Ujjain Hanuman Temple : ಹಳೆ ದೇವಸ್ಥಾನದಿಂದ ಹೊಸ ದೇವಸ್ಥಾನಕ್ಕೆ ಮೂರ್ತಿ ಬದಲಾವಣೆ ಸುಲಭವಲ್ಲ. ಅದಕ್ಕೆ ಅದ್ರದ್ದೇ ಆದ ನಿಯಮಗಳಿವೆ. ಈಗ ಉಜ್ಜಯನಿ ಹನುಮಂತ ಇದೇ ವಿಚಾರಕ್ಕೆ ಚರ್ಚೆಗೆ ಬಂದಿದ್ದಾನೆ.

ಹೊಸ ದೇವಸ್ಥಾನ ನಿರ್ಮಾಣ ಮಾಡುವಾಗ ಅನೇಕ ಎಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತೆ. ನಮ್ಮಿಷ್ಟದಂತೆ ದೇವಸ್ಥಾನ ನಿರ್ಮಾಣ ಮಾಡಿ ಹಳೆ ಮೂರ್ತಿಯನ್ನು ಅಲ್ಲಿಗೆ ಸ್ಥಳಾಂತರಿಸೋದು ಸುಲಭವಲ್ಲ. ಈಗ ಉಜ್ಜಯಿನಿ ಭಜರಂಗಿ ದೇವಸ್ಥಾನ ಇದೇ ವಿಷ್ಯಕ್ಕೆ ಚರ್ಚೆಯಲ್ಲಿದೆ.

ಹೊಸ ದೇವಸ್ಥಾನಕ್ಕೆ ಸ್ಥಳಾಂತರ ಕಷ್ಟ

ಮಹಾಕಾಲ್ ನಗರವಾದ ಉಜ್ಜಯಿನಿಯಲ್ಲಿರುವ ಹನುಮಂತನ ದೇವಾಲಯ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಭಕ್ತರ ಸಂಖ್ಯೆ ನಿರಂತರವಾಗಿ ಹೆಚ್ಚಾಗ್ತಿದೆ. ಹೊಸ ದೇವಸ್ಥಾನ ನಿರ್ಮಾಣವಾಗಿದ್ದು, ಪ್ರತಿಷ್ಠಾಪನೆ ಸಿದ್ಧತೆಗಳು ನಡೆಯುತ್ತಿವೆ. ಆದ್ರೆ ದೇವರ ವಿಗ್ರಹ ಸ್ಥಳಾಂತರ ಕಷ್ಟವಾಗ್ತಿದೆ.

ಪ್ರಸ್ತುತ ಹನುಮಂತನ ವಿಗ್ರಹ ದಕ್ಷಿಣಕ್ಕೆ ಮುಖ ಮಾಡಿದೆ. ಆದ್ರೆ ಟ್ಯಾಂಕಿ ಚೌಕ್ನಲ್ಲಿ ನಿರ್ಮಿಸಲಾಗುತ್ತಿರುವ ಹೊಸ ದೇವಾಲಯದಲ್ಲಿ ಪ್ರತಿಮೆ ಪ್ರತಿಷ್ಟಾಪನೆಗೊಂಡ್ರೆ ದೇವರ ಮುಖ ಉತ್ತರ ದಿಕ್ಕಿಗಿರಲಿಲದೆ. ಇದರಿಂದಾಗಿಯೇ ಹನುಮಂತ ಅಸಮಾಧಾನಗೊಂಡಿದ್ದಾನೆ ಎನ್ನಲಾಗ್ತಿದೆ.

ಸ್ಥಳಾಂತರಕ್ಕೆ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿಯೇ ದೇವರ ವಿಗ್ರಹ ಸ್ಥಳಾಂತರಕ್ಕೆ ಪ್ರಯತ್ನ ನಡೆದಿತ್ತು. ಆದ್ರೆ ಹೊಸ ಸ್ಥಳಕ್ಕೆ ಸ್ಥಳಾಂತರಿಸಬೇಕಿದ್ದ ವಿಗ್ರಹವು ಅದರ ಸ್ಥಳದಿಂದ ಏಳ್ತಿಲ್ಲ. ಈ ಬಗ್ಗೆ ಈಗ ಗಂಭೀರ ಚರ್ಚೆಗಳು ಶುರುವಾಗಿವೆ. ಹೊಸ ಸ್ಥಳದಲ್ಲಿ ಹನುಮಂತನ ದಿಕ್ಕು ಬದಲಾಗಲಿದೆ. ಇದು ಹನುಮಂತನಿಗೆ ಇಷ್ಟವಿಲ್ಲ ಎನ್ನುವುದು ಭಕ್ತರ ವಾದ.

ಭಕ್ತರು ಇದನ್ನು ಪವಾಡ ದೇವಾಲಯ ಎಂದು ಪರಿಗಣಿಸುತ್ತಾರೆ. ನಿಂತಿರುವ ಹನುಮಂತ, ದೇವಾಲಯದ ಬಗ್ಗೆ ಅನೇಕ ನಂಬಿಕೆಗಳಿವೆ. ಇಲ್ಲಿ ಹನುಮನನ್ನು ಪೂಜಿಸುವುದರಿಂದ ಆಸೆಗಳು ಈಡೇರುತ್ತವೆ ಎಂದು ಭಕ್ತರು ನಂಬಿದ್ದಾರೆ. ವಿವಿಧ ಕಾಯಿಲೆಗಳಿಂದ ಬಳಲುವ ಭಕ್ತರು ಇಲ್ಲಿಗೆ ಬಂದು ನೆಮ್ಮದಿ ಕಂಡಿದ್ದಾರೆ. ಈಗ ವಿಗ್ರಹ ಸ್ಥಳಾಂತರ ಸಾಧ್ಯವಾಗ್ತಿಲ್ಲ ಎಂಬುದನ್ನು ತಿಳಿದ ಮೇಲೆ ದೇವಸ್ಥಾನಕ್ಕೆ ಭೇಟಿ ನೀಡುವವರ ಸಂಖ್ಯೆ ನಿರಂತರವಾಗಿ ಹೆಚ್ಚಾಗಿದೆ. ದೇವರ ಸ್ಥಳಾಂತರದ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ದೂರದೂರುಗಳಿಂದ ಇಲ್ಲಿಗೆ ಬರ್ತಿರುವ ಜನರು, ದೇವಸ್ಥಾನ ಬದಲಿಸದಂತೆ ಮನವಿ ಮಾಡಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಾಗ್ತಿದ್ದಂತೆ ಆಡಳಿತ ಮಂಡಳಿಗೆ ಭಕ್ತರ ನಿಯಂತ್ರಣ ಕಷ್ಟವಾಗ್ತಿದೆ. ಬ್ಯಾರಿಕೆಡ್ ಅಳವಡಿಸಲಾಗಿದ್ದು, ಆಡಳಿತ ಮಂಡಳಿ ಇದಕ್ಕೆ ಪರಿಹಾರ ಕಂಡು ಹಿಡಿಯುವ ಪ್ರಯತ್ನದಲ್ಲಿದೆ.