ನಿರ್ಭಯಾ ರೇಪಿಸ್ಟ್‌ಗಳನ್ನು ಗಲ್ಲಿಗೇರಿಸುವ ಪವನ್‌ಗೆ ನಟ ಜಗ್ಗೇಶ್‌ರಿಂದ 1 ಲಕ್ಷ ರೂ!

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಪ್ರಕರಣದ ದೋಷಿಗಳಿಗೆ ಜನವರಿ 22 ರಂದು ಗಲ್ಲಿಗೇರಿಸಲು ದಿನಾಂಕ ನಿಗಧಿಯಾಗಿದೆ.  ಅಪರಾಧಿಗಳನ್ನು ಗಲ್ಲಿಗೇರಿಸಲಿರುವ ಜವಾಬ್ದಾರಿಯನ್ನು ಯುಪಿ ಪೊಲೀಸರು ಹ್ಯಾಂಗ್‌ಮನ್ ಪವನ್‌ ಜಲ್ಲಾದ್‌ಗೆ ವಹಿಸಿದ್ದಾರೆ. ಸದ್ಯ ಮಗಳ ಮದುವೆ ತಯಾರಿಯಲ್ಲಿರುವ ಪವನ್‌ಗೆ ತಾನು 1 ಲಕ್ಷ ರೂಪಾಯಿ ನೀಡುವುದಾಗಿ ಕನ್ನಡ ನಟ ಜಗ್ಗೇಶ್ ಘೋಷಿಸಿದ್ದಾರೆ.


ಸಿಯಾಚಿನ್‌ನಲ್ಲಿ ಸೇನಾ ಮುಖ್ಯಸ್ಥ: ಜೋಶ್ ಕಂಡು ದುಶ್ಮನ್ ಅಸ್ವಸ್ಥ!

ನೂತನ ಸೇನಾ ಮುಖ್ಯಸ್ಥ ಜನರಲ್ ಮುಕುಂದ್ ನಾರವಾನೆ ಇಂದು ಸಿಯಾಚಿನ್ ಗಡಿಗೆ ಭೇಟಿ ನೀಡಿ ಯೋಧರೊಂದಿಗೆ ಸಮಾಲೋಚನೆ ನಡೆಸಿದರು. ಇನ್ನು ಸೇನಾ ಮುಖ್ಯಸ್ಥರ ಸಿಯಾಚಿನ್ ಭೇಟಿ, ನೆರೆಯ ಪಾಕಿಸ್ತಾನದ ಎದೆಬಡಿತ ಹೆಚ್ಚಿಸಿದೆ.

ಅಮಿತ್ ಶಾಗೆ ವಿರೋಧ: ವಕೀಲೆಯನ್ನು ಮನೆಯಿಂದ ಹೊರದಬ್ಬಿದ ಮಾಲೀಕ!.

 ಲಾಜ್ಪತ್ ನಗರಕ್ಕೆ ಪೌರತ್ವ ಕಾಯ್ದೆ ಪರ ಮಾತನಾಡಲು ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ 'ಪೋಸ್ಟರ್' ತೋರಿಸಿ ವಿರೋಧ ವ್ಯಕ್ತಪಡಿಸಿದ್ದ ಯುವತಿಯರನ್ನು ಮಾಲೀಕನೊಬ್ಬ ಮನೆಯಿಂದ ಹೊರ ಹಾಖಿರುವ ಘಟನೆ ಬೆಳಕಿಗೆ ಬಂದಿದೆ. ಇವರಲ್ಲಿ ಹೈಕೋರ್ಟ್ ನಲ್ಲಿ ವಕೀಲೆಯಾಗಿರುವ ಯುವತಿಯೊಬ್ಬಳು ಬೆಡ್ ಶೀಟ್ ಮೇಲೆ ಕಲರ್ ಸ್ಪ್ರೇ ಮೂಲಕ ಪೌರತ್ವ ಕಾಯ್ದೆ ವಿರೋಧೀ ಘೋಷಣೆ ಬರೆದು, ಅಮಿತ್ ಶಾ ತೆರಳುತ್ತಿದ್ದ ಹಾದಿಯಲ್ಲಿ ಪ್ರದರ್ಶಿಸಿದ್ದರು.

ಇದು ಮಮತೆಯ ತಿರುವು: ಸಿಎಎ ವಿರೋಧಿಗಳಿಂದ ದೂರದ ಕುರುಹು!...

 ರಾಜಕಾರಣವಲ್ಲದೇ ಮತ್ತಿನ್ನೇನ್ನು ತಾನೆ ತಿರುವು ಪಡೆಯಲು ಸಾಧ್ಯ. ಚಲಿಸುವುದೆಲ್ಲಾ ತಿರುಗಲೇಬೇಕು. ಇದು ಸದ್ಯ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಅನ್ವಯ. ಮೋದಿ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ಕಡು ವಿರೋಧಿ ನೇತಾರರಲ್ಲಿ ಒಬ್ವರಾದ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಇದೇ ಧ್ವನಿಯ ವಿಪಕ್ಷ ನಾಯಕರಿಂದ ಅಂತರ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

ಸಂಪುಟ ವಿಸ್ತರಣೆ ಚರ್ಚೆಗೆ 12, 13ಕ್ಕೆ ಸಿಎಂ ದಿಲ್ಲಿಗೆ?

ಪಕ್ಷದ ಹೈಕಮಾಂಡ್‌ ಜೊತೆ ಚರ್ಚಿಸುವ ಸಂಬಂಧ ಇದೇ ತಿಂಗಳ 12 ಅಥವಾ 13ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದೆಹಲಿಗೆ ತೆರಳುವ ಸಾಧ್ಯತೆಯಿದೆ. ಈ ವೇಳೆ ಸಂಪುಟ ವಿಸ್ತರಣೆ ಸೇರಿದಂತೆ ವಿವಿಧ ವಿಚಾರಗಳ ಚರ್ಚೆ ನಡೆಯಲಿದೆ. 


ಫ್ರೀ ಕಾಶ್ಮಿರ ಪ್ಲೆಕಾರ್ಡ್: ಸ್ವಯಂ ಪ್ರೇರಿತ ದೂರು ದಾಖಲು

ಮೈಸೂರು ವಿವಿಯಲ್ಲಿ ಫ್ರೀ ಕಾಶ್ಮೀರ ಪ್ಲೆಕಾರ್ಡ್ ತೋರಿಸಿದ ವಿಚಾರವಾಗಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಭಾಗಿಯಾದವರ ಗುರುತು ಪತ್ತೆಗೆ ತನಿಖೆ ಆರಂಭವಾಗಿದೆ.

2020ರ ಮೊದಲ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್ ಪ್ರಕಟ

2020ರ ಮೊದಲ ಐಸಿಸಿ ಟೆಸ್ಟ್ ಶ್ರೇಯಾಂಕ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಹಾಗೂ ಪ್ಯಾಟ್ ಕಮಿನ್ಸ್ ಬೌಲಿಂಗ್‌ನಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. 

ವಿಘ್ನೇಶ್ ಶಿವನ್‌ ಕೈ ಬಿಟ್ರಂತೆ ನಯನತಾರಾ; ಮದ್ವೆ ಎಲ್ಲಾ ಸುಳ್ಳಾ?

ದಾಂಪತ್ಯ ಜೀವನಕ್ಕೆ ಸಜ್ಜಾಗುತ್ತಿದ್ದ ನಯನತಾರಾ ಇದ್ದಕ್ಕಿದ್ದಂತೆ ವಿಘ್ನೇಶ್‌ ಜೊತೆ ಬ್ರೇಕಪ್ ಮಾಡಿಕೊಳ್ಳಲು ಕಾರಣವಾದ್ರೂ ಏನು? ಇದೆಲ್ಲಾ ಸೋಷಿಯಲ್ ಮೀಡಿಯಾ ಕ್ರಿಯೇಟ್‌ ಮಾಡಿದ್ದಾ? ಈ ಸುದ್ದಿಯ ಸತ್ಯಾಸತ್ಯತೆ ಬಹಿರಂಗವಾಗಿದೆ.

ಮಗಳ ಮದುವೆಗೆ ಸೆಗಣಿ ಪೈಂಟ್ ಕಾರು; ಸಮಾರಂಭದಲ್ಲಿ ಅಪ್ಪ ರಾಕಿಂಗ್!

ಮದುವೆ ಸ್ಮರಣೀಯವಾಗಿಸಲು ಅನೇಕ ಕಸರತ್ತುಗಳನ್ನು ಮಾಡುತ್ತಾರೆ. ಅದರಲ್ಲೂ ಅಪ್ಪಂದಿರು ತಮ್ಮ ಮಗಳ ಮದುವೆಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅತ್ಯಂತ ದುಬಾರಿ ಕಾರಿನ ಮೂಲಕ, ಹೆಲಿಕಾಪ್ಟರ್ ಮೂಲಕ, ಆನೆ, ಕುದುರೆ ಮೂಲಕ ಮಗಳನ್ನು ಮಂಟಪಕ್ಕೆ ಕರೆತಂದ ಊದಾಹರಣೆಗಳನ್ನು ನಾವು ನೋಡಿದ್ದೇವೆ. ಆದರೆ ತನ್ನ ಮಗಳನ್ನು ಸೆಗಣಿ ಮೆತ್ತಿದ ಕಾರಿನಲ್ಲಿ ಮಂಟಪಕ್ಕೆ ಕರೆ ತಂದ ಘಟನೆ ನಡೆದಿದೆ. ಇದರ ಕಾರಣವೂ ಅಷ್ಟೇ ಇಂಟ್ರೆಸ್ಟಿಂಗ್.

ಮೊದ್ಲು ಬಡಿದಾಡೋದು ನಿಲ್ಸಿ: ಸಿಎಎ ವಿಚಾರಣೆ ಆಮೇಲೆ ಎಂದ ಸುಪ್ರೀಂ

ಸಿಎಎ ಜಾರಿ ಕುರಿತಂತೆ ಕಾಯ್ದೆಯ ಪರ ಹೋರಾಟಗಾರರಿಗೆ ಹಿನ್ನಡೆಯಾಗಿದ್ದು , ಶೀಘ್ರ ಜಾರಿಗೆ ನ್ಯಾಯಾಲಯದ ಅನುಮೋದನೆ ಪಡೆಯಬೇಕೆಂಬ ಇರಾದೆಗೆ ಸುಪ್ರೀಂಕೋರ್ಟ್ ಬ್ರೇಕ್ ಹಾಕಿದೆ. ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಸಾಂವಿಧಾನಿಕ ಎಂದು ಘೋಷಿಸಿ ಅದನ್ನು ಎಲ್ಲಾ ರಾಜ್ಯಗಳು ಜಾರಿಗೆ ತರುವಂತೆ ಆದೇಶ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.