ಪ್ರಸ್ತುತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಒಂದು ಬ್ಯಾರೆಲ್‌ಗೆ ಸುಮಾರು 9,500 ರೂಪಾಯಿ (100 ಡಾಲರ್) ಸಮೀಪಕ್ಕೆ ತಲುಪಿದೆ. ಇತ್ತ ಅಮೆರಿಕದ ಒಂದು ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು 95 ರೂಪಾಯಿಗಿಂತ ಕೆಳಕ್ಕೆ ಕುಸಿದು ಆತಂಕ ಸೃಷ್ಟಿಸಿದೆ. ಇಂತಹ ಕಠಿಣ ಆರ್ಥಿಕ ಪರಿಸ್ಥಿತಿಯ ನಡುವೆ ನಡೆಯುತ್ತಿರುವ ಇಂದಿನ ಮೋದಿ-ಪುಟಿನ್ ಸಭೆಯು ಭಾರತೀಯರ ಪಾಲಿಗೆ ಅತಿ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದೆ.
ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈಗಾಗಲೇ ಭಾರತದ ರಾಜಧಾನಿ ನವದೆಹಲಿಗೆ ಬಂದಿಳಿದಿದ್ದಾರೆ. ಶನಿವಾರದಿಂದ (ಸೆಪ್ಟೆಂಬರ್ 12) ಆರಂಭವಾಗಲಿರುವ ‘ಬ್ರಿಕ್ಸ್’ (BRICS) ಶೃಂಗಸಭೆಗೂ ಮುನ್ನ, ಇಂದು (ಶುಕ್ರವಾರ, ಸೆಪ್ಟೆಂಬರ್ 11) ಮಧ್ಯಾಹ್ನ 3:30ಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪುಟಿನ್ ನಡುವೆ ಅತ್ಯಂತ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.
ಪ್ರಸ್ತುತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಒಂದು ಬ್ಯಾರೆಲ್‌ಗೆ ಸುಮಾರು 9,500 ರೂಪಾಯಿ (100 ಡಾಲರ್) ಸಮೀಪಕ್ಕೆ ತಲುಪಿದೆ. ಇತ್ತ ಅಮೆರಿಕದ ಒಂದು ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು 95 ರೂಪಾಯಿಗಿಂತ ಕೆಳಕ್ಕೆ ಕುಸಿದು ಆತಂಕ ಸೃಷ್ಟಿಸಿದೆ. ಇಂತಹ ಕಠಿಣ ಆರ್ಥಿಕ ಪರಿಸ್ಥಿತಿಯ ನಡುವೆ ನಡೆಯುತ್ತಿರುವ ಇಂದಿನ ಮೋದಿ-ಪುಟಿನ್ ಸಭೆಯು ಭಾರತೀಯರ ಪಾಲಿಗೆ ಅತಿ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದೆ.
ಕೇವಲ 9 ತಿಂಗಳಲ್ಲಿ ಎರಡನೇ ಬಾರಿ ದೆಹಲಿಗೆ ಪುಟಿನ್!
ಕಳೆದ 2025ರ ಡಿಸೆಂಬರ್‌ನಲ್ಲಿ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದರು. ಇದೀಗ ಕೇವಲ ಒಂಬತ್ತು ತಿಂಗಳ ಅಂತರದಲ್ಲಿ ಅವರು ಮತ್ತೆ ದೆಹಲಿಗೆ ಕಾಲಿಟ್ಟಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿರುವುದರಿಂದ ಭಾರತಕ್ಕೆ ತೈಲ ಆಮದು ವೆಚ್ಚ ವಿಪರೀತ ಹೊರೆಯಾಗುತ್ತಿದೆ. ಇದು ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಬಹುದು. ಹೀಗಾಗಿ, ಇಂದಿನ ಸಭೆಯಲ್ಲಿ ಪುಟಿನ್ ಭಾರತಕ್ಕೆ ರಿಯಾಯಿತಿ ದರದಲ್ಲಿ (ಡಿಸ್ಕೌಂಟ್) ಕಚ್ಚಾತೈಲ ನೀಡುವ ಭರವಸೆ ನೀಡಲಿದ್ದಾರೆಯೇ ಎಂಬುದು ಸಾಮಾನ್ಯ ಜನರ ಜೇಬಿನ ದೃಷ್ಟಿಯಿಂದ ಅತಿ ಮುಖ್ಯವಾಗಿದೆ.
ಇಂದಿನ ಸಭೆಯ ಪ್ರಮುಖ ಅಜೆಂಡಾಗಳು:
ಭಾರತವು ರಷ್ಯಾದಿಂದ ಸತತ ಪೂರೈಕೆ ಹಾಗೂ ಹೆಚ್ಚಿನ ಬೆಲೆ ರಿಯಾಯಿತಿಯನ್ನು ಬಯಸುತ್ತಿದೆ. ರಷ್ಯಾ ಇದಕ್ಕೆ ಪ್ರತಿಯಾಗಿ ಭಾರತದಿಂದ ದೀರ್ಘಾವಧಿಯ ಖರೀದಿ ಭರವಸೆಯನ್ನು ನಿರೀಕ್ಷಿಸುತ್ತಿದೆ. ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಡಾಲರ್ ಮೇಲಿನ ಅವಲಂಬನೆ ತಗ್ಗಿಸಲು, ಭಾರತ-ರಷ್ಯಾ ನಡುವೆ ‘ರೂಪಾಯಿ-ರೂಬಲ್’ ಮುಖಾಂತರವೇ ವ್ಯಾಪಾರ ನಡೆಸಲು ಹಾಗೂ ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ ಮಾರ್ಗಗಳನ್ನು ಸರಳಗೊಳಿಸಲು ಇಬ್ಬರೂ ನಾಯಕರು ಒತ್ತು ನೀಡಲಿದ್ದಾರೆ. ಸುಖೋಯ್ Su-57 ಅತ್ಯಾಧುನಿಕ ಯುದ್ಧ ವಿಮಾನಗಳು, ಮಿಲಿಟರಿ ತಂತ್ರಜ್ಞಾನ ವರ್ಗಾವಣೆ ಮತ್ತು ಪರಮಾಣು ಶಕ್ತಿ ಯೋಜನೆಗಳ ಕುರಿತು ಪ್ರಮುಖ ಚರ್ಚೆಗಳು ನಡೆಯುವ ಸಾಧ್ಯತೆಯಿದೆ.
ದೇಶದ ಹಿತಾಸಕ್ತಿಗೆ ಮೊದಲ ಆದ್ಯತೆ
ಭಾರತದ ಜಾತಕದ ಪ್ರಕಾರ (1947 ಆಗಸ್ಟ್ 15) ಧನಸ್ಥಾನದಲ್ಲಿ ಕುಜನಿದ್ದು, ಭಾರತ ತನ್ನ ಆರ್ಥಿಕ ಲಾಭವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ವಿದೇಶಿ ವಿನಿಮಯ ಉಳಿತಾಯ ಮತ್ತು ದೇಶದ ಇಂಧನ ಭದ್ರತೆಯೇ ಪ್ರಧಾನಿ ಮೋದಿಯವರ ಮೊದಲ ಗುರಿ. ಭಾರತ ಒಂದೆಡೆ ಪುಟಿನ್‌ಗೆ "ಯುದ್ಧ ನಿಲ್ಲಿಸಿ, ಶಾಂತಿ ಸ್ಥಾಪಿಸಿ" ಎಂದು ಬಹಿರಂಗವಾಗಿ ಸಲಹೆ ನೀಡುತ್ತಲೇ, ಇನ್ನೊಂದೆಡೆ ದೇಶದ ಜನರ ಹಿತದೃಷ್ಟಿಯಿಂದ ರಷ್ಯಾದಿಂದ ಅಗ್ಗದ ತೈಲ ಖರೀದಿಯನ್ನು ಮುಂದುವರಿಸಲಿದೆ. ("ಭಾರತ ತೈಲ ಖರೀದಿ ನಿಲ್ಲಿಸಿದರೆ ಯುದ್ಧ ನಿಲ್ಲುವುದಿಲ್ಲ" ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಈಗಾಗಲೇ ಜಾಗತಿಕ ವೇದಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ).


