು ಫ್ರಾಂಚೈಸಿ ಪಣತೊಟ್ಟಿದ್ದು, ತಂಡಕ್ಕೆ ಮೇಜರ್ ಸರ್ಜರಿ ಮಾಡಿದೆ. ತಂಡದಲ್ಲಿದ್ದ ಬರೋಬ್ಬರಿ 12 ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ.

IPL 2019: ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ನ್ನೇ ಕೈಬಿಟ್ಟ ಮುಂಬೈ ಇಂಡಿಯನ್ಸ್!

ಹೌದು, ತಂಡದಲ್ಲಿದ್ದ ಒಂದು ಡಜನ್ ಆಟಗಾರರನ್ನು ಕೈಬಿಡಲಾಗಿದ್ದು, ಸ್ಟಾರ್ ವೇಗಿ ಡೇಲ್ ಸ್ಟೇನ್ ಕೈಬಿಟ್ಟಿದ್ದು ಅಚ್ಚರಿಗೆ ಕಾರಣವಾಗಿದೆ. ಆಲ್ರೌಂಡರ್ ಕಾಲಿನ್ ಡಿ ಗ್ರಾಂಡ್’ಹೋಮ್, ಮಾರ್ಕರ್ಸ್ ಸ್ಟೋನಿಸ್, ಶಿಮ್ರೋನ್ ಹೆಟ್ಮೇಯರ್ ಅವರಿಗೂ RCB ಗೇಟ್ ಪಾಸ್ ನೀಡಿದೆ. ಇನ್ನು ಕಳೆದ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದ ಟಿಮ್ ಸೌಥಿಗೂ ತಂಡದಿಂದ ಗೇಟ್ ಪಾಸ್ ನೀಡಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಬಿ ಡಿವಿಲಿಯರ್ಸ್ ಹಾಗೂ ಮೊಯಿನ್ ಅಲಿ ಇಬ್ಬರನ್ನು ಉಳಿಸಿಕೊಂಡು ಉಳಿದೆಲ್ಲಾ ವಿದೇಶಿ ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ. 

KPL ಮ್ಯಾಚ್ ಫಿಕ್ಸಿಂಗ್: RCB ಮಾಜಿ ಕ್ರಿಕೆಟಿಗ ಸೇರಿ ಇಬ್ಬರು ಸ್ಟಾರ್ ಆಟಗಾರರು ಅರೆಸ್ಟ್..!

ಡಿಸೆಂಬರ್ 19ರಂದು ಕೋಲ್ಕತದಲ್ಲಿ ಆಟಗಾರರ ಹರಾಜು ನಡೆಯಲಿದ್ದು, ಆ ವೇಳೆ ತಮಗೆ ಬೇಕಾದ ಆಟಗಾರರನ್ನು ಖರೀದಿಸಲಿದೆ. ಅಲ್ಲದೇ RTM ಕಾರ್ಡ್ ಬಳಸಿ ತಮಗೆ ಬೇಕಾದ ಇಬ್ಬರು ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ.

RCB ತಂಡದಿಂದ ಗೇಟ್ ಪಾಸ್ ಪಡೆದ ಆಟಗಾರರಿವರು:

 

1. ಡೇಲ್ ಸ್ಟೇನ್
2. ಮಾರ್ಕಸ್ ಸ್ಟೋನಿಸ್
3. ಶಿಮ್ರೋನ್ ಹೆಟ್ಮೇಯರ್
4. ಅಕ್ಷದೀಪ್ ನಾಥ್
5.ನೇಥನ್ ಕೌಲ್ಟರ್ ನೀಲ್
6. ಕಾಲಿನ್ ಡಿ ಗ್ರಾಂಡ್ ಹೋಮ್
7. ಪ್ರಯಾಸ್ ರೇ ಬರ್ಮನ್
8. ಟಿಮ್ ಸೌಥಿ
9. ಕುಲ್ವಂತ್ ಖೆಜ್ರೋಲಿಯಾ
10. ಹಿಮ್ಮತ್ ಸಿಂಗ್
11. ಹೆನ್ರಿಚ್ ಕ್ಲಾಸೆನ್
12. ಮಿಲಿಂದ್ ಕುಮಾರ್  

IPL 2020 ಹರಾಜಿಗೂ ಮುನ್ನ RCB ಉಳಿಸಿಕೊಂಡ ಆಟಗಾರರಿವರು 

1. ವಿರಾಟ್ ಕೊಹ್ಲಿ
2. ಮೊಯಿನ್ ಅಲಿ
3. ಯುಜುವೇಂದ್ರ ಚಹಲ್
4. ಪಾರ್ಥಿವ್ ಪಟೇಲ್
5. ಮೊಹಮ್ಮದ್ ಸಿರಾಜ್
6. ಉಮೇಶ್ ಯಾದವ್
7. ಪವನ್ ನೇಗಿ
8. ದೇವದತ್ ಪಡಿಕ್ಕಲ್
9. ಗುರುಕೀರತ್ ಸಿಂಗ್ ಮನ್
10. ವಾಷಿಂಗ್ಟನ್ ಸುಂದರ್
11. ಶಿವಂ ದುಬೆ
12. ನವದೀಪ್ ಸೈನಿ
13. ಎಬಿ ಡಿವಿಲಿಯರ್ಸ್