ಸಿಯಾಚಿನ್‌ನಲ್ಲಿ ಸೇನಾ ಮುಖ್ಯಸ್ಥ: ಜೋಶ್ ಕಂಡು ದುಶ್ಮನ್ ಅಸ್ವಸ್ಥ!

ಸಿಯಾಚಿನ್ ಗಡಿಗೆ ಭೇಟಿ ನೀಡಿದ ನೂತನ ಸೇನಾ ಮುಖ್ಯಸ್ಥ| ಯೋಧರೊಂದಿಗೆ ಸಮಾಲೋಚನೆ ನಡೆಸಿದ ಜನರಲ್ ಮುಕುಂದ್ ನಾರವಾನೆ| ಸೇನಾ ಮುಖ್ಯಸ್ಥರಾಗಿ ಜನರಲ್ ನಾರವಾನೆ ಮೊದಲ ಸಿಯಾಚಿನ್ ಭೇಟಿ| ಸಿಯಾಚಿನ್ ಗಡಿ ದೇಶದ ಹೆಮ್ಮೆ ಎಂದು ಹೇಳಿದ ಜನರಲ್ ನಾರವಾನೆ| ಗಡಿ ಸುರಕ್ಷಿತಗೆ ಸೇನೆ ಸರ್ವ ಸನ್ನದ್ಧವಾಗಿದೆ ಎಂದ ನೂತನ ಸೇನಾ ಮುಖ್ಯಸ್ಥ| ಪಾಕಿಸ್ತಾನದ ಎದೆಬಡಿತ ಹೆಚ್ಚಿಸಿದ ಸೇನಾ ಮುಖ್ಯಸ್ಥರ ಸಿಯಾಚಿನ್ ಭೇಟಿ|

Army Chief Of Staff General Mukund Naravane Visits Siachen Border

ಸಿಯಾಚಿನ್(ಜ.09): ನೂತನ ಸೇನಾ ಮುಖ್ಯಸ್ಥ ಜನರಲ್ ಮುಕುಂದ್ ನಾರವಾನೆ ಇಂದು ಸಿಯಾಚಿನ್ ಗಡಿಗೆ ಭೇಟಿ ನೀಡಿ ಯೋಧರೊಂದಿಗೆ ಸಮಾಲೋಚನೆ ನಡೆಸಿದರು.

ಸಿಯಾಚಿನ್ ಯುದ್ಧ ಸ್ಮಾರಕಕ್ಕೆ ಗೌರವ ವಂದನೆ ಸಲ್ಲಿಸಿದ ಮುಕುಂದ್ ನಾರವಾನೆ, ತಮ್ಮ ಸಹೋದ್ಯೋಗಿಗಳೊಂದಿಗಿನ ಆತ್ಮೀಯ ಭೇಟಿಗೆ ಸಾಕ್ಷಿಯಾದರು.

ಪಾಕ್ ಆಕ್ರಮಿತ ಕಾಶ್ಮೀರ ಟಾರ್ಗೆಟ್ ಮಾಡಲು ಸಿದ್ಧ: ಸೇನಾ ಮುಖ್ಯಸ್ಥ!

ಈ ವೇಳೆ ಮಾತನಾಡಿದ ಜನರಲ್ ನಾರವಾನೆ, ಭಾರತೀಯ ಭೂಸೇನೆ ಮುಖ್ಯಸ್ಥರಾಗಿ ಮೊದಲ ಬಾರಿಗೆ ಸಿಯಾಚಿನ್ ಗಡಿಗೆ ಭೇಟಿ ನೀಡಿರುವುದು ಸಂತಸ ತಂದಿದೆ ಎಂದು ಹೇಳಿದರು.

ಸಿಯಾಚಿನ್ ಗಡಿ ದೇಶದ ಹೆಮ್ಮೆ ಎಂದು ಹೇಳಿರುವ ನಾರವಾನೆ, ನಮ್ಮ ಗಡಿ ಸುರಕ್ಷಿತಗೆ ಸೇನೆ ಸರ್ವ ಸನ್ನದ್ಧವಾಗಿದೆ ಎಂಬ ಸಂದೇಶ ಸಿಯಾಚಿನ್ ನೀರ್ಗಲ್ಲುಗಳನ್ನು ಸೀಳಿಯೇ ದೇಶ ತಲುಪುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಚೀನಾ ಮೇಲೆ ನಿಗಾ ಎಂದ ಸೇನಾ ಮುಖ್ಯಸ್ಥ: ನಾರವಾನೆ ಮಾತಿಗೆ ಡ್ರ್ಯಾಗನ್ ಅಸ್ವಸ್ಥ!

ಇನ್ನು ಸೇನಾ ಮುಖ್ಯಸ್ಥರ ಸಿಯಾಚಿನ್ ಭೇಟಿ, ನೆರೆಯ ಪಾಕಿಸ್ತಾನದ ಎದೆಬಡಿತ ಹೆಚ್ಚಿಸಿದ್ದು, ಅತ್ತ ಚೀನಾ ಕೂಡ ಈ ನಡೆಯನ್ನು ವಾರೆಗಣ್ಣಿನಿಂದ ನೋಡಿದೆ.

Latest Videos
Follow Us:
Download App:
  • android
  • ios