ತಮಿಳು ಹಾಗೂ ತೆಲುಗು ಚಿತ್ರರಂಗದ ಓನ್ಲಿ ಬ್ಯೂಟಿ ಕ್ವೀನ್ ಅಂದ್ರೆ ನಯನತಾರಾ, ಆಕೆಯ ಅಭಿನಯಕ್ಕೆ ಫಿದಾ ಆದವರು ಒಬ್ರಾ, ಇಬ್ರಾ? ವೃತಿ ಜೀವನದಲ್ಲಿ ಏನೇ ನಿರ್ಧಾರಿಸಿದರೂ ಅಭಿಮಾನಿಗಳು ಸೈ ಎನ್ನುತ್ತಾರೆ ಆದರೆ ವೈಯಕ್ತಿಕ ಜೀವನದ ಗೊಂದಲ ಯಾರಿಗೂ ಆರ್ಥವಾಗಿಲ್ಲ ನೋಡಿ...

ಇಂಡಿಯಾ ವರ್ಸಸ್ ಇಂಗ್ಲೆಂಡ್; ಇದು ಕ್ರಿಕೆಟ್ ಅಲ್ಲ!

ನಟ ಹಾಗೂ ಡ್ಯಾನ್ಸರ್ ಪ್ರಭುದೇವ ಅವರನ್ನು ಪ್ರೀತಿ ನಟನೆಗೆ ಬೈ ಹೇಳಿ ದಾಂಪತ್ಯ ಜೀವನಕ್ಕೆ ಹಾಯ್ ಹೇಳಲು ರೆಡಿಯಾಗಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದ ಇಬ್ಬರು ದೂರವಾದರು. ಮನಸ್ಸು ಮುರಿದ ನಂತರ ನಯನಾ ಮತ್ತೆ ಚಿತ್ರರಂಗದಲ್ಲಿ ತೊಡಗಿಸಿಕೊಂಡು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದು ಇದೀಗ ಇತಿಹಾಸ. 

ಈ ನಡುವೆ ವಿಘ್ನೇಶ್ ಶಿವನ್ ಡೈರೆಕ್ಷನ್‌ನಲ್ಲಿ ಮೂಡಿ ಬಂದ ಚಿತ್ರ 'ನಾನುಮ್ ರೌಡಿದಾನ್'ನಲ್ಲಿ ನಯನತಾರಾ ನಾಯಕಿಯಾಗಿ ಮಿಂಚಿದ್ದರು. ಅಲ್ಲಿ ಮತ್ತೊಮ್ಮೆ ನಯನಾತಾರಾಗೆ ಪ್ರೀತಿ ಚಿಗುರೊಡೆದಿತ್ತು. ಇಬ್ಬರು ಪ್ರೀತಿಸಿ ಮದುವೆಯಾಗಲು ಸಜ್ಜಾದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ನಡುವೆ ಮನಸ್ತಾಪ ಉಂಟಾದ ಕಾರಣ ಮದುವೆ ಮುರಿದು ಬಿದ್ದಿದೆ, ಎನ್ನಲಾಗುತ್ತಿದೆ. ವಿಚಾರ ನಯನತಾರಾ ಹಾಗೂ ವಿಘ್ನೇಶ್‌ಗೆ ತಲುಪುತ್ತಿದ್ದಂತೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇಬ್ಬರು ಒಟ್ಟಾಗಿರುವ ಫೋಟೋ ಶೇರ್ ಮಾಡಿಕೊಂಡು ಗಾಸಿಪ್‌ಗೆ ಬ್ರೇಕ್‌ ಹಾಕಿದ್ದಾರೆ.

ಸೋಷಿಯಲ್ ಮೀಡಿಯಾ ಅಂದ್ರೆ ಬೇಡವಾದದ್ದು ಹರಿದಾಡುತ್ತಲೇ ಇರುತ್ತದೆ. ಅದಕ್ಕೆ ಇಂಥ ಕ್ರಮಗಳಿಂದ ಬ್ರೇಕ್ ಹಾಕಬೇಕಾಗಿರುವುದು ಸೆಲೆಬ್ರಿಟಿಗಳ ಕರ್ತವ್ಯ.