ಭಾರತ ಪಾಕಿಸ್ತಾನ ಪ್ರತ್ಯೇಕಗೊಂಡು 79 ವರ್ಷಗಳೇ ಕಳೆದಿವೆ. ಆದರೂ ಭಾರತದಲ್ಲಿ ಪಾಕಿಸ್ತಾನದ ನಾಯಕರೊಬ್ಬರಿಗೆ ಸೇರಿದ 2.5 ಎಕರೆಯ ವಿಸ್ತಾರವಾಗಿರುವ ಬಂಗಲೆಯೊಂದು ಇದೆ ಎಂಬ ವಿಚಾರ ನಿಮಗೆ ಗೊತ್ತಾ? ಇಲ್ಲಿದೆ ಡಿಟೇಲ್ ಸ್ಟೋರಿ…
ಭಾರತ ಪಾಕಿಸ್ತಾನ ಪ್ರತ್ಯೇಕಗೊಂಡು 79 ವರ್ಷಗಳೇ ಕಳೆದಿವೆ. ಆದರೂ ಭಾರತದಲ್ಲಿ ಪಾಕಿಸ್ತಾನದ ನಾಯಕರೊಬ್ಬರಿಗೆ ಸೇರಿದ 2.5 ಎಕರೆಯ ವಿಸ್ತಾರವಾಗಿರುವ ಬಂಗಲೆಯೊಂದು ಇದೆ ಎಂಬ ವಿಚಾರ ನಿಮಗೆ ಗೊತ್ತಾ? ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಬಂಧ ಹಾವು ಮುಂಗುಸಿಯಂತಿದೆ. ಭಾರತ ಪಾಕಿಸ್ತಾನ ಪ್ರತ್ಯೇಕಗೊಂಡಂದಿನಿಂದಲೂ ಎರಡು ದೇಶಗಳ ಮಧ್ಯೆ ಸಾಮರಸ್ಯ ಇದ್ದಿದ್ದು ತೀರಾ ಕಡಿಮೆ. ಹೀಗಿರುವಾಗ ಪಾಕಿಸ್ತಾನದವರೊಬ್ಬರು ಇಲ್ಲಿ ಆಸ್ತಿ ಮಾಡುವುದು ಹೇಗೆ ಸಾಧ್ಯ ಎಂದು ಅಚ್ಚರಿಯಾಗಬಹುದು. ಆದರೆ ಇದು ಸತ್ಯ. ಪಾಕಿಸ್ತಾನದ ನಿರ್ಮಾತೃ ಮೊಹಮ್ಮದ್ ಅಲಿ ಜಿನ್ನಾ ಅವರಿಗೆ ಸೇರಿದ ಆಸ್ತಿ ಇದಾಗಿದೆ..
ಇಂಡಿಯಾಗೇಟ್‌ನಿಂದ ಹಿಡಿದು ಛತ್ರಪತಿ ಶಿವಾಜಿ ಟರ್ಮಿನಸ್ ವರೆಗೆ ಮುಂಬೈ ಅನೇಕ ಐತಿಹಾಸಿಕ ಸ್ಮಾರಕಗಳಿಗೆ ನೆಲೆಯಾಗಿದೆ. ಆದರೆ ಭಾರತದ ಹಣಕಾಸು ರಾಜಧಾನಿ ಎನಿಸಿರುವ ಮುಂಬೈನಲ್ಲಿ ಪಾಕಿಸ್ತಾನಿ ನಾಯಕ ಮೊಹಮ್ಮದ್ ಅಲಿ ಜಿನ್ನಾ ಅವರಿಗೆ ಸೇರಿದ ಹಳೆಯ ಮನೆ ಬಂಗಲೆ ಇದೆ ಎಂಬ ವಿಚಾರ ಕೆಲವರಿಗೆ ಮಾತ್ರ ತಿಳಿದಿದೆ. ಜಿನ್ನಾ ಅವರು ಇಲ್ಲಿ 1947ರ ಆಗಸ್ಟ್ 7ರವರೆಗೆ ಜನಿಸಿದ್ದರು.
ಮುಂಬೈನಲ್ಲಿರುವ ಜಿನ್ನಾ ಅವರ ಮನೆಯ ಬಗ್ಗೆ ಕಂಟೆಂಟ್ ವ್ಲಾಗರ್ ಆಗಿರುವ ಜೆನಿಲ್ ವರಿಯಾ ಅವರು ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಈ ಬಂಗಲೆ ಮುಂಬೈನ ಪಾಶ್ ಏರಿಯಾ ಎನಿಸಿರುವ ಮಲಬಾರ್ ಹಿಲ್ ಪ್ರದೇಶದಲ್ಲಿದೆ. ಬಿಎಂಸಿ ಪ್ರಕಾರ ಈ ಕಟ್ಟಡವೂ ಮೊಹಮ್ಮದ್ ಅಲಿ ಜಿನ್ನಾ ಅವರ ಜೊತೆ ಭಾರತದ ಪ್ರಮುಖ ನಾಯಕರೆನಿಸಿದ ಜವಾಹರ್ ಲಾಲ್ ನೆಹರೂ, ಮಹಾತ್ಮ ಗಾಂಧಿ ಇಲ್ಲಿ ಹಲವು ಐತಿಹಾಸಿಕ ಹಾಗೂ ಮಹತ್ವದ ಸಭೆಗಳನ್ನು ನಡೆಸಿದ್ದರು.
ಪ್ರಸ್ತುತ ಜಿನ್ನಾ ಹೌಸ್ ಅಥವಾ ಸೌತ್ ಕೋರ್ಟ್ ಮೆನ್ಶನ್ ಎಂದು ಕರೆಯಲ್ಪಡುವ ಈ ಮನೆಯನ್ನು ಪಾಕಿಸ್ತಾನದ ಜನಕ ಮೊಹಮ್ಮದ್ ಅಲಿ ಜಿನ್ನ ಅವರು 1936ರಲ್ಲಿ ನಿರ್ಮಾಣ ಮಾಡಿದ್ದರು. ಆಗಲೇ ಈ ಮನೆಗೆ ಸುಮಾರು 2 ಲಕ್ಷ ರೂಪಾಯಿ ವೆಚ್ಚ ಆಗಿತ್ತು. ಇಂಗ್ಲೆಂಡ್‌ನಿಂದ ಮರಳಿ ಬಂದು ಮುಸ್ಲಿಂ ಲೀಗ್‌ನ ಉಸ್ತುವಾರಿ ತೆಗೆದುಕೊಳ್ಳುವ ಮೊದಲು ಈ ಮನೆ ನಿರ್ಮಾಣವಾಗಿತ್ತು.
2.5 ಎಕರೆಯಷ್ಟು ವಿಸ್ತಾರವಾಗಿರುವ ಈ ಬಂಗಲೆ ಇಟಾಲಿಯನ್ ಅಮೃತಶಿಲೆಯ ಕೆಲಸವನ್ನು ಒಳಗೊಂಡಿದ್ದು, ಇದನ್ನು ಪ್ರಸಿದ್ಧ ಬ್ರಿಟಿಷ್ ವಾಸ್ತುಶಿಲ್ಪಿ ಕ್ಲೌಡ್ ಬ್ಯಾಟ್ಲಿಯವರ ನಿರ್ದೇಶನದಲ್ಲಿ ನಿರ್ಮಿಸಲಾಗಿದೆ. ಜಿನ್ನಾ ಹೌಸ್ ನಿರ್ಮಾಣಕ್ಕೆ ಬಳಸಲಾದ ಆರ್ಟ್ ಡೆಕೊ ಮತ್ತು ಇಂಡೋ ಡೆಕೊ ಶೈಲಿಗೆ ಕ್ಲೌಡ್ ಬ್ಯಾಟ್ಲಿ ಹೆಸರುವಾಸಿಯಾಗಿದ್ದರು. 1947ರಲ್ಲಿ ಜಿನ್ನಾ ಅವರು ವಾಪಸ್ ಭಾರತಕ್ಕೆ ಬಂದು ಆ ಮನೆಯಲ್ಲಿ ನೆಲೆಸಬೇಕು ಎಂದು ಆಸೆ ಪಟ್ಟಿದ್ದರು. ಆದರೆ ಅವರ ಆಸೆ ಆಸೆಯಾಗಿಯೇ ಉಳಿಯಿತು. ಅವರಿಗೆ ಮತ್ತೆ ಭಾರತಕ್ಕೆ ಮರಳಲು ಸಾಧ್ಯವಾಗಲಿಲ್ಲ. 1948ರಲ್ಲಿ ಅವರು ನಿಧನರಾದರು.
ಇದನ್ನೂ ಓದಿ: ವಂದೇ ಭಾರತ್ ರೈಲಿನಲ್ಲಿ ರೋಮ್ಯಾನ್ಸ್ ಮಾಡಿ ವೈರಲ್ ಆದ ಜೋಡಿಗೆ ಮದುವೆ ಭಾಗ್ಯ
ಹೀಗಾಗಿ ಕಳೆದ 7 ದಶಕಗಳಿಂದ ಅಂದರೆ ಸುಮಾರು 70 ವರ್ಷಗಳಿಂದ ಈ ಕಟ್ಟಡ ಖಾಲಿಯಾಗಿಯೇ ಉಳಿದಿದೆ. ಪ್ರಸ್ತುತ ಈ ಕಟ್ಟಡ ಭಾರತ ಸರ್ಕಾರದ ಆಡಳಿತದಲ್ಲಿ ಇದ್ದು, ಸ್ಥಳೀಯ ಪ್ರಾಧಿಕಾರಗಳು ಇದನ್ನು ನೋಡಿಕೊಳ್ಳುತ್ತವೆ. ಈ ಭವ್ಯವಾದ ಆದರೆ ಖಾಲಿ ಇರುವ ಬಂಗಲೆ ಹಲವು ವರ್ಷಗಳಿಂದ ಹಲವಾರು ಕಾನೂನು ವಿವಾದಗಳು ಮತ್ತು ವಿವಾದಗಳ ಕೇಂದ್ರಬಿಂದುವಾಗಿದೆ.
ಇದನ್ನೂ ಓದಿ: ರ‍್ಯಾಗಿಂಗ್‌ಗೆ ವಿದ್ಯಾರ್ಥಿನಿ ಬಲಿ: ಮೂವರು ವಿದ್ಯಾರ್ಥಿನಿಯರು ಪ್ರೊಫೆಸರ್ ವಿರುದ್ಧ ಕೇಸ್
2017 ರಲ್ಲಿ, ಬಿಜೆಪಿ ಶಾಸಕ ಮಂಗಲ್ ಪ್ರಭಾತ್ ಲೋಧಾ ಅವರು ಜಿನ್ನಾ ಹೌಸ್ ಅನ್ನು ಕೆಡವಿ ಭಾರತೀಯ ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು. ಪಾಕಿಸ್ತಾನವು ಆವಬಂಗಲೆಯಲ್ಲಿ ರಾಯಭಾರ ಕಚೇರಿಯನ್ನು ಸ್ಥಾಪಿಸಲು ಪ್ರಯತ್ನಿಸಿತು. ಆದರೆ ಆ ಪ್ರಯತ್ನಗಳನ್ನು ಭಾರತ ಸರ್ಕಾರವು ತಿರಸ್ಕರಿಸಿತು. ದೇಶ ವಿಭಜನೆಯ ನಂತರ ಭಾರತೀಯನನ್ನು ಮದುವೆಯಾಗಿ ಇಲ್ಲಿ ನೆಲೆಸಿದ ಜಿನ್ನಾ ಅವರ ಮಗಳು ದಿನಾ ವಾಡಿಯಾ, ಮನೆಯ ಮಾಲೀಕತ್ವದ ಬಗ್ಗೆ ಮೊಕದ್ದಮೆ ಹೂಡಿದ್ದರು. ಆದರೆ ನ್ಯಾಯಾಲಯವು ಅವರ ಅರ್ಜಿಯನ್ನು ತಿರಸ್ಕರಿಸಿತು. ಸದ್ಯಕ್ಕೆ, ಜಿನ್ನಾ ಮನೆ ಖಾಲಿಯಾಗಿದೆ.


