Asianet Suvarna News Asianet Suvarna News

ರಾಜ್ಯದಲ್ಲಿನ್ನೂ ಕೊರೋನಾ ಗಂಭೀರ, ಇಕ್ಕಟ್ಟಿನಲ್ಲಿ ಸಿಎಂ: ಇಲ್ಲಿದೆ ಅ. 14ರ ಟಾಪ್ 10 ನ್ಯೂಸ್!

ದೇಶದಲ್ಲಿ ಕೊರೋನಾ ಇಳಿಮುಖವಾಗುತ್ತಿರುವ ಸುದ್ದಿ ಕೊಂಚ ನೆಮ್ಮದಿ ಕೊಡುತ್ತಿದ್ದಂತೆಯೇ, ಇತ್ತ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಇದು ಸರ್ಕಾರಕ್ಕೆ ಬಹುದೊಡ್ಡ ತಲೆನೋವಾಗಿದೆ. ಈ ನಡುವೆ ಶ್ರೀರಾಮುಲು ಖಾತೆ ಬದಲಾವಣೆಯಿಂದ ನಡೆದ ಬೆಳವಣಿಗೆಗಳು ಸಿಎಂ ಯಡಿಯೂರಪ್ಪನವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇನ್ನು ಬಾಂಗ್ಲಾದೇಶ ಅತ್ಯಾಚಾರಿಗಳಿಗೆ ಮರಣ ದಂಡನೆ ಶಿಕ್ಷೆ ಜಾರಿಗೊಳಿಸುವ ಸುಗ್ರೀವಾಜ್ಞೆ ಹೊರಡಿಸಿದ್ದು, ಹೆಣ್ಮಕ್ಕಳಿಗೆ ಇದು ಮತ್ತಷ್ಟು ಭದ್ರತೆ ಕೊಡುವ ನಿರೀಕ್ಷೆ ಇದೆ. ಇಷ್ಟೇ ಅಲ್ಲದೇ ಅ. 14ರ ಟಾಪ್ ಹತ್ತು ಸುದ್ದಿಗಳು ಇಲ್ಲಿವೆ ನೋಡಿ

Top 10 news of 14th October 2020 pod
Author
Bangalore, First Published Oct 14, 2020, 6:27 PM IST

ದೇಶದಲ್ಲಿ ವೈರಸ್‌ ಇಳಿಕೆ, ರಾಜ್ಯದಲ್ಲಿನ್ನೂ ಗಂಭೀರ!
Top 10 news of 14th October 2020 pod
ಕೊರೋನಾ ಹೆಮ್ಮಾರಿಯಿಂದ ಎಂದು ಮುಕ್ತಿ ದೊರಕಬಹುದು ಎಂಬ ನಿರೀಕ್ಷೆಯಲ್ಲಿರುವ ದೇಶವಾಸಿಗಳಿಗೆ ಕೊನೆಗೂ ಆಶಾದಾಯಕ ಬೆಳವಣಿಗೆಗಳು ಗೋಚರವಾಗತೊಡಗಿವೆ. ಮಂಗಳವಾರ ಬೆಳಗ್ಗೆ 8ರವರೆಗಿನ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 55,342 ಕೊರೋನಾ ಸೋಂಕಿತರು ಪತ್ತೆಯಾಗಿದ್ದರೆ, 706 ಮಂದಿ ಬಲಿಯಾಗಿದ್ದಾರೆ. ಇದು ಕಳೆದ 2 ತಿಂಗಳಲ್ಲೇ ದೈನಂದಿನ ಕೇಸುಗಳಲ್ಲಿ ಅತ್ಯಂತ ಕನಿಷ್ಠ ಪ್ರಮಾಣವಾಗಿದೆ.

ಖಾತೆ ಬದಲಾವಣೆ ಮಾಡಿದ ಯಡಿಯೂರಪ್ಪನವರನ್ನ ಇಕ್ಕಟ್ಟಿಗೆ ಸಿಲುಕಿಸಿದ ರಾಮುಲು
Top 10 news of 14th October 2020 pod
ಸಚಿವ ಶ್ರೀರಾಮುಲು ಅವರಿಗೆ ಆರೋಗ್ಯ ಖಾತೆ ಕಿತ್ತುಕೊಂಡು ಸಮಾಜ ಕಲ್ಯಾಣ ಖಾತೆ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಶ್ರೀರಾಮುಲು ಅವರನ್ನು ಸಿಎಂ ಬಿಎಸ್ ಯಡಿಯೂರಪ್ಪ ಮಾತುಕತೆ ಮೂಲಕ ಬಗೆಹರಿಸಿದ್ದಾರೆ.

'ಡಿಕೆಶಿ ಅಸಮರ್ಥರು ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ 2 ವರ್ಷ ಮಂತ್ರಿ ಮಾಡಿರಲಿಲ್ಲ'
Top 10 news of 14th October 2020 pod
ಸಚಿವರ ಖಾತೆಗಳನ್ನು ಅದಲು ಬದಲು ಮಾಡುವ ಅಧಿಕಾರ ಮುಖ್ಯಮಂತ್ರಿಗಳಿದೆ. ಅವರು ಅದನ್ನು ಮಾಡಿದ್ದಾರೆ. ಪಕ್ಷದ ವರಿಷ್ಠರ ಜೊತೆಗೆ ಮಾತುಕತೆ ಮಾಡಿಕೊಂಡು ಈ ತೀರ್ಮಾನ ಮಾಡಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದರು.

ರೇಪಿಸ್ಟ್‌ಗಳಿಗೆ ಉಳಿಗಾಲವಿಲ್ಲ, ಮರಣ ದಂಡನೆಯೊಂದೇ ಶಿಕ್ಷೆ: ಸುಗ್ರೀವಾಜ್ಞೆ ಜಾರಿ!
Top 10 news of 14th October 2020 pod
ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ವೃದ್ಧಿಸುತ್ತಿರುವ ಸಂದರ್ಭದಲ್ಲೇ ಭಾರತದ ನೆರೆ ರಾಷ್ಟ್ರ ಬಾಂಗ್ಲಾದೇಶ ರೇಪಿಸ್ಟ್‌ಗಳನ್ನು ಹೆಡೆಮುರಿ ಕಟ್ಟಲು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ. ಸೋಮವಾರ ಸರ್ಕಾರದ ವಿರುದ್ಧ ಬೀದಿಗಿಳಿದು ಹಾಗೂ ಸೋಶಿಯಲ್ ಮಿಡಿಯಾ ಮೂಲಕ ಇಂತಹ ಪ್ರಕರಣಗಳ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳಿಗೆ ವಿಧಿಸಲಾಗುತ್ತಿದ್ದ ಶಿಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿಂದೆ ವಿಧಿಸಲಾಗುತ್ತಿದ್ದ ಜೀವಾವಧಿ ಶಿಕ್ಷೆಯಿಂದ ಮರಣ ದಂಡನೆಯಾಗಿ ಬದಲಾಯಿಸಿದೆ.

ಮುನಿಸು ಸರಿ ಮಾಡಲು ಪತ್ನಿ ಜೊತೆಗೆ ದಿಢೀರ್ ತೆರಳಿದ್ರು ಎಚ್‌ಡಿಕೆ
Top 10 news of 14th October 2020 pod
 ಕೊರೋನಾ ಭೀತಿ ಹಿನ್ನೆ​ಲೆ​ಯಲ್ಲಿ ಕ್ಷೇತ್ರ​ಗ​ಳಿಂದ ದೂರ ಉಳಿ​ದಿದ್ದ ಜೆಡಿ​ಎಸ್‌ ವರಿ​ಷ್ಠ​ರಾದ ಮಾಜಿ ಸಿಎಂ ಕುಮಾ​ರ​ಸ್ವಾಮಿ ಮತ್ತು ಪತ್ನಿ ಅನಿತಾ ಜಿಲ್ಲೆ​ಯಲ್ಲಿ ಸಾಲು ಸಾಲು ಚುನಾ​ವ​ಣೆ​ಗಳು ನಡೆ​ಯ​ಲಿ​ರುವ ಹಿನ್ನೆ​ಲೆ​ಯಲ್ಲಿ ಪಕ್ಷ ಸಂಘ​ಟ​ನೆಗೆ ಮುಂದಾ​ಗಿ​ದ್ದಾರೆ.

ಹೊಸ ತಿರುವು ಪಡೆದುಕೊಂಡ 19ರ ಯುವತಿ ಕೊಲೆ ಕೇಸ್ : ರವಿ ಚನ್ನಣ್ಣನವರ್ ಎಂಟ್ರಿ
Top 10 news of 14th October 2020 pod
ಬೆಟ್ಟಹಳ್ಳಿ ಗ್ರಾಮದ ಯುವ​ತಿ ಹೇಮಲತಾ ಕೊಲೆಯ ಪ್ರಕರಣದ ತನಿಖೆ ಜವಾ​ಬ್ದಾ​ರಿ​ಯನ್ನು ​ಸರ್ಕಾರ ಬೆಂಗ​ಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್‌ ಅಧೀ​ಕ್ಷಕ ರವಿ ಡಿ. ಚ​ನ್ನ​ಣ್ಣ​ನ​ವರ್‌ ಅವ​ರಿಗೆ ವಹಿ​ಸಿ​ದೆ.

ಕೊರೋನಾ ಕರಾಮತ್ತು: ಉಚಿತ ಬೀಯರ್ ಆಫರ್ , ಬಾರ್ ಖಾಲಿ ಖಾಲಿ
Top 10 news of 14th October 2020 pod
 ಕೊರೋನಾ ಸಮಯದಲ್ಲಿ ತಂಪಾದ ಪಾನೀಯ, ತಣ್ಣಗಿನ ಆಹಾರ ಸೇವನೆ ಸಲ್ಲದು ಎನ್ನುವ ವೈದ್ಯಕೀಯ ಲೋಕದ ಸೂಚನೆ ಇದೀಗ ‘ಚಿಲ್ಡ್‌ ಬಿಯರ್‌’ ಸೇಲ್‌ಗೆ ಭಾರಿ ಹೊಡೆತ ನೀಡಿದೆ. ಬಹುತೇಕ ಸೆಕೆಯ ವಾತಾವರಣವೇ ಇರುವ ದ.ಕ. ಜಿಲ್ಲೆಯೊಂದರಲ್ಲೇ ಕಳೆದ ವರ್ಷಕ್ಕೆ ಹೋಲಿಸಿದರೆ ಬಿಯರ್‌ ಮಾರಾಟ ಈ ಬಾರಿ ಶೇ.46ರಷ್ಟುಭಾರೀ ಕುಸಿತ ಕಂಡಿದೆ. ಬಿಯರ್‌ ಕಂಪನಿಗಳು ‘ಉಚಿತ’ ಆಫರ್‌ಗಳನ್ನು ನೀಡುತ್ತಿದ್ದರೂ ಬಿಯರ್‌ ಪ್ರಿಯರ ಮನ ಕರಗಿಲ್ಲ. ಇನ್ನು ಭಾರತೀಯ ಮದ್ಯ (ಐಎಂಎಲ್‌) ಸೇಲ್‌ ಕೂಡ ಜಿಲ್ಲೆಯಲ್ಲಿ ಶೇ.27ರಷ್ಟುಇಳಿದಿದೆ.

ಅಡಕೆ ಶಾಂಪೂ ಸಂಶೋಧನೆ : ಬೆಳೆಗಾರರಿಗೆ ಸಿಗುತ್ತಾ ಬಂಪರ್
Top 10 news of 14th October 2020 pod
ಅಡಕೆ ಟೀ ತಯಾರಿಸುವ ಮೂಲಕ ದೇಶದ ಗಮನ ಸೆಳೆದಿದ್ದ ಮಂಡಗದ್ದೆಯ ಯುವ ಉದ್ಯಮಿ ನೆಂಪೆ ನಿವೇದನ್‌, ಇದೀಗ ರಾಜ್ಯದಲ್ಲೂ ಗುಟ್ಕಾ ನಿಷೇಧದ ಭೀತಿ ಎದುರಾಗಿರುವ ಸಂದರ್ಭದಲ್ಲಿ ಅಡಕೆ ಶಾಂಪೂ ಸಂಶೋಧಿಸುವ ಮೂಲಕ ಬೆಳೆಗಾರರಲ್ಲಿ ಹೊಸ ಬೆಳಕು ಮೂಡಿಸಿದ್ದಾರೆ.

ಐಪಿಎಲ್ 2020: ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ಗೆ ಶಾಕ್ ನೀಡುತ್ತಾ ರಾಜಸ್ಥಾನ ರಾಯಲ್ಸ್?
Top 10 news of 14th October 2020 pod
13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 30ನೇ ಪಂದ್ಯದಲ್ಲಿಂದು ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ.

ಸತತ ಎರಡನೇ ದಿನವೂ ಮುಗ್ಗರಿಸಿದ ಚಿನ್ನ, ಬೆಳ್ಳಿ ದರ: ಇಲ್ಲಿದೆ ಅ. 14ರ ಗೋಲ್ಡ್ ರೇಟ್!
Top 10 news of 14th October 2020 pod
ಅತ್ತ ಕೊರೋನಾ ಜನರನ್ನು ಕಂಗಾಲುಗೊಳಿಸಿದ್ದರೆ, ಮದುವೆ ಮುಂತಾದ ಕಾರ್ಯಕ್ರಮ ಹಮ್ಮಿಕೊಂಡವರನ್ನು ಚಿನ್ನದ ದರ ಆತಂಕಕ್ಕೀಡು ಮಾಡಿದೆ. ಕೊರೋನಾ ನಡುವೆ ಏರಿದ್ದ ಚಿನ್ನದ ದರ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಸದ್ಯ ಕಳೆದೆರಡು ದಿನಗಳಿಂದ ಚಿನ್ನದ ದರ ಇಳಿಕೆಯ ಹಾದಿ ಹಿಡಿದಿದೆ. ಇಲ್ಲಿದೆ ಇಂದಿನ ಗೋಲ್ಡ್ ರೇಟ್.

Follow Us:
Download App:
  • android
  • ios