Asianet Suvarna News Asianet Suvarna News

ಅಡಕೆ ಶಾಂಪೂ ಸಂಶೋಧನೆ : ಬೆಳೆಗಾರರಿಗೆ ಸಿಗುತ್ತಾ ಬಂಪರ್

ಅಡಕೆ ಬೆಳೆಗಾರರಿಗೆ ಆತಂಕ ಎದುರಾದ ಬೆನ್ನಲ್ಲೇ ಇದೀಗ  ಗುಡ್ ನ್ಯೂಸ್ ಇಲ್ಲಿದೆ. ಅಡಕೆಯಿಂದ ಶಾಂಪೂ ಸಂಶೋಧನೆ ಮಾಡಲಾಗಿದೆ. 

Nivedan Nempe Introduced Areca shampoo snr
Author
Bengaluru, First Published Oct 14, 2020, 10:16 AM IST
  • Facebook
  • Twitter
  • Whatsapp

ಶಿವಮೊಗ್ಗ (ಅ.14) : ಅಡಕೆ ಟೀ ತಯಾರಿಸುವ ಮೂಲಕ ದೇಶದ ಗಮನ ಸೆಳೆದಿದ್ದ ಮಂಡಗದ್ದೆಯ ಯುವ ಉದ್ಯಮಿ ನೆಂಪೆ ನಿವೇದನ್‌, ಇದೀಗ ರಾಜ್ಯದಲ್ಲೂ ಗುಟ್ಕಾ ನಿಷೇಧದ ಭೀತಿ ಎದುರಾಗಿರುವ ಸಂದರ್ಭದಲ್ಲಿ ಅಡಕೆ ಶಾಂಪೂ ಸಂಶೋಧಿಸುವ ಮೂಲಕ ಬೆಳೆಗಾರರಲ್ಲಿ ಹೊಸ ಬೆಳಕು ಮೂಡಿಸಿದ್ದಾರೆ.

ಚಾಲಿ ಅಡಕೆಯಲ್ಲಿ ಪ್ರೊಲೀನ್‌ ಎಂಬ ಆಂಟಿ ಏಜೆಂಗ್‌ ಇದೆ. ಇದು ದೇಹದಲ್ಲಿನ ಸುಕ್ಕನ್ನು ಕಡಿಮೆ ಮಾಡುತ್ತದೆ. ಜೊತೆಗೆ ಗ್ಯಾಲಿಕ್‌ ಆ್ಯಸಿಡ್‌ ಎಂಬ ಆ್ಯಂಟಿ ಫಂಗಲ್‌ ಇದ್ದು, ಇದು ಜೆಮ್‌ರ್‍ಗಳನ್ನು ಸಾಯಿಸುತ್ತದೆ. ಈ ಅಂಶಗಳನ್ನು ಅಡಕೆಯಿಂದ ಪ್ರತ್ಯೇಕಿಸಿ ಈ ಶಾಂಪೂ ತಯಾರಿಸಲಾಗುತ್ತದೆ ಎಂದು ನಿವೇದನ್‌ ವಿವರಿಸುತ್ತಾರೆ.

ಪಾನ್‌ ಮಸಾಲಾ ಬ್ಯಾನ್‌ : ಅಡಕೆ ಬೆಳೆಗಾರರಿಗೆ ಕಾದಿದ್ಯಾ ಆಘಾತ ...

ಇದೀಗ ರಾಜ್ಯದಲ್ಲಿಯೂ ಗುಟ್ಕಾ ನಿಷೇಧದ ಭೀತಿ ಎದುರಿಸುತ್ತಿದೆ. ಈ ಹೊತ್ತಿನಲ್ಲಿ ಗುಟ್ಕಾ ನೇತಾಡುತ್ತಿರುವ ಪ್ರತಿ ಅಂಗಡಿಗಳಲ್ಲಿಯೂ ನಮ್ಮ ಅಡಕೆ ಶಾಂಪೂ ಸ್ಯಾಚೆಟ್‌ ನೇತಾಡುತ್ತಿರಬೇಕು ಎನ್ನುತ್ತಾರೆ ನಿವೇದನ್‌.

ಮಾರುಕಟ್ಟೆಗೆ ಸಿದ್ಧವಾದ ಅಡಕೆ ಶಾಂಪೂ

Follow Us:
Download App:
  • android
  • ios