Asianet Suvarna News Asianet Suvarna News

ಖಾತೆ ಬದಲಾವಣೆ ಮಾಡಿದ ಯಡಿಯೂರಪ್ಪನವರನ್ನ ಇಕ್ಕಟ್ಟಿಗೆ ಸಿಲುಕಿಸಿದ ರಾಮುಲು

ದಿಢೀರ್ ಖಾತೆ ಬದಲಾವಣೆ ಮಾಡಿರುವುದರಿಂದ ರೊಚ್ಚಿಗೆದ್ದಿರುವ ಸಚಿವ ಶ್ರೀರಾಮುಲು ಅವರು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪನವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

Minister Sriramulu Demands To Yediyurappa For Dycm Post rbj
Author
Bengaluru, First Published Oct 14, 2020, 2:20 PM IST
  • Facebook
  • Twitter
  • Whatsapp

ಬೆಂಗಳೂರು, (ಅ.14): ಸಚಿವ ಶ್ರೀರಾಮುಲು ಅವರಿಗೆ ಆರೋಗ್ಯ ಖಾತೆ ಕಿತ್ತುಕೊಂಡು ಸಮಾಜ ಕಲ್ಯಾಣ ಖಾತೆ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಶ್ರೀರಾಮುಲು ಅವರನ್ನು ಸಿಎಂ ಬಿಎಸ್ ಯಡಿಯೂರಪ್ಪ ಮಾತುಕತೆ ಮೂಲಕ ಬಗೆಹರಿಸಿದ್ದಾರೆ.

ಆದ್ರೆ, ಶ್ರೀರಾಮುಲು ಅಸಮಾಧಾನ ಶಮನವಾಗಿಲ್ಲ. ತಮಗೆ ಒಂದು ಮಾತು ತಿಳಿಸದೇ ಏಕಾಏಕಿ ಖಾತೆ ಬದಲಾವಣೆ ಮಾಡಿರುವುದಕ್ಕೆ ಶ್ರೀರಾಮುಲು, ಯಡಿಯೂರಪ್ಪನವರ ಮುಂದೆಯೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

ಮಂಗಳವಾರ ಶ್ರೀರಾಮುಲು ಅವರೇ ಖುದ್ದು ಯಡಿಯೂರಪ್ಪನವರ ಮುಂದೆಯೇ ತಮ್ಮ ಅಸಮಾನಧವನ್ನು ಹೊರಹಾಕಿದ್ದು, ಭರವಸೆ ನೀಡಿದಂತೆ ಡಿಸಿಎಂ ಹುದ್ದೆ ನೀಡಿ ಎಂದು  ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. 

ಖಾತೆ ಬದಲಾವಣೆ: ಸಿಎಂ ಭೇಟಿ ಬಳಿಕ ತಮ್ಮ ಆಪ್ತರ ಬಳಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶ್ರೀರಾಮುಲು..!

ತಮ್ಮ ಖಾತೆ ಬದಲಾಗುತ್ತದೆ ಎಂದು ಶ್ರೀರಾಮುಲು ಯಾವತ್ತೂ ಎಣಿಸಿರಲಿಲ್ಲ, ಸಂಪುಟ ಪುನಾರಚನೆ ವೇಳೆ ಕೂಡ ತಾವು ಸೇಫ್ ಎಂದೇ ಭಾವಿಸಿದ್ದರು.  ಖಾತೆ ಬದಲಾವಣೆ ನಂತರ ತೀವ್ರ ಅಸಮಾಧಾನಗೊಂಡಿರುವ ಶ್ರೀರಾಮುಲು 2018 ರ ವಿಧಾನಸಭೆ ಚುನಾವಣೆ ವೇಳೆ ತಮ್ಮನ್ನು ಡಿಸಿಎಂ ಅಭ್ಯರ್ಥಿ ಎಂದೇ ಬಿಂಬಿಸಲಾಗಿತ್ತು. ಹೀಗಾಗಿ ತಮಗೆ ಡಿಸಿಎಂ ಹುದ್ದೆ ನೀಡಬೇಕು ಎಂದಿದ್ದಾರೆ.

 2008 ರಲ್ಲಿ ನಾನು ಆರೋಗ್ಯ ಇಲಾಖೆ ನಿರ್ವಹಿಸಿದ್ದೆ. ನಾನು ಮೊದಲಿನಿಂದಲೂ ಸಮಾಜ ಕಲ್ಯಾಣ ಇಲಾಖೆ ಬಯಸಿದ್ದೆ, ಹಿಂದುಳಿದ ವರ್ಗಗಳ ಸಮುದಾಯಗಳ ಒಳಿತಿಗಾಗಿ ನಾನು ಕೆಲಸ ಮಾಡಲು ಬಯಸಿದ್ದೇನೆ.

ಡಿಸಿಎಂ ಮಾಡಬೇಕು ಎಂಬುದು ನನ್ನ ಹಳೇಯ ಬೇಡಿಕೆಯಾಗಿದೆ. ಸಮಾಜ ಕಲ್ಯಾಣ ಖಾತೆ ಜೊತೆಗೆ ಡಿಸಿಎಂ ಹುದ್ದೆ ನಿಭಾಯಿಸುವ ಸಾಮರ್ಥ್ಯ ನನಗಿದೆ ಎಂದು ಶ್ರೀರಾಮುಲು, ಸಿಎಂ ಮುಂದೆ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

Follow Us:
Download App:
  • android
  • ios