Asianet Suvarna News Asianet Suvarna News

ಹೊಸ ತಿರುವು ಪಡೆದುಕೊಂಡ 19ರ ಯುವತಿ ಕೊಲೆ ಕೇಸ್ : ರವಿ ಚನ್ನಣ್ಣನವರ್ ಎಂಟ್ರಿ

ರಾಮನಗರದಲ್ಲಿ ನಡೆದ ಯುವತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಇದೀಗ ಈ ಪ್ರಕರಣಕ್ಕೆ ರವಿ ಚನ್ನಣ್ಣನವರ್ ಎಂಟ್ರಿಯಾಗಿದೆ. 

Ravi channanavar to investigate Ramanagara Girl Murder Case snr
Author
Bengaluru, First Published Oct 14, 2020, 2:39 PM IST
  • Facebook
  • Twitter
  • Whatsapp

ಕುದೂರು (ಅ.14):  ಬೆಟ್ಟಹಳ್ಳಿ ಗ್ರಾಮದ ಯುವ​ತಿ ಹೇಮಲತಾ ಕೊಲೆಯ ಪ್ರಕರಣದ ತನಿಖೆ ಜವಾ​ಬ್ದಾ​ರಿ​ಯನ್ನು ​ಸರ್ಕಾರ ಬೆಂಗ​ಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್‌ ಅಧೀ​ಕ್ಷಕ ರವಿ ಡಿ. ಚ​ನ್ನ​ಣ್ಣ​ನ​ವರ್‌ ಅವ​ರಿಗೆ ವಹಿ​ಸಿ​ದೆ.

ಯುವತಿ ಹೇಮ​ಲತಾ ಕೊಲೆ ಪ್ರಕ​ರಣ ವಿವಿಧ ರೀತಿಯ ತಿರುವುಗಳನ್ನು ಪಡೆಯುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಜತೆಗೆ ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿ​ಕಾರಿ ಗಿರೀಶ್‌ ಅವ​ರಿಗೆ ಕೊರೋನಾ ಸೋಂಕು ತಗು​ಲಿದೆ. ಈ ಹಿನ್ನೆ​ಲೆ​ಯಲ್ಲಿ ಕೊಲೆ ರಹಸ್ಯ ಬೇಧಿ​ಸುವ ಕೆಲ​ಸ​ ರವಿ ಡಿ.ಚ​ನ್ನ​ಣ್ಣ​ನ​ವರ್‌ ಹೆಗ​ಲಿಗೆ ಬಂದಿ​ದೆ.

ಕಳೆದ ಅ. 8ರಂದು ಬೆಟ್ಟಹಳ್ಳಿ ಗ್ರಾಮದ 19 ವರ್ಷದ ಹೇಮಲತಾ ಕಾಣೆಯಾಗಿದ್ದಳು. ನಿರಂತರ ಹುಡುಕಾಟದ ನಂತರ ಮಾವಿನ ತೋಟದಲ್ಲಿ ಶವವಾಗಿ ಪತ್ತೆಯಾದಳು. ಪೊಲೀ​ಸರು ಪುನೀತ್‌ ಎಂಬ ಯುವಕನನ್ನು ವಿಚಾರಣೆಗೆ ಕರೆದೊಯ್ದಿದ್ದರು. ಇದರ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಯುವ​ತಿ​ಯದು ಕೊಲೆ, ಅತ್ಯಾಚಾರ, ಮರ್ಯಾದೆ ಹತ್ಯೆ ಹೀಗೆ ವಿವಿಧ ರೀತಿಯ ವದಂತಿ​ಗಳು ಹರಿ​ದಾ​ಡು​ತ್ತಿವೆ.

ಲಾಂಗು, ಮಚ್ಚು ಝಳಪಿಸಿದ್ರೆ ಪಿಸ್ತೂಲು ಸದ್ದು: ರವಿ ಚನ್ನಣ್ಣನವರ್‌ ಖಡಕ್‌ ಎಚ್ಚರಿಕೆ ...

ಮಾಗಡಿ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಹೇಮಲತಾ ಕೊಲೆ ಪ್ರಕ​ರಣ ಕುರಿತಾಗಿ ಮಾಹಿತಿ ಸಂಗ್ರಹಿಸಿದ ರವಿ ಡಿ.ಚ​ನ್ನ​ಣ್ಣ​ನ​ವರ್‌ ಅವ​ರು , ರಾಮನಗರ ಎಎಸ್ಪಿ ರಾಮರಾಜ್, ಡಿವೈಎಸ್ಪಿ ಓಂಪ್ರಕಾಶ್‌, ಮಾಗಡಿ ವೃತ್ತ ನಿರೀ​ಕ್ಷಕ ಬಿ.ಎಸ್‌.ಮಂಜುನಾಥ್‌, ಮಾಗಡಿ ಸಬ್‌ ಇನ್ಸ್‌ಪೆಕ್ಟರ್‌ ವೆಂಕ​ಟೇಶ್‌, ಕುದೂರು ಸಬ್‌ ಇನ್ಸ್‌ಪೆಕ್ಟರ್‌ ಟಿ.ಎಚ್‌ .ಮಂಜು​ನಾಥ್‌ ಅವ​ರಿಗೆ ತನಿಖೆ ಕುರಿತು ಮಾರ್ಗ​ದ​ರ್ಶನ ಮಾಡಿ​ದರು.

ಈ ಪ್ರಕ​ರಣ ಕುರಿತು ಮಾತನಾಡಿದ ರವಿ.ಡಿ. ಚನ್ನಣ್ಣನವರ್‌, ಇದೊಂದು ಗಂಭೀರ ಪ್ರಕರಣ. ತಮಗನಿಸಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಕೊಲೆಯ ಕಾರಣಗಳನ್ನು ತಮಗೆ ತಿಳಿದ ರೀತಿಯಲ್ಲಿ ಸುದ್ದಿ ಹರಡಿಸಬಾರದು. ಇದರಿಂದ ತನಿಖೆಗೆ ಹಿನ್ನ​ಡೆ​ಯಾಗಿ ಸತ್ಯದ ಬೆಳಕು ಜಗತ್ತಿಗೆ ಕಾಣಲು ತಡವಾಗುತ್ತದೆ. ಇಷ್ಟನ್ನೂ ಮೀರಿ ಅಪಪ್ರಚಾರದಲ್ಲಿ ತೊಡಗಿದರೆ ಸೈಬರ್‌ ಕ್ರೈಂ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಾಣೆಯಾಗಿದ್ದ ಯುವತಿ ದೊಡ್ಡಪ್ಪನ ಜಮೀನಿನಲ್ಲಿ ಶವವಾಗಿ ಪತ್ತೆ

ರಾಮನಗರ ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ಗಿರೀಶ್‌ ಅವರು ರಜೆಯಲ್ಲಿರುವ ಕಾರಣ ತನಿಖೆ ಜವಾ​ಬ್ದಾರಿ ನಮ್ಮ ಮೇಲಿದೆ. ಈ ಪ್ರಕ​ರಣ ಸಂಬಂಧ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳಲ್ಲಿ ಮಾಹಿತಿ ಸಂಗ್ರಹಿಸಿದ್ದೇನೆ. ಯಾವುದೇ ಕಾರಣಕ್ಕೂ ಅಪರಾಧಿಗಳು ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದರು.

Follow Us:
Download App:
  • android
  • ios