ಅಮಿತ್ ಶಾಗೆ ವಿರೋಧ: ವಕೀಲೆಯನ್ನು ಮನೆಯಿಂದ ಹೊರದಬ್ಬಿದ ಮಾಲೀಕ!

ಸಿಎಎ ಕಿಚ್ಚು, ಅಮಿತ್ ಶಾ ವಿರೋಧಿಸಿದ ವಕೀಲೆಗೆ ಭಾರೀ ವಿರೋಧ| ಮನೆಯಿಂದ ಹೊರ ಹಾಕಿದ ಮಾಲೀಕ| ತಂದೆ ಬಂದ ಕೂಡಲೇ ದೂರುಗಳ ಸುರಿಮಳೆ

Keralite Women Who Protested Amit Shah Lajpat Nagar Rally Evicted asked to vacate Delhi house

ನವದೆಹಲಿ[ಜ.09]: ಲಾಜ್ಪತ್ ನಗರಕ್ಕೆ ಪೌರತ್ವ ಕಾಯ್ದೆ ಪರ ಮಾತನಾಡಲು ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ 'ಪೋಸ್ಟರ್' ತೋರಿಸಿ ವಿರೋಧ ವ್ಯಕ್ತಪಡಿಸಿದ್ದ ಯುವತಿಯರನ್ನು ಮಾಲೀಕನೊಬ್ಬ ಮನೆಯಿಂದ ಹೊರ ಹಾಖಿರುವ ಘಟನೆ ಬೆಳಕಿಗೆ ಬಂದಿದೆ. ಇವರಲ್ಲಿ ಹೈಕೋರ್ಟ್ ನಲ್ಲಿ ವಕೀಲೆಯಾಗಿರುವ ಯುವತಿಯೊಬ್ಬಳು ಬೆಡ್ ಶೀಟ್ ಮೇಲೆ ಕಲರ್ ಸ್ಪ್ರೇ ಮೂಲಕ ಪೌರತ್ವ ಕಾಯ್ದೆ ವಿರೋಧೀ ಘೋಷಣೆ ಬರೆದು, ಅಮಿತ್ ಶಾ ತೆರಳುತ್ತಿದ್ದ ಹಾದಿಯಲ್ಲಿ ಪ್ರದರ್ಶಿಸಿದ್ದರು.

‘ತಂದೆ, ತಾಯಿ ದಾಖಲೆ ಎಲ್ಲಿಂದ ತರಲಿ’ ಸಾಹಿತಿ ದೇವನೂರು ಮಹಾದೇವ ಕಿಡಿ

ಪೋಸ್ಟರ್ ರೂಪ ಕೊಟ್ಟಿದ್ದ ಬೆಡ್ ಶೀಟ್ ನ್ನು ಈ ಯುವತಿ ತಾನು ಉಳಿದುಕೊಂಡಿದ್ದ ಬಾಡಿಗೆ ಮನೆಯ ಮೂರನೇ ಅಂತಸ್ತಿನಿಂದ ಬಾಲ್ಕನಿಯಲ್ಲಿ ಹಾರಿಸಿ ವಿರೋಧ ವ್ಯಕ್ತಪಡಿಸಿದ್ದರು. ತಮ್ಮ ನಡೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಅಡ್ವೊಕೇಟ್ ಸೂರ್ಯಾ ರಾಜ್ ಪನ್ನಾ 'ನಾನು ಕೇಂದ್ರ ಗೃಹ ಸಚಿವ ಭೇಟಿ ನೀಡಿದಾಗ ವಿರೋಧಿಸಿದ್ದು ನಿಜ, ಆದರೆ ಶಾಂತಿಯುತವಾಗಿ ನಾನು ಪ್ರತಿಭಟಿಸಿದ್ದೆ' ಎಂದಿದ್ದಾರೆ. ಸೂರ್ಯಾರವರ ಈ ನಡೆಯನ್ನು ಸುಮಾರು 150 ಮಂದಿ ವಿರೋಧಿಸಿದ್ದು, ಅವರನ್ನು ಮನೆಯಿಂಣದ ಹೊರ ಹಾಕುವಂತೆ ಮಾಲೀಕರ ಮೇಲೆ ಒತ್ತಡ ಹೇರಿದ್ದಾರೆ. ಹೀಗಾಗಿ ಮನೆ ಮಾಲೀಕರೂ ಅವರನ್ನು ಹೊರ ಹಾಕಿದ್ದಾರೆ.

ತಂದೆಗೆ ದೂರು ನೀಡಿದರು

ವಕೀಲೆಯ ತಂದೆ ಬಾಡಿಗೆ ಮನೆ ಬಳಿ ಬಂದಾಗ ಮಾಲೀಕರು ಬಂದು ಮಗಳನ್ನು ಕೂಡಲೇ ಕರೆದೊಯ್ಯಿರಿ, ಮನೆ ಖಾಲಿ ಮಾಡಿ. ಈಕೆಗೆ ಸಂಸ್ಕೃತಿ ಕೊಡದೇ ಬೆಳೆಸಿದ್ದೀರಿ ಎಂದು ಗುಡುಗಿದ್ದಾರೆನ್ನಲಾಗಿದೆ. 

ಇನ್ನು ಒಂದೇ ಬಾರಿ ನೇಕ ಮಂದಿ ತನ್ನ ವಿರುದ್ಧ ನಿಂತಿರುವುದನ್ನು ಕಂಡು ವಕೀಲೆ ಕೂಡಾ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಹೀಗಾಗಿ ಅವರು ಕೋಣೆ ಸೇರಿ ಚಿಲಕ ಭದ್ರವಾಗಿ ಹಾಕಿಕೊಂಡಿದ್ದಾರೆ. ಆದರೆ ಆ ಪ್ರದೇಶದ ಜನರು ಹಾಗೂ ಮಾಲೀಕನ ಒತ್ತಡದಿಂದಾಗಿ ಮನೆ ಖಾಲಿ ಮಾಡಿದ್ದಾರೆ. 

'ದೇಶ ವಿರೋಧಿಗಳಿಗೆ ಸಂಬಂಧಿಸಿದಂತೆ ಸೋಮಶೇಖರ್ ರೆಡ್ಡಿ ಹೇಳಿಕೆ‌ ನೀಡಿದ್ದಾರೆ'

Latest Videos
Follow Us:
Download App:
  • android
  • ios