Asianet Suvarna News Asianet Suvarna News

ಮುನಿಸು ಸರಿ ಮಾಡಲು ಪತ್ನಿ ಜೊತೆಗೆ ದಿಢೀರ್ ತೆರಳಿದ್ರು ಎಚ್‌ಡಿಕೆ

ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ದಿಢೀರ್ ಪತ್ನಿ ಜೊತೆಗೆ ಹೋಗಿ ಮುನಿಸು ಸರಿಪಡಿಸಲು ಮುಂದಾಗಿದ್ದಾರೆ. 

HD Kumaraswamy Visits Ramanagara With Wife Anitha Kumaraswamy snr
Author
Bengaluru, First Published Oct 14, 2020, 1:43 PM IST

ವರದಿ : ಎಂ.ಅಫ್ರೋಜ್ ಖಾನ್‌
ರಾಮ​ನ​ಗರ (ಅ.14):
 ಕೊರೋನಾ ಭೀತಿ ಹಿನ್ನೆ​ಲೆ​ಯಲ್ಲಿ ಕ್ಷೇತ್ರ​ಗ​ಳಿಂದ ದೂರ ಉಳಿ​ದಿದ್ದ ಜೆಡಿ​ಎಸ್‌ ವರಿ​ಷ್ಠ​ರಾದ ಮಾಜಿ ಸಿಎಂ ಕುಮಾ​ರ​ಸ್ವಾಮಿ ಮತ್ತು ಪತ್ನಿ ಅನಿತಾ ಜಿಲ್ಲೆ​ಯಲ್ಲಿ ಸಾಲು ಸಾಲು ಚುನಾ​ವ​ಣೆ​ಗಳು ನಡೆ​ಯ​ಲಿ​ರುವ ಹಿನ್ನೆ​ಲೆ​ಯಲ್ಲಿ ಪಕ್ಷ ಸಂಘ​ಟ​ನೆಗೆ ಮುಂದಾ​ಗಿ​ದ್ದಾರೆ.

ಬಿಡ​ದಿಯ ಕೇತ​ಗಾ​ನ​ಹ​ಳ್ಳಿ​ಯ ತೋಟದ ಮನೆ​ಯಲ್ಲಿ ಇಂದಿನಿಂದ (ಅ. 14ರಿಂದ17) ನಾಲ್ಕು ದಿನ​ಗಳ ಕಾಲ ಪತ್ನಿ ಅನಿತಾ ಅವ​ರೊಂದಿಗೆ ಕುಮಾ​ರ​ಸ್ವಾಮಿರವರು ಹೋಬಳಿವಾರು ನಡೆ​ಸ​ಲಿ​ರು​ವ ಪಕ್ಷದ ಮುಖಂಡರು ಹಾಗೂ ಕಾರ್ಯ​ಕರ್ತರ ಸಭೆ ರಾಜ​ಕೀ​ಯ​ವಾಗಿ ಹೆಚ್ಚಿನ ಮಹತ್ವ ಪಡೆ​ದು​ಕೊಂಡಿ​ದೆ. ಈಗ ವಿಧಾನ ಪರಿಷತ್‌ನ ಬೆಂಗ​ಳೂರು ಶಿಕ್ಷ​ಕರ ಕ್ಷೇತ್ರ ಚುನಾ​ವಣೆ ನಡೆ​ಯು​ತ್ತಿದ್ದು, ಮಾಗಡಿ ಹಾಗೂ ಬಿಡದಿ ಪುರ​ಸಭೆ ಅಧ್ಯಕ್ಷ - ಉಪಾ​ಧ್ಯ​ಕ್ಷರ ಚುನಾ​ವ​ಣೆ​ ಶೀಘ್ರ​ದಲ್ಲಿ ನಿಗ​ದಿ​ಯಾ​ಗ​ಲಿದೆ. ಇದಾದ ನಂತರ ಗ್ರಾಮ ಪಂಚಾ​ಯಿತಿ, ರಾಮ​ನ​ಗರ ಮತ್ತು ಚನ್ನ​ಪ​ಟ್ಟಣ ನಗ​ರ​ಸಭೆ ಚುನಾ​ವ​ಣೆ​ಗಳು ಘೋಷ​ಣೆ​ಯಾ​ಗ​ಲಿವೆ.

RR ನಗರ ಬೈ ಎಲೆಕ್ಷನ್: ಅಳೆದು ತೂಗಿ ಕೊನೆಗೂ ಅಚ್ಚರಿ ಅಭ್ಯರ್ಥಿ ಘೋಷಿಸಿದ ಜೆಡಿಎಸ್ ...

ಕರ್ಮ​ಭೂ​ಮಿ​ಯಲ್ಲಿ ಪಕ್ಷ ಸಂಘ​ಟ​ನೆ:  ಈ ಚುನಾ​ವ​ಣೆ​ಗ​ಳಲ್ಲಿ ಪಕ್ಷದ ಅಭ್ಯ​ರ್ಥಿ​ಗ​ಳನ್ನು ಗೆಲ್ಲಿ​ಸಿ​ಕೊಂಡು ಜೆಡಿ​ಎಸ್‌ ಶಕ್ತಿ​ಯನ್ನು ವೃದ್ಧಿ​ಸಿ​ಕೊ​ಳ್ಳುವುದು ಅನಿ​ವಾರ್ಯ. ಹೀಗಾ​ಗಿಯೇ ಕುಮಾ​ರ​ಸ್ವಾ​ಮಿ​ರ​ವರು ಶಿರಾ ಹಾಗೂ ರಾಜ​ರಾ​ಜೇ​ಶ್ವರಿ ಕ್ಷೇತ್ರ ಉಪ ಚುನಾ​ವ​ಣೆ​ಗಳ ಒತ್ತ​ಡದ ನಡು​ವೆಯೂ ತಮ್ಮ ಕರ್ಮ​ಭೂ​ಮಿ​ಯಲ್ಲಿ ಪಕ್ಷ ಸಂಘ​ಟ​ನೆಗೆ ಒತ್ತು ನೀಡು​ತ್ತಿ​ದ್ದಾರೆ. ಮೈತ್ರಿ ಸರ್ಕಾರ ಪತ​ನ​ಗೊಂಡ ನಂತರ ಕುಮಾ​ರ​ಸ್ವಾಮಿ ಮತ್ತು ಅನಿ​ತಾ ಜಿಲ್ಲೆ​ಯ​ಲ್ಲಿ ಅಷ್ಟಾಗಿ ಕಾಣಿ​ಸಿ​ಕೊ​​ಳ್ಳು​ತ್ತಿರಲಿಲ್ಲ. ಕೊರೋನಾ ಸಂಕ​ಷ್ಟದ ​ಸ​ಮ​ಯ​ದಲ್ಲಿ ಬಡ​ವ​ರ ಸಮ​ಸ್ಯೆಗಳಿಗೆ ಸ್ಪಂದಿ​ಸಿ ಮಾನ​ವೀ​ಯತೆ ಮೆರೆ​ದಿ​ದ್ದರು. ಆದಾದ ಬಳಿಕ ಶಾಸ​ಕ​ದ್ವ​ಯರು ಉಭ​ಯ ಕ್ಷೇತ್ರ​ಗ​ಳಿಗೆ ಭೇಟಿ ನೀಡದಿರುವ ಕುರಿತು ​ಸ್ವ​ಪ​ಕ್ಷಿ​ಯ​ರಿಂದಲೇ ಅಪ​ಸ್ವ​ರದ ಮಾತು​ಗಳು ಕೇಳಿ ಬಂದಿ​ದ್ದ​ವು.

ಜೆಡಿ​ಎಸ್‌ ಸ್ಥಿತಿ ಏನಾ​ಗಿದೆ?

ರಾಜ​ಕೀ​ಯ​ವಾಗಿ ಮೇಲ್ನೋ​ಟಕ್ಕೆ ರಾಮನ​ಗರ ಜಿಲ್ಲೆ ಜೆಡಿ​ಎಸ್‌ನ ಭದ್ರ​ಕೋ​ಟೆ​ಯಂತೆ ಕಾಣು​ತ್ತಿದೆ. ಆದರೆ, ಸಾಂಪ್ರ​ದಾ​ಯಿಕ ಎದು​ರಾಳಿ ಪಕ್ಷ​ವಾದ ಕಾಂಗ್ರೆಸ್‌ನ ನಾಯ​ಕ​ರಾದ ಡಿ.ಕೆ.​ಶಿ​ವ​ಕು​ಮಾರ್‌ ಮತ್ತು ಡಿ.ಕೆ. ಸು​ರೇಶ್‌ ಅವರು ಜೆಡಿ​ಎಸ್‌ ಕೋಟೆ​ಯನ್ನು ಹಂತ ಹಂತ​ವಾಗಿ ಅಲು​ಗಾ​ಡಿ​ಸು​ತ್ತಿ​ದ್ದಾ​ರೆ. ​ಇನ್ನು ಬಿಜೆ​ಪಿ ನಾಯಕರು ಬೇರು ಮಟ್ಟ​ದಿಂದ ಪಕ್ಷ ಸಂಘ​ಟ​ನೆ​ಯಲ್ಲಿ ತೊಡಗಿದ್ದಾ​ರೆ.

ಜಿಲ್ಲೆಯ ನಾಲ್ಕು ವಿಧಾ​ನ​ಸಭಾ ಕ್ಷೇತ್ರ​ಗಳ ಪೈಕಿ ಮೂರ​ರಲ್ಲಿ ಜೆಡಿ​ಎಸ್‌ ಹಾಗೂ ಒಂದ​ರಲ್ಲಿ ಕಾಂಗ್ರೆಸ್‌ ಶಾಸ​ಕರು ಇದ್ದಾರೆ. ಶಾಸ​ಕರ ಸಂಖ್ಯಾ ದೃಷ್ಟಿ​ಯಲ್ಲಿ ಜಿಲ್ಲೆಯ ಮಟ್ಟಿಗೆ ಜೆಡಿ​ಎಸ್‌ ಪ್ರಬ​ಲ​ವಾ​ಗಿ​ರುವ ಪಕ್ಷ​ದಂತೆ ಕಂಡು ಬಂದರೂ ಸ್ಥಳೀಯ ಸಂಸ್ಥೆ​ಗ​ಳಾದ ಜಿಲ್ಲಾ ಪಂಚಾ​ಯಿತಿ, ತಾಲೂಕು ಪಂಚಾ​ಯಿತಿ, ಪುರ​ಸಭೆ, ನಗ​ರ​ಸಭೆಗಳ ಪೈಕಿ ಹೆಚ್ಚಿನ ಕಡೆ​ಗ​ಳಲ್ಲಿ ಸಮ​ಬ​ಲದ ಸದ​ಸ್ಯ​ರಿ​ದ್ದರೂ ಕಾಂಗ್ರೆಸ್‌ ಪಕ್ಷವೇ ಅಧಿ​ಕಾ​ರ​ ಹಿಡಿ​ಯು​ತ್ತಿ​ದೆ.

ಈ ಕಾರ​ಣ​ದಿಂದಾಗಿ ಜೆಡಿ​ಎಸ್‌ ಪ್ರಬ​ಲ​ವಾ​ಗಿ​ರುವ ರಾಮ​ನ​ಗರ ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರ​ಗ​ಳ​ಲ್ಲಿಯೇ ಕಾಂಗ್ರೆಸ್‌ ಪಕ್ಷ ದಿನ​ ಕಳೆ​ದಂತೆ ಪ್ರಬ​ಲ​ಗೊ​ಳ್ಳು​ತ್ತಲೇ ಇದೆ. ಇದ​ರಲ್ಲಿ ಡಿ.ಕೆ. ಸಹೋ​ದ​ರರ ರಾಜ​ಕೀಯ ಚಾಣ​ಕ್ಷತನವೂ ಕೆಲಸ ಮಾಡುತ್ತಿದೆ. ಮತ್ತೊಂದೆಡೆ ಡಿಸಿಎಂ ಅಶ್ವತ್‌್ಥ ನಾರಾ​ಯಣ, ವಿಧಾನ ಪರಿ​ಷತ್‌ ಸದಸ್ಯ ಸಿ.ಪಿ.​ಯೋ​ಗೇ​ಶ್ವರ್‌ ಪಕ್ಷದ ಬೇರು​ಗ​ಳನ್ನು ಗಟ್ಟಿಮಾಡಲು ತವ​ಕಿ​ಸು​ತ್ತಿ​ದ್ದಾ​ರೆ. ಹಾಗಾಗಿ ಎರಡೂ ಪಕ್ಷ​ಗಳ ನಾಯ​ಕರು ಜೆಡಿ​ಎಸ್‌ ಬುಟ್ಟಿಗೆ ಕೈ ಹಾಕು​ತ್ತಿ​ದ್ದಾರೆ. ಇದು ಜೆಡಿ​ಎಸ್‌ ವರಿ​ಷ್ಠ​ ​ಕು​ಮಾ​ರ​ಸ್ವಾಮಿ ಅವ​ರಿಗೆ ಜಿಲ್ಲೆ​ಯಲ್ಲಿ ಅಸ್ತಿತ್ವ ಉಳಿ​ಸಿ​ಕೊ​ಳ್ಳುವ ಸವಾ​ಲನ್ನು ತಂದೊ​ಡ್ಡಿರುವು​ದ​ರ​ರಿಂದ ತಂತ್ರ​ಕ್ಕೆ ಪ್ರತಿ​ತಂತ್ರ ಹೆಣೆ​ಯಲು ಮುಂದಾ​​ಗಿ​ದ್ದಾ​ರæ.

ಮಾಜಿ ಸಿಎಂ ಕುಮಾ​ರ​ಸ್ವಾಮಿ ಮತ್ತು ಶಾಸಕಿ ಅನಿತಾರವರು ಅ.14ರಂದು ಕೈಲಾಂಚ, ಅ.15ರಂದು ಕಸ​ಬಾ ಮತ್ತು ರಾಮ​ನ​ಗರ ಟೌನ್‌ , ಅ.16ರಂದು ಹಾರೋ​ಹಳ್ಳಿ ಮತ್ತು ಮರ​ಳ​ವಾಡಿ , ಅ.17ರಂದು ಕೂಟ​ಗಲ್‌ ಮತ್ತು ಬಿಡದಿ ಹೋಬಳಿ ಮುಖಂಡರು, ಕಾರ್ಯ​ಕ​ರ್ತರ ಸಭೆ ನಡೆ​ಸು​ವ​ರು.

ಕಾರ್ಯ​ಕ​ರ್ತರ ಮುನಿ​ಸಿ​ಗೆ ಕಾರ​ಣ​ವೇನು ?

ಜೆಡಿ​ಎಸ್‌ಗೆ ಅಧಿ​ಕಾರ ದೊರೆ​ತಾಗಲೆಲ್ಲ ದೇವೇ​ಗೌಡ ಮತ್ತು ಕುಮಾ​ರ​ಸ್ವಾಮಿ ಪಕ್ಷದ ಕಾರ್ಯ​ಕ​ರ್ತ​ರನ್ನು ನಿರ್ಲ​ಕ್ಷಿ​ಸು​ತ್ತಿ​ರು​ವುದೇ ಮುನಿ​ಸಿಗೆ ಪ್ರಮುಖ ಕಾರಣ. ಕಳೆದ ವಿಧಾ​ನ​ಸಭೆ ಚುನಾ​ವ​ಣೆ​ಯಲ್ಲಿ ಅತಂತ್ರ ಸ್ಥಿತಿ ನಿರ್ಮಾ​ಣ​ವಾಗಿ ಜೆಡಿ​ಎಸ್‌ಗೆ ಅನಿ​ರೀ​ಕ್ಷಿ​ತ​ವಾಗಿ 14 ತಿಂಗಳ ಕಾಲ ಅಧಿಕಾರ ಸಿಕ್ಕಿತ್ತು. ಆಗ ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯ​ಕ​ರ್ತ​ರಿಗೆ ಅಧಿ​ಕಾರ ಕಲ್ಪಿ​ಸು​ವು​ದನ್ನು ಗೌಡರ ಕುಟುಂಬ ಮರೆ​ತಿತ್ತು. 2007ರಲ್ಲಿಯೂ ಕುಮಾ​ರ​ಸ್ವಾ​ಮಿ​ರ​ವರು ಮುಖ್ಯ​ಮಂತ್ರಿ​ಯಾದ ಸಮ​ಯ​ದಲ್ಲಿ ಕೆಲ​ವರಿಗೆ ಅಧಿ​ಕಾರ ದೊರ​ಕಿದ್ದು ಬಿಟ್ಟರೆ, ಎಲ್ಲರೂ ತಮ್ಮ ಸಾಮ​ಥ್ಯ​ರ್‍ದಿಂದಲೇ ಸ್ಥಳೀಯ ಸಂಸ್ಥೆ​ಗ​ಳಲ್ಲಿ ಅಧಿ​ಕಾರ ಅನು​ಭ​ವಿ​ಸಿ​ದ್ದರು.
 
ಜೆಡಿ​ಎಸ್‌ ಮುಖಂಡರು ಮತ್ತು ಕಾರ್ಯ​ಕ​ರ್ತರ ಅಹ​ವಾ​ಲು​ಗ​ಳನ್ನುಆ​ಲಿ​ಸುವ ಸಲು​ವಾಗಿಯೇ ಕುಮಾ​ರ​ಸ್ವಾ​ಮಿ​ರ​ವರು ನಾಲ್ಕು ದಿನ​ಗ​ಳನ್ನು ಮೀಸ​ಲಿ​ಟ್ಟಿ​ದ್ದಾರೆ. ನಾಲ್ಕು ವಿಧಾ​ನ​ಸಭಾ ಕ್ಷೇತ್ರ​ಗಳ ಹೋಬ​ಳಿ​ವಾರು ನಡೆ​ಯ​ಲಿ​ರುವ ಸಭೆ​ಯಲ್ಲಿ ಮುಂದಿನ ದಿನ​ಗ​ಳಲ್ಲಿ ಕೈಗೊ​ಳ್ಳ​ಬೇ​ಕಾ​ಗಿ​ರುವ ಹೋರಾ​ಟ​ಗಳು , ಪಕ್ಷದ ಕಾರ್ಯ​ಕ್ರ​ಮ​ಗಳು ಹಾಗೂ ಚುನಾ​ವಣೆ​ಗಳ ಸಿದ್ಧತೆ ಕುರಿ​ತಾ​ಗಿಯೂ ಚರ್ಚೆ ನಡೆ​ಯ​ಲಿ​ದೆ.

- ಎ.ಮಂಜು​ನಾಥ್‌, ಶಾಸ​ಕರು

Follow Us:
Download App:
  • android
  • ios