Asianet Suvarna News Asianet Suvarna News

ಭಾರತ, ಪ್ರಧಾನಿ ಮೋದಿ ಬಳಿ ಅಧಿಕೃತ ಕ್ಷಮೆ ಕೇಳಿ, ಮಾಲ್ಡೀವ್ಸ್ ಅಧ್ಯಕ್ಷರ ಮೇಲೆ ವಿಪಕ್ಷಗಳ ಒತ್ತಡ!

ಭಾರತವನ್ನು ಕೆಣಕಿದ ಮಾಲ್ಡೀವ್ಸ್‌ನಲ್ಲಿ ಅಲ್ಲೋಲಕಲ್ಲೋಲವಾಗಿದೆ. ರಾಜತಾಂತ್ರಿಕ ಸಂಬಂಧ ಹಳಸಿದೆ, ರಾಜಕೀಯ ಡೋಲಾಯಮಾನವಾಗಿದೆ. ಆಡಳಿತ ಹಳ್ಳ ಹಿಡಿದಿದೆ. ಮಾಲ್ಡೀವ್ಸ್ ಅಧ್ಯಕ್ಷ ಪದಚ್ಯುತಿ ಭೀತಿ ಎದುರಾಗಿದೆ. ಇದರ ಬೆನ್ನಲ್ಲೇ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝಿ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ.
 

Maldives opposition demand President Muizzu to issue formally apologise to Indian govt and PM Modi ckm
Author
First Published Jan 30, 2024, 5:32 PM IST

ಮಾಲ್ಡೀವ್ಸ್(ಜ.30) ಭಾರತ ವಿರುದ್ಧ ಕಾಲುಕೆರೆದು ಬಂದ ಮಾಲ್ಡೀವ್ಸ್ ಇದೀಗ ಪೇಚಿಗೆ ಸಿಲುಕಿದೆ. ಪ್ರವಾಸೋದ್ಯಮದಲ್ಲಿ ಮಾಲ್ಡೀವ್ಸ್ ಭಾರಿ ಹಿನ್ನಡೆ ಅನುಭವಿಸುತ್ತಿದೆ. ಇತ್ತ ಆರ್ಥಿಕ ಸಂಕಷ್ಟ, ರಾಜಕೀಯ ತಲ್ಲಣ, ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿದೆ. ಭಾರತ ವಿರೋಧಿ ಹಾಗೂ ಚೀನಾ ಪರ ನಿಲುವು ಹೊಂದಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯುಝಿ ಹಾಗೂ ಸರ್ಕಾರದ ವಿರುದ್ದ ಮಾಲ್ಡೀವ್ಸ್ ವಿಪಕ್ಷಗಳ ಹೋರಾಟ ತೀವ್ರಗೊಂಡಿದೆ. ಅಧ್ಯಕ್ಷರ ಪದಚ್ಯುತಿಗೆ ಹಕ್ಕು ಮಂಡಿಸಿದೆ. ಇದರ ನಡುವೆ ವಿಪಕ್ಷಗಳ ಹೊಸ ಬೇಡಿಕೆಯನ್ನು ಮುಂದಿಟ್ಟಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯುಝಿ ತಕ್ಷಣವೇ ಭಾರತ ಹಾಗೂ ಪ್ರಧಾನಿ ಮೋದಿ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ.

ಮಾಲ್ಡೀವ್ಸ್‌ನ ಜುಮ್ಹೊರೆ ಪಾರ್ಟಿ ನಾಯಕ ಖಾಸಿಮ್ ಇಬ್ರಾಹಿಂ ಈ ಬೇಡಿಕೆ ಮುಂದಿಟ್ಟಿದ್ದಾರೆ. ಮಾಲ್ಡೀವ್ಸ್ ಸಚಿವರು ಭಾರತ ಹಾಗೂ ಪ್ರಧಾನಿ ಮೋದಿಯನ್ನು ನಿಂದಿಸಿ ಟ್ವೀಟ್ ಮಾಡಿದ ಬಳಿಕ ಮಾಲ್ಡೀವ್ಸ್ ಸರ್ಕಾರವೇ ಅಲುಗಾಡುತ್ತಿದೆ. ಚೀನಾ ಪ್ರವಾಸದ ಬಳಿಕ ಸ್ವತಃ ಅಧ್ಯಕ್ಷರೇ ದರ್ಪದ ಮಾತುಗನ್ನಾಡಿದ್ದಾರೆ. ಭಾರತವನ್ನು ಪರೋಕ್ಷವಾಗಿ ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ಮಾಲ್ಡೀವ್ಸ್‌ನಲ್ಲಿನ ಈ ಪರಿಸ್ಥಿತಿಗೆ ಅಧ್ಯಕ್ಷ ಮೊಹಮ್ಮದ್ ಮುಯಿಝಿ ಕಾರಣ. ತಕ್ಷಣವೇ ಭಾರತ ಹಾಗೂ ಪ್ರಧಾನಿ ಮೋದಿ ಬಳಿಕ ಅಧಿಕೃತ ಕ್ಷಮೆ ಕೇಳಬೇಕು ಎಂದು ಖಾಸಿಮ್ ಆಗ್ರಹಿಸಿದ್ದಾರೆ. 

 

ಮಾಲ್ಡೀವ್ಸ್‌ಗೆ ಮತ್ತೊಂದು ಆಘಾತ, ಗರಿಷ್ಠ ಪ್ರವಾಸಿಗರ ಭೇಟಿಯಲ್ಲಿ 3ರಿಂದ 5ನೇ ಸ್ಥಾನಕ್ಕೆ ಇಳಿದ ಭಾರತ

ನೆರೆ ರಾಷ್ಟ್ರದೊಂದಿಗೆ ದ್ವೇಷ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಮಾಲ್ಡೀವ್ಸ್ ಅಭಿವೃದ್ಧಿಯಲ್ಲಿ ಭಾರತ ಹಾಗೂ ಭಾರತೀಯರ ಕೊಡುಗೆ ಇದೆ. ಉತ್ತಮ ಬಾಂಧವ್ಯದ ಮೂಲಕ ಮಾತ್ರ ಮಾಲ್ಡೀವ್ಸ್ ಸರ್ವತೋಮುಖ ಅಭಿವೃದ್ಧಿ ಕಾಣಲು ಸಾಧ್ಯ. ಇಷ್ಟೇ ಅಲ್ಲ ಯಾವುದೇ ರಾಷ್ಟ್ರಗಳ ಹಸ್ತಕ್ಷೇಪವಿಲ್ಲದೆ ಅಧಿಕಾರ ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ಭಾರತ ವಿರುದ್ಧವೇ ಮುಯಿಝಿ ಮುಗಿಬಿದ್ದಿರುವುದು ಸರಿಯಲ್ಲ. ಪ್ರವಾಸೋದ್ಯಮ ಇಲಾಖೆ ಬಹಿರಂಗ ಪಡಿಸಿದ ಅಂಕಿ ಅಂಶದಲ್ಲಿ ಭಾರತದಿಂದ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಕುಸಿದಿದೆ. ಇದರ ಆರ್ಥಿಕ ನಷ್ಟವಾಗಿರುವ ಮಾಲ್ಡೀವ್ಸ್‌ಗೆ ಹೊರತು ಭಾರತಕ್ಕಲ್ಲ ಎಂದು ಖಾಸಿಮ್ ಹೇಳಿದ್ದಾರೆ.

 

 

ಇತ್ತ ಮುಯುಝಿ ವಿರುದ್ಧ ವಿಪಕ್ಷಗಳು ಪದಚ್ಯುತಿ ಹಕ್ಕು ಮಂಡಿಸಿದೆ. ದೇಶದ ಸಂಸತ್ತಿನಲ್ಲಿ ಬಹುಮತ ಹೊಂದಿರುವ ಪ್ರಮುಖ ಪ್ರತಿಪಕ್ಷವಾಗಿರುವ ಮಾಲ್ಡೀವಿಯನ್‌ ಡೆಮಾಕ್ರೆಟಿಕ್‌ ಪಾರ್ಟಿ (ಎಂಡಿಪಿ) ಸದಸ್ಯರು ಈಗಾಗಲೇ ಅಧ್ಯಕ್ಷರ ವಿರುದ್ಧ ವಾಗ್ದಂಡನೆ ಮಸೂದೆ ಮಂಡಿಸಲು ಅಗತ್ಯವಿರುವಷ್ಟು ಸಹಿ ಸಂಗ್ರಹಿಸಿದ್ದಾರೆ. ಸಚಿವರ ನೇಮಕಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಹೊಡೆದಾಟ ನಡೆದ ಮರುದಿನವೇ ಈ ಬೆಳವಣಿಗೆ ನಡೆದಿದೆ. ಒಟ್ಟು 34 ಸಂಸದರು ಅಧ್ಯಕ್ಷರ ಪದಚ್ಯುತಿ ಮಸೂದೆ ಮಂಡನೆಗೆ ಸಹಿ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಭಾರತ ವಿರೋಧಿ ಮಾಲ್ಡೀವ್ಸ್ ಸರ್ಕಾರದ ವಿರುದ್ಧ ವಿಪಕ್ಷದ ಪ್ರತಿಭಟನೆ, ಸಂಸತ್ತಿನಲ್ಲಿ ಮಾರಾಮಾರಿ!

Latest Videos
Follow Us:
Download App:
  • android
  • ios