ಭಾರತ ವಿರೋಧಿ, ಚೀನಾ ಕೈಗೊಂಬೆಯಾಗಿ ಆಡಳಿತ ನಡೆಸುತ್ತಿರುವ ಮುಯಿಝಿ ನೇತೃತ್ವದ ಮಾಲ್ಡೀವ್ಸ್ ಸರ್ಕಾರದ ವಿರುದ್ಧ ಅಲ್ಲಿನ ಪ್ರತಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದೆ. ಇಂದು ಮಾಲ್ಡೀವ್ಸ್ ಸಂಸತ್ತಿನ ಮಾರಾಮಾರಿ ನಡೆದಿದೆ. ಈ ವಿಡಿಯೋಗಳು ವೈರಲ್ ಆಗಿದ್ದು, ಮಾಲ್ಡೀವ್ಸ್‌ನಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿದೆ. 

ಮಾಲ್ಡೀವ್ಸ್(ಜ.28) ಭಾರತ ವಿರೋಧ ನಿಲುವು ತಳೆದಿರುವ ಅಧ್ಯಕ್ಷ ಮುಯಿಝಿ ನೇತೃತ್ವದ ಮಾಲ್ಡೀವ್ಸ್ ಸರ್ಕಾರ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಮಾಲ್ಡೀವ್ಸ್ ಪ್ರತಿಪಕ್ಷಗಳ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಇಂದು ಮುಯಿಝಿ ಕ್ಯಾಬಿನೆಟ್ ಸಂಯೋಜನೆ ನಿರ್ಧರಿಸಲು ಸಂಸದರ ಅನುಮೋದನೆ ಮತ ನಿರ್ಧಾರ ಕೋಲಾಹಲ ಸೃಷ್ಟಿಸಿದೆ. ಸಂಸತ್ತಿನಲ್ಲಿ ವಿಪಕ್ಷಗಳ ನಾಯಕರು ಹಾಗೂ ಆಡಳಿತದ ಪಕ್ಷದ ಸಚಿವರ ನಡುವೆ ತಳ್ಳಾಟ ನೂಕಾಟ ನಡೆದಿದೆ. ಈ ಮೂಲಕ ಮಾಲ್ಡೀವ್ಸ್‌ನಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿದೆ. ಈ ವಿಡಿಯೋ ವೈರಲ್ ಆಗಿದೆ.

ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿಯ ಸಂಸದೀಯ ಸಭೆಯಲ್ಲಿ ನಾಲ್ಕು ಕ್ಯಾಬಿನೆಟ್ ಸದಸ್ಯರಿಗೆ ಅನುಮೋದನೆ ತಡೆಯಲು ವಿಪಕ್ಷಗಳು ಸಜ್ಜಾಗಿತ್ತು. 22 ಸದಸ್ಯರ ಅನುಮೋದನೆ ಪಡೆಯಲು ತಯಾರಿ ನಡೆದಿತ್ತು. ಆದರೆ ಈ ಅನುಮೋದನೆ ಪ್ರಕ್ರಿಯೆ ಸಂಪೂರ್ಣ ಜಟಾಪಟಿಯಲ್ಲಿ ಅಂತ್ಯಗೊಂಡಿದೆ. ಕಾರಣ ಸಂಸದರ ಅನುಮೋದನೆಗಾಗಿ ವಿರೋಧ ಪಕ್ಷದ ಸಂಸದರನ್ನು ಸಂಸತ್ತಿನ ಮಹಡಿಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು. ಇದು ತೀವ್ರ ಜಟಾಪಟಿಗೆ ಕಾರಣವಾಗಿದೆ. 

ಮೊಹಮ್ಮದ್‌ ಮುಯಿಜು ಭಾರತ ವಿರೋಧಿ ಧೋರಣೆಗೆ ಮಾಲ್ಡೀವ್ಸ್‌ನಲ್ಲೇ ವಿರೋಧ: ಅಭಿವೃದ್ಧಿಗೆ ಮಾರಕವೆಂದು ಎಚ್ಚರಿಕೆ

ಆಡಳಿತದ ಪಕ್ಷದ ಸದಸ್ಯರು ಸ್ಪೀಕರ್ ಚೇಂಬರ್‌ಗೆ ಮುಗ್ಗಿ ಅಧಿವೇಶನ ನಡೆಯದಂತೆ ತಡೆದಿದ್ದಾರೆ. ಇತ್ತ ವಿಪಕ್ಷ ಸದಸ್ಯರನ್ನು ಪ್ರವೇಶಿಸದಂತೆ ತಡೆದಿದ್ದಾರೆ. ಇದರಿಂದ ತಳ್ಳಾಟ ಸಂಭವಿಸಿದೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಸಂಘರ್ಷ ಮಾಲ್ಡೀವ್ಸ್‌ನಲ್ಲಿ ರಾಜಕೀಯ ಸಂಘರ್ಷ ಸೃಷ್ಟಿಸಿದೆ.

Scroll to load tweet…

ಭಾರತ ವಿರೋಧಿ ನಡೆಯಿಂದ ಭಾರಿ ಟೀಕೆಗೆ ಒಳಗಾಗಿದ್ದ ಮಾಲ್ಡೀವ್ಸ್ ಸರ್ಕಾರ ಪ್ರಧಾನಿ ಮೋದಿ ಹಾಗೂ ಭಾರತೀಯರ ವಿರುದ್ಧ ಮಾಡಿದ ಟ್ವೀಟ್‌ನಿಂದ ನಾಲ್ವರು ಮಾಲ್ಡೀವ್ಸ್ ಸಚಿವರು ಅಮಾನತ್ತಾಗಿದ್ದರು. ಇದೀಗ ಈ ನಾಲ್ವರು ಸಚಿವರನ್ನು ಮತ್ತೆ ಕ್ಯಾಬಿನೆಟ್‌ಗೆ ಸೇರಿಸಲು ಸಂಸರದ ಅನುಮೋದನೆ ಪಡೆಯಲು ಮುಯಿಝಿ ಸರ್ಕಾರ ಭಾರಿ ಪ್ಲಾನ್ ಮಾಡಿತ್ತು. ಆದರೆ ಈ ಪ್ಲಾನ್ ಜಟಾಪಟಿಯಲ್ಲೇ ಮುಳುಗಿ ಹೋಗಿದೆ.

ಮಾಲ್ಡೀವ್ಸ್‌ನತ್ತ ಚೀನಾ ಗೂಢಚರ್ಯೆ ನೌಕೆ: ಭಾರತ-ಮಾಲ್ಡೀವ್ಸ್‌ ಸಂಘರ್ಷದ ಬೆನ್ನಲ್ಲೇ ಈ ಬೆಳವಣಿಗೆ

ಆಡಳಿತರೂಡ ಪ್ರೊಗ್ರೆಸ್ಸೀವ್ ಪಾರ್ಟಿ ಆಫ್ ಮಾಲ್ಡೀವ್ಸ್ ಹಾಗೂ ಪೀಪಲ್ ನ್ಯಾಶನಲ್ ಕಾಂಗ್ರೆಸ್ ಪಕ್ಷಗಳು ಮೈತ್ರಿ ಸರ್ಕಾರ ಇದೀಗ ಇಕ್ಕಟ್ಟಿಗೆ ಸಿಲುಕಿದೆ. ನಾಲ್ವರು ಸಚಿವರನ್ನು ಮತ್ತೆ ಕ್ಯಾಬಿನೆಟ್‌ಗೆ ಸೇರ್ಪಡೆಗೊಳಿಸಲು ಅಡ್ಡಿಮಾಡುತ್ತಿರವು ವಿಪಕ್ಷಗಳು ಸರ್ಕಾರದ ಆಡಳಿತವನ್ನೇ ತಡೆ ಹಿಡಿಯುತ್ತಿದೆ ಎಂದು ಆರೋಪಿಸಿದೆ.


Scroll to load tweet…