ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ, ಹಿರಿಯ ವಿದ್ಯಾರ್ಥಿನಿಯರು ಮತ್ತು ಪ್ರೊಫೆಸರ್‌ನಿಂದ ನಡೆದಿದೆ ಎನ್ನಲಾದ ರ‍್ಯಾಗಿಂಗ್‌ ಹಾಗೂ ಲೈಂಗಿಕ ಕಿರುಕುಳದಿಂದ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದಾಳೆ. ತೀವ್ರ ಆಘಾತದಿಂದ ಬಳಲುತ್ತಿದ್ದ ಆಕೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಲೈಂಗಿಕ ಕಿರುಕುಳ ಹಾಗೂ ಕಾಲೇಜು ಕ್ಯಾಂಪಸ್‌ನಲ್ಲಿ ರ‍್ಯಾಗಿಂಗ್‌ ನಂತರ 19 ವರ್ಷದ ವಿದ್ಯಾರ್ಥಿನಿ ಸಾವಿಗೆ ಶರಣಾಗಿರುವ ಘಟನೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆದಿದೆ. ಡಿಸೆಂಬರ್ 26ರಂದು ಲೂಧಿಯಾನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಆಕೆ ಸಾವನ್ನಪ್ಪಿದ್ದು, ಆಕೆಯ ಸಾವು ಈಗ ದೇಶದೆಲ್ಲೆಡೆ ಶಿಕ್ಷಣ ಸಂಸ್ಥೆಯೊಳಗೆ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಕಿರುಕುಳದ ಬಗ್ಗೆ ಚಿಂತೆಗೀಡು ಮಾಡುವಂತೆ ಮಾಡಿದೆ. ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿನಿಯರು ಮಾಡಿದ ದೈಹಿಕ ಹಲ್ಲೆ, ಲೈಂಗಿಕ ಕಿರುಕುಳ, ರ‍್ಯಾಗಿಂಗ್‌ ನಂತರ ಆಕೆ ತೀವ್ರ ಆಘಾತಕ್ಕೆ ಜಾರಿದ್ದು ನಂತರ ಸಾವನ್ನಪ್ಪಿದ್ದಾಳೆ.

ಸಾಯುವ ಮೊದಲು ಆ ವಿದ್ಯಾರ್ಥಿನಿ ನೀಡಿದ ಹೇಳಿಕೆಯ ಪ್ರಕಾರ, ಆಕೆ ಸರ್ ನನ್ನ ಹಿಂದೆ ಬಿದ್ದಿದ್ದರು ಎಂದು ಹೇಳಿದ್ದಾಳೆ. ಪಠಾಣ್‌ಕೋಟ್‌ನ ಆಸ್ಪ್ರತೆಯಲ್ಲಿ ಆಕೆ ಸಾಯುವ ಮೊದಲು ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ. ಅದರ ಪ್ರಕಾರ, ಮಹಿಳೆಯೊಬ್ಬರು ಆಕೆಯ ಬಳಿ ಪ್ರೊಫೆಸರ್ ನಿನ್ನ ಕೆಟ್ಟದಾಗಿ ನಡೆಸಿಕೊಂಡಿದ್ದಾರಾ? ನಿನ್ನನ್ನು ಕೆಟ್ಟ ರೀತಿಯಲ್ಲಿ ಟಚ್ ಮಾಡಿದ್ದಾರಾ ಎಂದು ಕೇಳಿದಾಗ ಆಕೆ ಹೌದು ಎಂದು ತಲೆಯಾಡಿಸಿದ್ದಾಳೆ.

ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ, ಯುವತಿ ದಣಿದಂತೆ ಹಾಗೂ ಬಹಳ ಕಷ್ಟಪಟ್ಟು ಮಾತನಾಡಿದ್ದಾಳೆ. ಆಕೆಯ ತಂದೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದ್ದು,ಧರ್ಮಾಶಾಲಾದ ಪೊಲೀಸರು ಮೂವರು ವಿದ್ಯಾರ್ಥಿನಿಯರು ಹಾಗೂ ಓರ್ವ ಪ್ರೊಫೆಸರ್ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 75(ಲೈಂಗಿಕ ದೌರ್ಜನ್ಯ) 115( ಹಾನಿಗೆ ಕಾರಣ) ಸೆಕ್ಷನ್3 (ಸಾಮಾನ್ಯ ಉದ್ದೇಶದಿಂದ ಕೃತ್ಯ) ಹಾಗೂ ಹಿಮಾಚಲ ಪ್ರದೇಶ ಶೈಕ್ಷಣಕ ಸಂಸ್ಥೆಗಳಲ್ಲಿ ರ‍್ಯಾಗಿಂಗ್‌ ತಡೆ ಕಾಯ್ದೆ 2009ರಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ತಿರುಪತಿಯಲ್ಲಿ ಭಾರಿ ಭದ್ರತಾ ಲೋಪ: ದೇಗುಲದ ಗೋಪುರ ಏರಿ ಕುಡುಕನ ಹೈಡ್ರಾಮಾ: ಕಳಸಕ್ಕೆ ಹಾನಿ ಮಾಡಲು ಯತ್ನ

ಆರೋಪಿಗಳಾದ ಮೂವರು ವಿದ್ಯಾರ್ಥಿನಿಯರು ಕ್ಲಾಸ್‌ಮೇಟ್‌ಗಳಾಗಿದ್ದು ಸೆಕೆಂಡ್ ಇಯರ್‌ನಲ್ಲಿ ಓದುತ್ತಿದ್ದಾರೆ, ಆದರೆ ಸಂತ್ರಸ್ತೆ ಮೊದಲ ವರ್ಷದಲ್ಲಿ ಅನುತ್ತೀರ್ಣಗೊಂಡಿದ್ದಾರೆ. ಕಾಲೇಜಿನ ಪ್ರೊಫೆಸರ್ ಹಾಗೂ ವಿದ್ಯಾರ್ಥಿನಿಯರು ಎಸಗಿದ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯದಿಂದ ನನ್ನ ಪುತ್ರಿ ಖಿನ್ನತೆಗೆ ಜಾರಿದಳು ಎಂದು ವಿದ್ಯಾರ್ಥಿನಿಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಪ್ರಕಾರ ಕಳೆದ ಸೆಪ್ಟೆಂಬರ್ 18ರಂದು ಮೂವರು ಮಹಿಳಾ ವಿದ್ಯಾರ್ಥಿನಿಯರು ಆಕೆಗೆ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾರೆ. ಈ ಕಿರುಕುಳದ ಸಮಯದಲ್ಲಿ ಓರ್ವ ವಿದ್ಯಾರ್ಥಿನಿ ಆಕೆಯ ತಲೆಗೆ ಬಾಟಲ್‌ನಿಂದ ಹಲ್ಲೆ ಮಾಡಿದ್ದು, ಆಕೆಯ ಕೂದಲನ್ನು ಕತ್ತರಿಸಿದ್ದಾಳೆ. ಈ ಘಟನೆ ಆಕೆಯನ್ನು ತೀವ್ರ ಆಘಾತಕ್ಕೀಡು ಮಾಡಿತು. ಅವರು ನನ್ನನ್ನು ಸಾಯಿಸುತ್ತಾರೆ. ನಾನು ಕಾಲೇಜಿಗೆ ಹೋಗುವುದಿಲ್ಲ ಎಂದು ಆಕೆ ನಿರಂತರವಾಗಿ ಹೇಳುತ್ತಿದ್ದಳು. ಹೀಗಾಗಿ ಸೆಪ್ಟೆಂಬರ್ 20ರಂದು ನಾನು ಆಕೆಯ ಇಷ್ಟದಂತೆ ಕಂಪ್ಯೂಟರ್ ಅಕಾಡೆಮಿಗೆ ಸೇರಿಸಿದ್ದೆ. ಆದರೆ ಆಕೆಯ ಸ್ಥಿತಿ ಮಾತ್ರ ಸುಧಾರಿಸಲೇ ಇಲ್ಲ. ನಾನು ಆಕೆಯನ್ನು ಧರ್ಮಶಾಲಾದ ವೈದ್ಯರ ಬಳಿ ಕರೆದೊಯ್ದೆ. ಆಕೆಯ ಚಿಕಿತ್ಸೆಗಾಗಿ ನಾನು ಹಲವು ಆಸ್ಪತ್ರೆಗಳಿಗೆ ಅಲೆದಾಡಿದೆ ಎಂದು ಆಕೆಯ ತಂದೆ ಹೇಳಿದ್ದಾರೆ.

ಇದನ್ನೂ ಓದಿ: ನಮ್ಗೂ ಪ್ರೈವೆಸಿ ಬೇಕು ಗುರು: ಪ್ರಾಣಿಗಳ ಚಲನವಲನದ ವೀಕ್ಷಣೆಗೆ ಇರಿಸಿದ ಕ್ಯಾಮರಾ ಎತ್ತಿ ಎಸೆದ ಆನೆ

ಹಿಮಾಚಲ ಪ್ರದೇಶ ಹಾಗೂ ಪಂಜಾಬ್‌ನ ಹಲವು ಆಸ್ಪತ್ರೆಗಳಲ್ಲಿ ಆ ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡಲಾಗಿದೆ. ಸಾವಿನ ಸಮಯದಲ್ಲಿ ಆಕೆಗೆ ಲೂಧಿಯಾನದ ದಯಾನಂದ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಂತ್ರಸ್ತೆಗೆ 7 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಸಾವಿಗೆ ನಿಖರ ಕಾರಣ ಏನಿರಬಹುದು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ನಾವು ವೈದ್ಯಕೀಯ ದಾಖಲೆಗಳನ್ನು ಪಡೆದುಕೊಂಡಿದ್ದೇವೆ. ಹಲವು ಆರೋಪಗಳು ಕೇಳಿ ಬಂದಿವೆ. ನಾವು ಎಲ್ಲಾ ಆರೋಪಗಳ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಪಿ ಹೇಳಿದ್ದಾರೆ.

View post on Instagram