MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಯುದ್ಧದಿಂದ ಎಲ್‌ಪಿಜಿ ಅಭಾವ: ಶವಾಗಾರದಲ್ಲಿ LPG ಬದಲು ಎಲೆಕ್ಟ್ರಿಕ್‌ ಅಂತ್ಯಕ್ರಿಯೆ!

ಯುದ್ಧದಿಂದ ಎಲ್‌ಪಿಜಿ ಅಭಾವ: ಶವಾಗಾರದಲ್ಲಿ LPG ಬದಲು ಎಲೆಕ್ಟ್ರಿಕ್‌ ಅಂತ್ಯಕ್ರಿಯೆ!

ಮಧ್ಯಪ್ರಾಚ್ಯ ಯುದ್ಧದಿಂದ ಎಲ್‌ಪಿಜಿ ಕೊರತೆಯ ಭೀತಿ ಎದುರಾಗಿದ್ದು, ಪುಣೆಯ ಶವಾಗಾರವು ಎಲೆಕ್ಟ್ರಿಕ್‌ ಅಂತ್ಯಸಂಸ್ಕಾರಕ್ಕೆ ಮೊರೆಹೋಗಿದೆ. ಈ ಸಂಘರ್ಷವು 'ಜಲಯುದ್ಧ'ವಾಗಿ ಮಾರ್ಪಟ್ಟಿದ್ದು, ಇರಾನ್-ಅಮೆರಿಕ ನೀರಿನ ಘಟಕಗಳ ಮೇಲೆ ದಾಳಿ ನಡೆಸಿವೆ.  ದುಬೈನಲ್ಲಿ ತೀವ್ರ ಆಹಾರದ ಕೊರತೆ ಉಂಟಾಗಿದೆ.

1 Min read
Author : Kannadaprabha News
Published : Mar 10 2026, 08:29 AM IST
Share this Photo Gallery
  • FB
  • TW
  • Linkdin
  • Whatsapp
15
 ಎಲ್‌ಪಿಜಿ ಕೊರತೆ
Image Credit : X

ಎಲ್‌ಪಿಜಿ ಕೊರತೆ

ಮಧ್ಯಪ್ರಾಚ್ಯ ಯುದ್ಧದಿಂದ ಎಲ್‌ಪಿಜಿ ಕೊರತೆಯ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಬೃಹತ್‌ ಶವಾಗಾರವಾಗಿರುವ ಪುಣೆ ವೈಕುಂಠ ಧಾಮವು ಎಲ್‌ಪಿಜಿ ಬದಲಿಗೆ ಎಲೆಕ್ಟ್ರಿಕ್‌ ಯಂತ್ರಗಳ ಮೂಲಕ ಶವಗಳ ಅಂತ್ಯಸಂಸ್ಕಾರಕ್ಕೆ ನಿರ್ಧರಿಸಿದೆ.

25
ಎಲೆಕ್ಟ್ರಿಕ್‌ ಯಂತ್ರದ ಮೂಲಕ ಶವಗಳ ಅಂತ್ಯಕ್ರಿಯೆ
Image Credit : X

ಎಲೆಕ್ಟ್ರಿಕ್‌ ಯಂತ್ರದ ಮೂಲಕ ಶವಗಳ ಅಂತ್ಯಕ್ರಿಯೆ

ಪುಣೆಯ ನವಿ ಪೇಠದಲ್ಲಿ 17 ಕಿ.ಮೀ. ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಈ ಶವಾಗಾರದಲ್ಲಿ ದಿನಕ್ಕೆ ಕನಿಷ್ಠ 20 ಶವಗಳ ದಹನಕ್ರಿಯೆ ನಡೆಯುತ್ತದೆ. ಇದೀಗ ಎಲ್‌ಪಿಜಿ ಕೊರತೆಯ ಆತಂಕ ಎದುರಾಗಿರುವುದರಿಂದ ಅದರ ಬಳಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬದಲಿದೆ ಎಲೆಕ್ಟ್ರಿಕ್‌ ಯಂತ್ರದ ಮೂಲಕ ಶವಗಳ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

Related image1
LPG Price Hike: ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುತ್ತಾ? ಹಾಗಿದ್ರೆ 5 ಟಿಪ್ಸ್ ಫಾಲೋ ಮಾಡಿ!
Related image2
ಬೆಳ್ಳಂ ಬೆಳಗ್ಗೆ ಬೆಲೆ ಏರಿಕೆ ಶಾಕ್' ಇಂದಿನಿಂದ ಗೃಹ ಬಳಕೆಯ LPG ಸಿಲಿಂಡರ್ ದರದಲ್ಲಿ 60 ರೂಪಾಯಿ ಹೆಚ್ಚಳ
35
ಜಲಯುದ್ಧ
Image Credit : X

ಜಲಯುದ್ಧ

ಸೇನಾ ನೆಲೆ, ರಾಯಭಾರ ಕಚೇರಿ, ತೈಲ ಡಿಪೋ, ಸರ್ಕಾರಿ ಕಚೇರಿಗಳ ಮೇಲಿನ ದಾಳಿಯ ಬಳಿಕ ಮಧ್ಯಪ್ರಾಚ್ಯದ ಯುದ್ಧವೀಗ ಜಲಯುದ್ಧವಾಗಿ ಮಾರ್ಪಟ್ಟಿದೆ. ಮಧ್ಯಪ್ರಾಚ್ಯದಲ್ಲಿ ಪೆಟ್ರೋಲ್‌ಗಿಂತಲೂ ಹೆಚ್ಚಿನ ಬೆಲೆ ಹೊಂದಿರುವ ನೀರಿನ ಘಟಕಗಳ ಮೇಲೆ ಇರಾನ್‌- ಅಮೆರಿಕ ಪರಸ್ಪರ ದಾಳಿ ನಡೆಸಿದ್ದು ಭಾರೀ ಆತಂಕ ಹುಟ್ಟುಹಾಕಿದೆ. ಬಹ್ರೇನ್‌ನ ನೀರು ಘಟಕ ಮೇಲೆ ಇರಾನ್‌, ಇರಾನ್‌ನ ನೀರು ಘಟಕದ ಮೇಲೆ ಅಮೆರಿಕ ದಾಳಿ ಮಾಡಿದೆ.

45
ಇರಾನ್‌ ಜತೆಗಿನ ಸಂಘರ್ಷ
Image Credit : X

ಇರಾನ್‌ ಜತೆಗಿನ ಸಂಘರ್ಷ

ಇರಾನ್‌ ಜತೆಗಿನ ಸಂಘರ್ಷ 3 ತಿಂಗಳಾದರೂ ನಡೆಯುತ್ತದೆ ಎಂದಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್‌, ಇದೀಗ ಇಸ್ರೇಲ್‌ಗೆ 6000 ಕೋಟಿ ರು. ಮೌಲ್ಯದ 20,000 ಬಾಂಬ್‌ಗಳನ್ನು ಇಸ್ರೇಲ್‌ಗೆ ರವಾನಿಸುವಂತೆ ತಮ್ಮ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

55
 ಕೊಲ್ಲಿ ರಾಷ್ಟ್ರಗಳು
Image Credit : X

ಕೊಲ್ಲಿ ರಾಷ್ಟ್ರಗಳು

ಅಮೆರಿಕ, ಇರಾನ್ ಮತ್ತು ಇಸ್ರೇಲ್ ಸಂಘರ್ಷದಿಂದ ಕೊಲ್ಲಿ ರಾಷ್ಟ್ರಗಳು ಬಲಿಪಶುಗಳಾಗುತ್ತಿದ್ದು, ದುಬೈನಲ್ಲಿ ತಾಜಾ ಆಹಾರಕ್ಕೂ ಸಂಚಕಾರ ಬಂದೊದಗಿದೆ. ಇಲ್ಲಿ ಕೇವಲ 8 ದಿನಗಳಿಗೆ ಆಗುವಷ್ಟು ಮಾತ್ರವೇ ಆಹಾರ ದಾಸ್ತಾನುಗಳಿರುವುದು ಸದ್ಯ ಆತಂಕಕ್ಕೆ ಕಾರಣವಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಕೊಲ್ಲಿ ಯುದ್ಧ
ಎಲ್‌ಪಿಜಿ

Latest Videos
Recommended Stories
Recommended image1
ತಿರುಪತಿಗೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ಬಕೆಟ್ ಪಾತ್ರೆಗಳಲ್ಲಿ ತುಂಬಿಕೊಂಡು ಹೋದ ಜನ
Recommended image2
ಇರಾನ್ ಇಸ್ರೇಲ್ ಯುದ್ಧದಿಂದ ಷೇರುಪೇಟೆಯಲ್ಲಿ ಮಹಾಪತನ: 10 ದಿನದಲ್ಲಿ 31 ಲಕ್ಷ ಕೋಟಿ ಸಂಪತ್ತು ನಾಶ
Recommended image3
India Latest News Live: ಯುದ್ಧದಿಂದ ಎಲ್‌ಪಿಜಿ ಅಭಾವ - ಶವಾಗಾರದಲ್ಲಿ LPG ಬದಲು ಎಲೆಕ್ಟ್ರಿಕ್‌ ಅಂತ್ಯಕ್ರಿಯೆ!
Related Stories
Recommended image1
LPG Price Hike: ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುತ್ತಾ? ಹಾಗಿದ್ರೆ 5 ಟಿಪ್ಸ್ ಫಾಲೋ ಮಾಡಿ!
Recommended image2
ಬೆಳ್ಳಂ ಬೆಳಗ್ಗೆ ಬೆಲೆ ಏರಿಕೆ ಶಾಕ್' ಇಂದಿನಿಂದ ಗೃಹ ಬಳಕೆಯ LPG ಸಿಲಿಂಡರ್ ದರದಲ್ಲಿ 60 ರೂಪಾಯಿ ಹೆಚ್ಚಳ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved